Get Updates
Get notified of breaking news, exclusive insights, and must-see stories!

Namma Metro: ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆಗೆ ಮುಂದಾದ ತೇಜಸ್ವಿ ಸೂರ್ಯ ಖಾಕಿ ವಶಕ್ಕೆ, ಬಿಜೆಪಿ ಕಿಡಿ

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ನಂತರದ ಇಳಿಕೆ ನಿರ್ಧಾರವು ಬಿಜೆಪಿ ನಾಯಕರು ಹಾಗೂ ರಾಜ್ಯ ಸರ್ಕಾರದ ಮಧ್ಯ ವಾಕ್ಸಮರಕ್ಕೆ ಕಾರಣವಾಗಿತ್ತು. ಮೆಟ್ರೋ ದರ ಏರಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಹೇಳಿದ್ದಾರೆ ಎಂದು ಟಾಂಗ್ ಕೊಟ್ಟಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರ ದಿವಾಳಿಯಾಗಿದೆ. ಸರ್ಕಾರದ ಬಳಿ ದುಡ್ಡಿಲ್ಲ ಇದು ಖಾಲಿ ಟ್ರಂಕ್ ಎಂದು ದೂರಿದ್ದರು. ಸೋಮವಾರ ಅವರು ಖಾಲಿ ಟ್ರಂಕ್ ಹಿಡಿದು ನಮ್ಮ ಮೆಟ್ರೋ ಹತ್ತಲು ಮುಂದಾಗಿದ್ದರು. ಈ ವೇಳೆ ಅವರನ್ನು ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರ ಮತ್ತು ಪೊಲೀಸರ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಸರ್ಕಾರವು ನಮ್ಮ ಮೆಟ್ರೋಗೆ ನೀಡುವ ಶ್ಯಾಡೋ ಆರ್ಥಿಕ ಬೆಂಬಲವನ್ನು ನಿಲ್ಲಿಸಿದೆ. ಜನರಿಂದಲೇ ದುಡ್ಡು ಪಡೆಯುವಂತೆ ಹೇಳಿದ್ದರಿಂದಲೇ ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ನಂತರ ತಾತ್ಕಾಲಿಕವಾಗಿ ದರ ಏರಿಕೆಗೆ ಬ್ರೇಕ್ ನೀಡಿದೆ. ಇದು ನಮ್ಮ ಮತ್ತು ಜನರ ಹೋರಾಟಕ್ಕೆ ಜಯ ಎಂದು ಸಂಸದ ಸೂರ್ಯ ಹೇಳಿದ್ದರು. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದಿದ್ದಕ್ಕೆ ಸಿಎಂಗೆ ಟಾಂಗ್ ಕೊಟ್ಟಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಖಾಲಿ ಟ್ರಂಕ್ ಜೊತೆಗೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದು ಖಾಲಿ ಟ್ರಂಕ್ ತೋರಿಸಿ ವ್ಯಂಗ್ಯವಾಡಿದರು.

Namma Metro Tejasvi Surya Arrest

ನಮ್ಮ ಮೆಟ್ರೋ ನಿಲ್ದಾಣಕ್ಕೆ ಗುಂಪಾಗಿ ಬಂದ ತೇಜಸ್ವಿ ಸೂರ್ಯ ಮತ್ತು ಶಾಸಕ ಸಿಕೆ ರಾಮ್ ಮೂರ್ತಿ ಅವರನ್ನು ಪೊಲೀಸರ ವಶಕ್ಕೆ ಪಡೆದರು. ಸರ್ಕಾರದ ಬಳಿ ದುಡ್ಡಿಲ್ಲ, ದಿವಾಳಿಯಾಗಿದೆ. ಅದರ ಸತ್ಯ ಹೊರಗೆ ಬರುತ್ತೆ ಎಂದು ನನ್ನ ವಶಕ್ಕೆ ಪಡೆದಿದ್ದಾರೆ. ಮೆಟ್ರೋ ಶ್ಯಾಡೋ ಸಪೋರ್ಟ್ ನಿಲ್ಲಿಸಿದ್ದು ಏಕೆ ಎಂದು ಗುಡುಗಿದರು. ಸರ್ಕಾರದ ಬಳಿ ಎಷ್ಟು ದುಡ್ಡಿದೆ ಎಂಬುದು ಜನರಿಗೆ ಗೊತ್ತಾಗಲಿ ಶ್ವೇತ ಪತ್ರ ಹೊರಡಿಸುವಂತೆ ಅವರು ಸವಾಲೆಸೆದರು.

