ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಗಾವಣೆ ರದ್ದು ವಿರೋಧಿಸಿ ನ.5ರಿಂದ ಶಿಕ್ಷಕರ ಅನಿರ್ದಿಷ್ಟ ಮುಷ್ಕರ

|
Google Oneindia Kannada News

Recommended Video

ಕರ್ನಾಟಕ :ನವೆಂಬರ್ ೫ ರಂದು ಶಿಕ್ಷಕರ ಅನಿರ್ಧಿಷ್ಟಾವಧಿ ಮುಷ್ಕರ | Oneindia Kannada

ಬೆಂಗಳೂರು, ಅಕ್ಟೋಬರ್ 31: ಸತತ ಆರನೇ ಬಾರಿಗೂ ಶಿಕ್ಷಕರ ವರ್ಗಾವಣೆ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಶಿಕ್ಷಕರು ನವೆಂಬರ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

ಎರಡು ವರ್ಷಗಳಿಂದ ಶಿಕ್ಷಕರ ಪರಿಸ್ಥಿತಿ ಬಿಗಡಾಯಿಸಿದೆ ವರ್ಗಾವಣೆ ಕೋರಿ ಸರ್ಕಾರಕ್ಕೆ ಎಷ್ಟೇ ಪತ್ರವನ್ನು ಸಲ್ಲಿಸಿದರೂ ಒಮ್ಮೆ ಒಪ್ಪಿಗೆ ಕೊಡುತ್ತಾರೆ ನಂತರ ವರ್ಗಾವಣೆಯನ್ನು ತಡೆ ಹಿಡಿಯುತ್ತಾರೆ.

ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು! ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು!

ನವೆಂಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಶಿಕ್ಚಕರ ವರ್ಗಾವಣೆ ಕಾಯಿದೆಗೆ ತಿದ್ದುಪಡಿ ಹಾಗೂ ವಿಧಾನಸಭೆ ಚುನಾವಣೆ ನೆಪ ಮಾಡಿಕೊಂಡು 2017-18ನೇ ಸಾಲಿನಲ್ಲಿಯೂ ಶಿಕ್ಷಕರ ವರ್ಗಾವಣೆ ಮಾಡಿಲ್ಲ. ಈ ವರ್ಷವೂ ಜೂನ್‌ನಿಂದಲೇ ಅನೇಕ ನೆಪವೊಡ್ಡಿ ಆರು ಬಾರಿ ವರ್ಗಾವಣೆ ಕೌನ್ಸಿಲ್‌ನ್ನು ಮುಂದೂಡುತ್ತಾ ಬಂದಿದೆ.

ಈಗ ಶಿಕ್ಷಣ ಖಾತೆ ತಮ್ಮ ಬಳಿಯೇ ಇಟ್ಟುಕೊಂಡಿರುವ ಕುಮಾರಸ್ವಾಮಿಯವರೇ 2019ರ ಮಾರ್ಚ್ ವರೆಗೂ ಶಿಕ್ಷಕರ ವರ್ಗಾವಣೆ ಸಂಬಂಧ ಇಲಾಖೆ ಕಳೆದ ಹತ್ತು ತಿಂಗಳಿಂದಲೂ ನಡೆಸಿದ ಕಸರತ್ತು ವ್ಯರ್ಥವಾದಂತಿದೆ.

ಮುಖ್ಯ ಶಿಕ್ಷಕರಿಗೆ ವರ್ಗಾವಣೆ ವಿನಾಯತಿ ಇಲ್ಲ

ಮುಖ್ಯ ಶಿಕ್ಷಕರಿಗೆ ವರ್ಗಾವಣೆ ವಿನಾಯತಿ ಇಲ್ಲ

ಸೆಪ್ಟೆಂಬರ್ ಅಂತ್ಯದ ವೇಳೆಗೆ ಇಲಾಖೆಯು ಪ್ರೌಢಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ವೇಳೆ ರಾಜ್ಯಾದ್ಯಂತ ಒಟ್ಟು 137 ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ವರ್ಗಾಯಿಸಲಾಗಿತ್ತು. ಈಗಾಗಲೇ ಬಹುತೇಕ ಶಿಕ್ಷಕರು ಸೇವೆಯಿಂದ ಬಿಡುಗಡೆಯಾಗಿ, ವರ್ಗಾವಣೆಗೊಂಡ ಸ್ಥಳಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ವರ್ಗಾವಣೆಗೊಂಡಿರುವ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ವರ್ಗಾವಣೆ ವಿನಾಯಿತಿ ಇರುವುದಿಲ್ಲ.

