ಬೆಂಗಳೂರಲ್ಲಿ ಸ್ವಾಮಿ ದಯಾನಂದ ಸರಸ್ವತಿ ಹಿತವಚನ

ಬೆಂಗಳೂರಿನ, ಜಯನಗರ 3ನೇ ಬಡಾವಣೆಯಲ್ಲಿರುವ ಎನ್ಎಮ್‌ಕೆಆರ್‌ವಿ ಕಾಲೇಜಿನ 'ಮಂಗಳ ಮಂಟಪ'ದಲ್ಲಿ ನವೆಂಬರ್ 18, ಸೋಮವಾರದಿಂದ ನವೆಂಬರ್ 22, ಶುಕ್ರವಾರದವರೆಗೆ 'Being Live to the Presence of Ishvara' ಎಂಬ ವಿಷಯದ ಬಗ್ಗೆ ಅವರು ಮಾತುಗಳನ್ನಾಡಲಿದ್ದಾರೆ.
ವೇದಾಂತ ಎಂದರೆ ಹಿಂದೂ ತತ್ವಶಾಸ್ತ್ರದಲ್ಲಿ ವೇದ ಗ್ರಂಥಗಳ ಭಾಗವಾದ ಉಪನಿಷತ್ತುಗಳನ್ನು ಸೂಚಿಸುವ ಪರ್ಯಾಯ ಪದ. ವೇದಾಂತ ಎಂದರೆ ವೇದಗಳ ಉದ್ದೇಶ ಅಥವಾ ಗುರಿ ಎಂಬ ಅರ್ಥವೂ ಬರುತ್ತದೆ. ವೇದಾಂತದ ಗುರಿಯು ಆತ್ಮಸಾಕ್ಷಾತ್ಕಾರದ ಸ್ಥಿತಿ ಅಥವಾ ಬ್ರಹ್ಮಾಂಡದ ಪ್ರಜ್ಞೆ ಹೊಂದುವುದೇ ಆಗಿದೆ.
ಈ ಕ್ಲಿಷ್ಟಕರವಾದ ವೇದಾಂತದ ತಿರುಳನ್ನು ಅತ್ಯಂತ ಸ್ಪಷ್ಟವಾಗಿ, ಸಾಮಾನ್ಯ ಜನರಿಗೆ ಅರ್ಥವಾಗುವಂತೆ, ಜೀವನದ ಸತ್ಯವನ್ನು ಅತ್ಯಂತ ಸರಳ ಭಾಷೆಯಲ್ಲಿ ಹೇಳುವುದರಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರು ಸಿದ್ಧಹಸ್ತರು. ಅಂಥ ವೇದಾಂತಿಗಳ ಮಾತುಗಳನ್ನು ಕೇಳುವ ಸುಯೋಗ ಬೆಂಗಳೂರಿನ ನಾಗರಿಕರಿಗೆ ಒದಗಿಬಂದಿದೆ.
ಕಾರ್ಯಕ್ರಮದ ವಿವರ :
ಸಂಜೆ 5.45ರಿಂದ 6.20ರವರೆಗೆ ಶಾಸ್ತ್ರೀಯ ಸಂಗೀತ.
ಸಂಜೆ 6.30ರಿಂದ 8ರವರೆಗೆ ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಹಿತೋಪದೇಶ.
ಸ್ವಾಮೀಜಿ ಕುರಿತು ಎರಡು ಮಾತು : ತಮಿಳುನಾಡಿನ ಮಂಜಕ್ಕುಡಿ (ಸ್ವಾಮೀಜಿ ಹುಟ್ಟೂರು) ಎಂಬಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಉದ್ಧಾರಕ್ಕಾಗಿ ಸ್ವಾಮಿ ದಯಾನಂದ ಸರಸ್ವತಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಕರ್ನಾಟಕ ಸಂಗೀತದಲ್ಲಿಯೂ ಪರಿಣತಿ ಹೊಂದಿರುವ ಅವರು ಹಿಂದೂ ಧರ್ಮ ಆಚಾರ್ಯ ಸಭಾ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿದ್ದಾರೆ. ಇದರ ಮುಖಾಂತರ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.
ವೇದಾಂತ ಶಾಸ್ತ್ರದಲ್ಲಿ ಮಾಡಿದ ಸಾಧನೆಗಾಗಿ 2012ರಲ್ಲಿ ಶಂಕರ ಜಯಂತಿ ಸಂದರ್ಭದಲ್ಲಿ ಶೃಂಗೇರಿಯ ಶ್ರೀ ಭಾರತಿತೀರ್ಥ ಮಹಾಸ್ವಾಮಿ ಅವರಿಂದ 'ಆದಿ ಶಂಕರ ಪ್ರಶಸ್ತಿ'ಗೆ ಸ್ವಾಮಿ ದಯಾನಂದ ಸರಸ್ವತಿ ಅವರು ಭಾಜನರಾಗಿದ್ದರು. ನ.18ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲರಿಗೂ ಉಚಿತ ಪ್ರವೇಶವಿದೆ.
ವೆಬ್ ಸೈಟ್ ವಿಳಾಸ : www.aimforseva.org
ಸಂಪರ್ಕಿಸಿ : ಸ್ವಾತ್ಮಬೋಧ - 94802 11695, ನಮಿತಾ - 99013 00999, ಅರುಣಾ - 97400 66219












Click it and Unblock the Notifications