ನಾನು ಮೆಟ್ರೋ ಹತ್ತಲು ಟಿಕೆಟ್ ಪಡೆದುಕೊಂಡು ಬಂದಿದ್ದೇನೆ. ಇಲ್ಲಿ ನಾನು ಪ್ರತಿಭಟಿಸಲು ಬಂದಿಲ್ಲ. ನನ್ನ ಕೈಯಲ್ಲಿರುವುದು ಸರ್ಕಾರದ ಬಳಿ ಇರುವಂತೆ ಖಾಲಿ ಟ್ರಂಕ್ ಅಷ್ಟೆ ಎಂದು ತಿಳಿಸಿದ್ದಾರೆ. ಅದಾಗುತ್ತಿದ್ದಂತೆ ಖಾಕಿ ಅವರನ್ನು ವಶಕ್ಕೆ ಪಡೆದಿದೆ.

ದರ ಹೆಚ್ಚಳ ವಿರುದ್ಧ ಸಂಸದ ಹೋರಾಟ

ಕಳೆದ ವರ್ಷ ಹಾಗೂ ಈ ವರ್ಷ ನಮ್ಮ ಮೆಟ್ರೋ ದರ ಏರಿಕೆ ಆಗುತ್ತಿದ್ದಂತೆ ತೇಜಸ್ವಿ ಸೂರ್ಯ ಅವರು ಪ್ರತಿಭಟಿಸಿದ್ದರು. ದರ ಏರಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸ್ವತಃ ಮೆಟ್ರೋದಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರೊಂದಿಗೆ ಸಮಾಲೋಚಿಸಿದ್ದರು. ದರ ಇಳಿಕೆಗೆ ಆಗ್ರಹಿಸಿದ್ದರು. ನೆನ್ನೆ ಭಾನುವಾರ ಬೆಂಗಳೂರು ಮೆಟ್ರೋ ರೈಲು ನಿಗಮವು ದರ ಏರಿಕೆಯನ್ನು ತಾತ್ಕಲಿಕವಾಗಿ ತಡೆದಿದೆ. ಇದನ್ನು ಸ್ವಾಗತಿಸಿದ್ದ ತೇಜಸ್ವಿ ಸೂರ್ಯ ಅವರು ಇದು ತಾತ್ಕಾಲಿಕ ಅಷ್ಟೇ, ಶಾಶ್ವತವಾಗಿ ದರ ಹೆಚ್ಚಳ ತಡೆಯಬೇಕು. ಅದಕ್ಕಾಗಿ ಸರ್ಕಾರ ಮೊದಲಿನಂತೆ ಬಜೆಟ್‌ನಲ್ಲಿ ಮೆಟ್ರೋಗೆ ಶ್ಯಾಡೋ ಸಪೋರ್ಟ್ ಘೋಷಿಸಬೇಕೆಂದು ಒತ್ತಾಯಿಸಿದ್ದರು.

'ಕಾಂಗ್ರೆಸ್ ಫೇಲ್ಸ್ ಕರ್ನಾಟಕ'

ತೇಜಸ್ವಿ ಸೂರ್ಯ ಖಾಕಿ ವಶಕ್ಕೆ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿಯು, "ಇದು ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸರ್ವಾಧಿಕಾರಿ ನೀತಿ!. ಕರ್ನಾಟಕ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದು ಖಾಲಿ ಟ್ರಂಕ್ ತೋರಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ' ಎಂದು ಬಿಜೆಪಿ ದೂರಿದೆ.

ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿಎಂ ಸಿದ್ದರಾಮಯ್ಯ ಅವರೇ, ಕರ್ನಾಟಕದಲ್ಲಿ ಸಂಸದರಿಗೆ ಪ್ರತಿಭಟಿಸುವ ಹಕ್ಕು ಇಲ್ಲವೇ..? ಎಂದು 'ಕಾಂಗ್ರೆಸ್ ಫೇಲ್ಸ್ ಕರ್ನಾಟಕ' (CongressFailsKarnataka) ಹ್ಯಾಷ್‌ ಟ್ಯಾಗ್ ಹಾಕಿ ಬಿಜೆಪಿ ಆಕ್ರೋಶ ಹೊರ ಹಾಕಿದೆ.