ಮಾರ್ಚ್‌ನಲ್ಲೂ ವರ್ಗಾವಣೆ ಪ್ರಕ್ರಿಯೆ ಅನುಮಾನ

ಮಾರ್ಚ್‌ನಲ್ಲೂ ವರ್ಗಾವಣೆ ಪ್ರಕ್ರಿಯೆ ಅನುಮಾನ

ವರ್ಗಾವಣೆ ಪ್ರಕ್ರಿಯೆ ರದ್ದುಗೊಳಿಸಿರುವ ಸಿಎಂ, 2019ರ ಮಾರ್ಚ್ ನಂತರ ಪ್ರಕ್ರಿಯೆಯನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ, ಆ ವೇಳೆಗೆ ಲೋಕಸಭೆ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದೆ. ಶಿಕ್ಷಕರ ವರ್ಗಾವಣೆ ಮತ್ತೆ ಮುಂದಕ್ಕೆ ಹೋಗುವ ಆತಂಕ ಶಿಕ್ಷಕರನ್ನು ಕಾಡುತ್ತಿದೆ. ಹೀಗಾಗಿ ವರ್ಗಾವಣೆ ಪ್ರಕ್ರಿಯೆನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಶಿಕ್ಷಕರು ಒತ್ತಾಯಿಸುತ್ತಿದ್ದಾರೆ.

3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು 3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು

 8 ಜಿಲ್ಲೆಗಳಿಗೆ ಷರತ್ತು ವಿಧಿಸಲಾಗಿತ್ತು

8 ಜಿಲ್ಲೆಗಳಿಗೆ ಷರತ್ತು ವಿಧಿಸಲಾಗಿತ್ತು

ಉಪ ಚುನಾವಣೆ ನಡೆಯುತ್ತಿರುವ ಎಂಟು ಜಿಲ್ಲೆಗಳಾದ ಬಳ್ಳಾರಿ, ಮಂಡ್ಯ, ಶಿವಮೊಗ್ಗ, ಬಾಗಲಕೋಟೆ, ರಾಮನಗರ, ಮೈಸೂರು, ಉಡುಪಿ, ಶಿವಮೊಗ್ಗ, ದಾವಣೆಗೆರೆ ಜಿಲ್ಲೆಗಳಲ್ಲಿ ಮಾಅದರಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆ ಮಾಡಬಾರದು ಹಾಗೂ ಹಾಜರಾತಿ ಪಡೆಯಬಾರದು ಎಂಬ ಷರತ್ತು ವಿಧಿಸಿ ಕೌನ್ಸೆಲಿಂಗ್ ನಡೆಸಲು ಆದೇಶ ನೀಡಲಾಗಿತ್ತು. ಆದರೂ ಮತ್ತೆ ವರ್ಗಾವಣೆ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.

ವರ್ಗಾವಣೆ ಪ್ರಕ್ರಿಯೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿತ್ತು

ವರ್ಗಾವಣೆ ಪ್ರಕ್ರಿಯೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿತ್ತು

ಚುನಾವಣೆಗಳು ಕರ್ನಾಟಕದ ಶಿಕ್ಷಕರ ವರ್ಗಾವಣೆಗೆ ಶಾಪವಾಗಿ ಪರಿಣಮಿಸಿತ್ತು, ಇದೀಗ ಶಾಪದಿಂದ ಮುಕ್ತವಾದಗಿದೆ, ಉಪ ಚುನಾವಣೆ ನೀತಿ ಸಂಹಿತೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಗೆ ಅಡ್ಡಿಯಾಗುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿತ್ತು ಆದರೂ ಯಾವುದೇ ಪ್ರಯೋಜನವಾಗಿಲ್ಲ. ಖುದ್ದಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರೇ ವರ್ಗಾವಣೆ ಪ್ರಕ್ರಿಯೆಯನ್ನು ತಡೆ ಹಿಡಿದಿದ್ದಾರೆ.

ಉಪನ್ಯಾಸಕರಿಗೆ ಚೆಕ್‌ಪೋಸ್ಟ್ ಕೆಲಸಕೊಟ್ಟ ಚುನಾವಣಾ ಆಯೋಗಉಪನ್ಯಾಸಕರಿಗೆ ಚೆಕ್‌ಪೋಸ್ಟ್ ಕೆಲಸಕೊಟ್ಟ ಚುನಾವಣಾ ಆಯೋಗ

English summary
Opposing cancelation of transfer counselling, hundreds of government school teachers will go indefinite strike from November 5. The government has failed to process of transfer for the consecutive second year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X