ಹೆಂಡತಿ ತವರೂರಿಗೆ, ಗೆಳತಿ ಮನೆಗೆ - ಕಳ್ಳಾಟ ಆಡಿ ಸಿಕ್ಕಿ ಬಿದ್ದ ಟೆಕ್ಕಿ !

ಬೆಂಗಳೂರು, ಡಿಸೆಂಬರ್ 19: ನಗ್ನ ಸುಂದರಿ ಬಲೆಗೆ ಬಿದ್ದು ಒಬ್ಬ ಟೆಕ್ಕಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ! ಇದೀಗ ಮತ್ತೊಬ್ಬ ಟೆಕ್ಕಿ ತನ್ನ ಹೆಂಡತಿಯ್ನು ತವರೂರಿಗೆ ಕಳಿಸಿ ಗೆಳತಿಯನ್ನು ಮನೆಗೆ ಕರೆಸಿಕೊಂಡು ಕಳ್ಳಾಟವಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ ! ಇಂತದ್ದೊಂದು ಅಪರೂಪದ ಪ್ರಕರಣ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅಂದಹಾಗೆ ಕಳ್ಳಾಟವಾಡಿ ಸಿಕ್ಕಿಬಿದ್ದ ಟೆಕ್ಕಿಯ ಹೆಸರು ಧನಂಜಯ, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ನವೆಂಬರ್ ನಲ್ಲಿ ಪತ್ನಿಯನ್ನು ತವರೂರಿಗ ಹೋಗಿ ಬರುವಂತೆ ಹೇಳಿದ್ದಾರೆ. ಪಾಪ ಗಂಡ ಇಷ್ಟು ಮುತುವರ್ಜಿ ವಹಿಸಿ ಊರಿಗೆ ಹೋಗಿ ಬರಲು ಹೇಳುತ್ತಿದ್ದಾರೆ ಎಂದು ಭಾವಿಸಿ ಖುಷಿಯಿಂದಲೇ ಫತ್ನಿ ಊರಿಗೆ ಹೋಗಿದ್ದರು. ನ. 25 ರಂದು ಪತ್ನಿ ತವರೂರಿಗೆ ಹೋಗುತ್ತಿದ್ದಂತೆ ಸಹೋದ್ಯೋಗಿ ಅರ್ಪಿತಾ ಎಂಬುವರನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ. ಅಲ್ಲದೇ ಒಂದೇ ಕೋಣೆಯಲ್ಲಿ ತಂಗಿದ್ದಾರೆ. ಮರುದಿನ ಬೆಳಗ್ಗೆ ಸಹೋದ್ಯೋಗಿ ಗೆಳತಿ ಅರ್ಪಿತಾ ವಾಪಸು ಹೊರಡಿದ್ದಾಳೆ.

Techie Invites His Female Colleague to Home, Gifted Wifes Jewellery

Recommended Video

      #2020Rewind: ಈ ವರ್ಷ Raichur ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ..! | Oneindia Kannadaa

      ತವರೂರಿನಿಂದ ಪತ್ನಿ ವಾಪಸು ಮನೆಗೆ ಬಂದಾಗ ಚಿನ್ನಾಭರಣ ನಾಪತ್ತೆಯಾಗಿತ್ತು. ಪತಿ ಧನಂಜಯ್ ನನ್ನು ಕೇಳಿದಾಗ ಕಕ್ಕಾಬಿಕ್ಕಿಯಾಗಿದ್ದಾರೆ. ಒಡವೆ ಕಳ್ಳತನ ಆಗಿದೆ ಎಂದು ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆ ಬಾಗಿಲು ಮುರಿಯದೇ, ಯಾರೂ ಮನೆಗೆ ಬರದೇ ಕಳ್ಳತನ ಹೇಗಾಯಿತು ಎಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಅರ್ಪಿತಾ ಎಂಬ ಸಹೋದ್ಯೋಗಿ ಮನೆಗೆ ಬಂದಿರುವ ಸಂಗತಿಯನ್ನು ಟಿಕ್ಕಿ ಬಾಯಿಬಿಟ್ಟಿದ್ದಾನೆ. ಅರ್ಪಿತಾಳನ್ನು ಕಗ್ಗಲೀಪುರ ಪೊಲೀಸರು ಕರೆಸಿ ವಿಚಾರಣೆ ನಡೆಸಿದಾಗ ಧನಂನುಜಯ್ ಹಾಗೂ ನಾನು ಸ್ನೇಹಿತರು. ಮನೆಗೆ ಅವರೇ ಕರೆದರು ಹೋಗಿದ್ದೆವು. ಇಬ್ಬರೂ ಪಾರ್ಟಿ ಮಾಡಿದ್ದೆವು. ತಗೋ ನನ್ನ ಕಡೆಯಿಂದ ಉಡುಗೊರೆ ಎಂದು ಕೊಟ್ಟರು. ಅದನ್ನು ತೆಗೆದುಕೊಂಡಿದ್ದೇನೆ. ನಾನು ಯಾಕೆ ಕಳ್ಳತನ ಮಾಡಲಿ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ. ಧನಂಜಯ್ ಕಳ್ಳಾಟ ಪೊಲೀಸರಿಗೆ ಗೊತ್ತಾಗಿದೆ. ಬಳಿಕ ಧನಂಜಯ್ ನನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಗ ಟೆಕ್ಕಿಯ ಅಸಲಿ ಕಳ್ಳಾಟ ಬಯಲಾಗಿದೆ. ತದನಂತರ ಏನಾಯಿತು ಎಂಬ ಮಾಹಿತಿ ಪೊಲೀಸರು ನೀಡುತ್ತಿಲ್ಲ. ಸುಮಾರು ಹನ್ನೆರಡು ಲಕ್ಷ ರೂಪಾಯಿ ಮೌಲ್ಯದ ಒಡವೆ ಗಳನ್ನು ಟೆಕ್ಕಿ ಕೊಟ್ಟು ಕಳಿಸಿದ್ದಾನೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+