ದರ ಏರಿಕೆಗೆ ತಡೆ: ಕಾಂಗ್ರೆಸ್ ಈಗ ಮಾತನಾಡಿಲಿ

ಇಷ್ಟು ದಿನ ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರದತ್ತ ಬೆರಳು ತೋರುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಕೇಂದ್ರ ಸರ್ಕಾರ ದರ ಏರಿಕೆಗೆ ಬ್ರೇಕ್ ಹಾಕಿದ್ದನ್ನೇಕೆ ಹೇಳುತ್ತಿಲ್ಲ?. ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವಂತೆ, ತಾನು ಮಾಡುವ ತಪ್ಪುಗಳನ್ನೆಲ್ಲ ಕೇಂದ್ರ ಸರ್ಕಾರದ ಹೆಗಲ ಮೇಲೆ ಹೊರಿಸುವುದು ಸಿಎಂ ಸಿದ್ದರಾಮಯ್ಯ ಅವರ ಚಾಳಿ ಎಂದು ಬಿಜೆಪಿ ನಾಯಕ, ಎಂಎಲ್‌ಸಿ ಸಿಟಿ ರವಿ ಅವರು ಎಕ್ಸ್‌ ಪೋಸ್ಟ್ ಮೂಲಕ ಕಿಡಿ ಕಾರಿದರು.

ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸೂಚನೆಯ ಕಾರಣದಿಂದ ಮೆಟ್ರೋ ದರ ಏರಿಕೆ ತಾತ್ಕಾಲಿಕವಾಗಿ ತಡೆಯಾಗಿದೆ. ಆದರೆ, ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಹೊಸ ಹೊಸ ತೆರಿಗೆ, ಬೆಲೆ ಏರಿಕೆಗಳಿಂದ ಕನ್ನಡಿಗರ ಜೇಬಿಗೆ ಹೇಗೆ ಬರೆ ಎಳೆಯಬಹುದು ಎಂಬ ಆಲೋಚನೆಯಲ್ಲೇ ಮುಳುಗಿದೆ. ಕಾಂಗ್ರೆಸ್ ಎಂದರೆ ಮೋಸ, ಭ್ರಷ್ಟಾಚಾರ, ಹಗಲು ದರೋಡೆ! ಎಂದು ಅವರು ಆಕ್ರೋಶ ಹೊರ ಹಾಕಿದರು.

ಇದು ಹಿಟ್ಲರ್ ಸರ್ಕಾರ: ವಿಜಯೇಂದ್ರ ಖಂಡನೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕರನ್ನು ಪೊಲೀಸ್ ವಶಕ್ಕೆ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಕರಾಳ ಅಣಕ. ವಾಕ್ ಸ್ವಾತಂತ್ರ್ಯದ ದಮನ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಯ ಪರಮಾವಧಿ! ಇದನ್ನು ನಾನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಮೆಟ್ರೋ ದರ ಏರಿಕೆಯ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡಲು ಹುನ್ನಾರ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ವಿರೋಧಿಸಿ ಜನರ ಧ್ವನಿಯಾಗಿ ಪ್ರತಿಭಟಿಸುವುದು ಈ ಹಿಟ್ಲರ್ ಸರ್ಕಾರದಲ್ಲಿ ಅಪರಾಧವಾಗಿದೆ ಎಂದು ವಿಜಯೇಂದ್ರ ಕಿಡಿ ಕಾರಿದ್ದಾರೆ.

ಜನಪರ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ನಾಯಕ ಬಂಧನ ಅಕ್ಷಮ್ಯ. ಆ ಮೂಲಕ ಸತ್ಯವನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದರೆ ಅದು ಸರ್ಕಾರದ ಭ್ರಮೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಮೆಟ್ರೋ ದರ ಏರಿಕೆ ಸದ್ಯಕ್ಕೆ ತಡೆಹಿಡಿಯಲ್ಪಟ್ಟಿದ್ದರೂ, ಈ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ನಿಲ್ಲುತ್ತಿಲ್ಲ. ನಿಮ್ಮ ಹಿಟ್ಲರ್ ಶಾಹಿಯಿಂದ ನಿಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅಧಿಕಾರದ ಮದದಲ್ಲಿ ಜನಾಕ್ರೋಶವನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ಪ್ರಜಾತಂತ್ರದ ಹಕ್ಕುಗಳನ್ನು ಎತ್ತಿಹಿಡಿಯಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ, ಸಾರ್ವಜನಿಕರೂ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Take a Poll

---------

ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್‌' ವೆಬ್‌ಸೈಟ್‌ನಲ್ಲಿದೆ

ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್‌ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್‌ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್‌, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್‌, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್‌, 'ಮೈಖೇಲ್' ವೆಬ್‌ಸೈಟ್ ಬೆಸ್ಟ್‌.

ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್‌ ಫಾಲೊ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+