ಬೆಂಗಳೂರು : ಟೆಕ್ಕಿಗೆ ಚಾಕುವಿನಿಂದ ಇರಿದು ದರೋಡೆ
ಬೆಂಗಳೂರು, ಜ.5 : ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಎರಡು ಕಡೆ ಸರಗಳ್ಳರು ಕೈ ಚಳಕ ತೋರಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನು ದೋಚಿದ್ದಾರೆ.
ಸೋಮವಾರ ಮುಂಜಾನೆ 5.10ರ ಸುಮಾರಿಗೆ ಶಂಕರ ನಗರದ ಬಳಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಟೆಕ್ಕಿಯ ಮೇಲೆ ಹಲ್ಲೆ ನಡೆಸಿರುವ ಮೂವರ ತಂಡ 20 ಗ್ರಾಂ ಚಿನ್ನದ ಸರ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. [ಎಂಜಿ ರಸ್ತೆಯಲ್ಲಿ ಮಹಿಳೆಯರ ಮೇಲೆ ದಾಳಿಗೆ ಯತ್ನ]

ಟೆಕ್ಕಿ ಸುಮನ್ ಕಚೇರಿಗೆ ತೆರಳು ಮಹಾಲಕ್ಷ್ಮೀ ಲೇಔಟ್ ಸಮೀಪದ ಶಂಕರ ನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದರು ಈ ಸಂದರ್ಭದಲ್ಲಿ ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಮೊಬೈಲ್ ಕೊಡಲು ಪ್ರತಿರೋಧವೊಡ್ಡಿದ ಟೆಕ್ಕಿಯ ಕೈಗೆ ಚಾಕುವಿನಿಂದ ಇರಿದು ಮೂವರು ಪರಾರಿಯಾಗಿದ್ದಾರೆ. [ಬೆಂಗಳೂರನ್ನು ಕಾಯಲಿವೆ 3,500 ಸಿಸಿ ಕ್ಯಾಮರಾಗಳು]
ವಾಯುವಿವಾರಿಯನ್ನು ದೋಚಿದರು : ಸೋಮವಾರ ಬೆಳಗ್ಗೆ 4.30ರ ಸುಮಾರಿಗೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದ ವೃದ್ಧರ ಚಿನ್ನದ ಸರವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಒಂದೇ ಗುಂಪು ಎರಡೂ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications