ಪ್ರಭಾತ್ ಕಲಾಪೂರ್ಣಿಮಾದಲ್ಲಿ 'ನನ್ನ ಕಥೆ' ಏಕಾಂಕ ನಾಟಕ

ಬೆಂಗಳೂರು, ಏಪ್ರಿಲ್ 03: ಅಭಿವ್ಯಕ್ತಿ ನಾಟಕ ತಂಡ ಅರ್ಪಿಸುವ ವರ್ಷಿಣಿ ಅಭಿನಯದ ಏಕಾಂಕ ಏಕ ವ್ಯಕ್ತಿ ನಾಟಕ - ನನ್ನ ಕಥೆ, ಏಪ್ರಿಲ್ 07ರಂದು ಪ್ರದರ್ಶನವಾಗಲಿದೆ.

ಏಕಾಂಕ ಏಕ ವ್ಯಕ್ತಿ ನಾಟಕ : ದಿನ ಬೆಳಗಾದರೆ.. ನಮ್ಮ ನಿಮ್ಮ ಸುತ್ತಮುತ್ತಲು ನಡೆಯುವ ಹಲವು ನೈಜ ಮತ್ತು ಕಾಲ್ಪನಿಕ ಸನ್ನಿವೇಶಗಳ ಮಿಶ್ರಣದ ನಾಟಕ "ನನ್ನ ಕಥೆ". ಮನುಷ್ಯನ ವ್ಯಕ್ತಿತ್ವ ಸ್ವಾರ್ಥ, ಅಸೂಯೆ, ಕಾಮ, ಮೋಹ, ಮದ, ಮಾತ್ಸರ್ಯ ದಿಂದ ಕಲ್ಮಶ ಆಗಿರೋದ್ರಿಂದ ಸಮಾಜದಲ್ಲಿ ತಾಯಾಗಿ, ಅಕ್ಕ, ತಂಗಿ, ಹೆಂಡತಿ, ಸ್ನೇಹಿತೆಯಾಗಿ ಹೆಣ್ಣು ಬೇಕೆ ಹೊರತು ಮಗಳಾಗಿ ಮಾತ್ರ ಬೇಡ ಅನ್ನೋ ಅಳುಕಿನಿಂದಲೇ ಈ ನನ್ನ ಕಥೆ ನಾಟಕ ಶುರುವಾಗುತ್ತದೆ.

ಇಂಥಾ ಸಮಾಜದಲ್ಲಿ ಒಬ್ಬಳು ಹೆಣ್ಣು ತನ್ನ ತಾಯ್ತನವನ್ನು ಸಂತೋಷದಿಂದ ಅನುಭವಿಸಬೇಕು. ತನ್ನ ಮಗಳನ್ನು ಗಂಡಿನ ಸರಿ ಸಮನಾಗಿ ಬದುಕೋ ಹಾಗೆ ಮಾಡಬೇಕು ಅಂತ ಆಸೆ ಪಡೋದು ತಪ್ಪಾ??

Team Abhivyktha presents Nanna Kathe Prabath Kalapoornima

ಮನುಷ್ಯ ತನ್ನ ನೈತಿಕತೆ ಕಳ್ಕೊಂಡ ಪಕ್ಷದಲ್ಲಿ ತೆಗೆದು ಕೊಳ್ಳೋ ಸಣ್ಣ ಸಣ್ಣ ನಿರ್ಧಾರದ ಬಗ್ಗೆ ಗಮನ ವಹಿಸಬೇಕಾಗುತ್ತದೆ ಅನ್ನೋ ತತ್ತ್ವದೊಂದಿಗೆ ನಾಟಕ ಮುಗಿಯುತ್ತದೆ.

Team Abhivyktha presents Nanna Kathe Prabath Kalapoornima

ಒಂದು ಗಂಟೆ ಸಂಪೂರ್ಣ ರಂಗದ ಮೇಲೆ ಅಭಿನಯ - ಕು. ವರ್ಷಿಣಿ

ಸ್ಥಳ : ಪ್ರಭಾತ್ ಕಲಾಪೂರ್ಣಿಮಾ, ಎನ್ ಆರ್ ಕಾಲೋನಿ, ಬೆಂಗಳೂರು
ಪ್ರದರ್ಶನದ ವೇಳೆ: ಸಂಜೆ 4.30, 7.30
ರಚನೆ-ನಿರ್ದೇಶನ: ಶ್ರೀಗುರುಪ್ರಸಾದ್ ಟಿ.ಪಿ
ದಿನಾಂಕ : 07.04.2019, ಭಾನುವಾರ
ಟಿಕೆಟ್ ದರ : 100ರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+