ಮದುವೆ ಬೆನ್ನಲ್ಲೇ ಮನೆಗೆ ಹೊಸ ಅತಿಥಿ ಆಗಮನ, ಸಂತಸದಲ್ಲಿ ತೇಜಸ್ವಿ-ಶಿವಶ್ರೀ ದಂಪತಿ
Tejasvi Surya: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹ ಕೆಲ ತಿಂಗಳ ಹಿಂದೆಯಷ್ಟೇ ಅದ್ಧೂರಿಯಾಗಿ ನೆರವೇರಿತ್ತು. ಸದ್ಯ ಫ್ಯಾಮಿಲಿ ಮ್ಯಾನ್ ಆಗಿರುವ ತೇಜಸ್ವಿ ಅವರು ರಾಜಕೀಯದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಇರುವ ತೇಜಸ್ವಿ ಸೂರ್ಯ ಅವರು ಸಂತಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತೇಜಸ್ವಿ-ಶಿವಶ್ರೀ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದು, ಈ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೌದು 'ಶುಭ ಆಷಾಢ ಶುಕ್ರವಾರದಂದು ನಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಸ್ವಾಗತಿಸಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಕೂಡ ತಮ್ಮ ವಿಶೇಷ ಗಾಯನ ಮೂಲಕ ಮನೆಗೆ ಹೊಸ ಸದಸ್ಯರನ್ನು ಬರಮಾಡಿಕೊಂಡಿದ್ದಾರೆ. ನಾವು ಅವಳನ್ನು ಗೌರಿ, ಲಕ್ಷ್ಮಿ, ರಾಧೆ ಮತ್ತು ಎಲ್ಲವೂ ಎಂದು ಕರೆಯುತ್ತಿದ್ದೇವೆ. ಅವಳು ತುಂಬಾ ದೈವಿಕಳು. ಮತ್ತು ಅವಳು ಹಾಡುವುದನ್ನು ಇಷ್ಟಪಡುತ್ತಾಳೆ. ನಮ್ಮ ಹೃದಯಗಳು ನಿಜಕ್ಕೂ ತುಂಬಿವೆ' ಎಂದು ತೇಜಸ್ವಿ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ತೇಜಸ್ವಿ ಸೂರ್ಯ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅಣಕು ಸಂಸತ್ತಿನಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ 50 ವರ್ಷಗಳ ಸ್ಮರಣಾರ್ಥ ಕಾರ್ಯಕ್ರಮಕ್ಕೆ ತೆರಳಿದ್ದರು. ಆಗ ಆಂಧ್ರಪ್ರದೇಶ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮಿತ್ತ ವಂಶಿ ಕೃಷ್ಣ ಅವರು ತೇಜಸ್ವಿ ಸೂರ್ಯ ಅವರಿಗೆ ಪುಂಗನೂರು ತಳಿಯ ಕರುವನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ಬಹಳ ಸಂತಸದಿಂದ ಬೆಂಗಳೂರಿಗೆ ಕರೆತಂದು, ತೇಜಸ್ವಿ ಸೂರ್ಯ ದಂಪತಿ ತಮ್ಮ ಮನೆಯ ಸದಸ್ಯರಂತೆ ಬರಮಾಡಿಕೊಂಡಿದ್ದಾರೆ.
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಗೋಮಾತೆಯ ಆಶೀರ್ವಾದವನ್ನು ಸಂಕೇತಿಸುವ ಪವಿತ್ರ ಪುಂಗನೂರು ತಳಿಯ ಕರುವನ್ನು ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು. ತೇಜಸ್ವಿ ಸೂರ್ಯ ಅವರ ಹೊಸ ಕುಟುಂಬ ಸದಸ್ಯೆಯಾಗಿರುವ ಸುಂದರವಾದ ಪುಂಗನೂರು ಹಸುವಿನ ಸ್ವಾಗತವನ್ನು ವೀಕ್ಷಿಸಲು ತುಂಬಾ ಸಂತೋಷವಾಗಿದೆ ಎಂದು ಮಿತ್ತ ವಂಶಿ ಕೃಷ್ಣ ಎಕ್ಸ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿರುವ ತೇಜಸ್ವಿ ಸೂರ್ಯ ಅವರ ಮನೆಯ ಆಚರಣೆಗಳು ಮತ್ತು ಪ್ರೀತಿಯೊಂದಿಗೆ ಇಡೀ ಕುಟುಂಬವು ಸಂತೋಷದಿಂದ ಹೊಳೆಯುತ್ತಿತ್ತು. ಇದು ಹೃದಯಸ್ಪರ್ಶಿ ಕ್ಷಣಗಳು ಎಂದು ಆಂಧ್ರಪ್ರದೇಶ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮಿತ್ತ ವಂಶಿ ಕೃಷ್ಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೆ ತೇಜಸ್ವಿ ಸೂರ್ಯ ಅವರು ಧನ್ಯವಾದಗಳು ಸಹೋದರ ಎಂದು ಪ್ರತಿಕ್ರಿಯಿಸಿದ್ದಾರೆ.
ಪುಂಗನೂರು ತಳಿ ಹಸುವಿನ ವಿಶೇಷತೆ ಏನು?
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಎಂಬ ಊರಿನಿಂದ ಈ ತಳಿ ಬಂದಿದೆ. ಪುಂಗನೂರು ಹಸುಗಳು ವಿಶ್ವದ ಅತಿ ಚಿಕ್ಕ ಗಾತ್ರದ ಹಸುಗಳಾಗಿವೆ. ಹಸುಗಳ ಎತ್ತರ ಸಾಮಾನ್ಯವಾಗಿ 70ರಿಂದ 90 ಸೆಂ.ಮೀ. ಅಥವಾ ಸುಮಾರು 2.5 ಅಡಿಯಷ್ಟಿರುತ್ತದೆ. ಇದರ ತೂಕ 115ರಿಂದ 200 ಕೆ.ಜಿವರೆಗೆ ಇರುತ್ತದೆ. ತಿರುಪತಿ ತಿಮ್ಮಪ್ಪನಿಗೂ ಪುಂಗನೂರು ಹಸುವಿನ ಹಾಲನ್ನು ಅರ್ಪಿಸುವ ಪರಂಪರೆಯೂ ಇದೆ.












Click it and Unblock the Notifications