SWR: ಯಶವಂತಪುರದಿಂದ ಆ.23-ಡಿ. 29 ರವರೆಗೆ ವಿಶೇಷ ರೈಲು ಸೇವೆ

ಬೆಂಗಳೂರು, ಆಗಸ್ಟ್ 22: ಗೌರಿ ಗಣೇಶ ಹಬ್ಬದ ಪ್ರಯುಕ್ತ ಈಗಾಗಲೇ ಬೆಂಗಳೂರಿನಿಂದ ಹಾಗೂ ಕರ್ನಾಟಕದಿಂದ ವಿವಿಧ ಕಡೆಗಳಲ್ಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದೀಗ ಇದೇ ಹಬ್ಬದ ಪ್ರಯುಕ್ತ ಆಗಸ್ಟ್ 23ರಿಂದ ಬೆಂಗಳೂರಿನ ಯಶವಂತಪುರದಿಂದ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೈಲು ಒಟ್ಟು 19 ಟ್ರಿಪ್‌ಗಳು ಟ್ರಿಪ್‌ಗಳ ಸೇವೆ ನೀಡಲಿದೆ. ಇದರಿಂದ ಹಬ್ಬದ ಪ್ರಯುಕ್ತ ಹೆಚ್ಚಾಗಲಿರುವ ಸಂಚಾರ ದಟ್ಟಣೆ ನಿವಾರಣೆ ಆಗಲಿದೆ. ಆಗಸ್ಟ್ 23ರ ಶನಿವಾರದಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರ ಚಲಿಸಲಿದೆ. ಯಶವಂತಪುರದಿಂದ ಧನ್ಬಾದ್ ಗೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು (06563) ಕಾರ್ಯಾಚರಣೆ ಮಾಡಲಿದೆ. ಯಶವಂತಪುರದಿಂದ ಬೆಳಗ್ಗೆ 07:30 ಕ್ಕೆ ಹೊರಟು ಸೋಮವಾರ ರಾತ್ರಿ 11:00 ಕ್ಕೆ ಧನ್ಬಾದ್ ತಲುಪಲಿದೆ.

SWR Run Weekly Special Express Train Yesvantpur-Dhanbad Genesh Festive Rush

ಧನ್ಬಾದ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ (06564) ರೈಲು ಮರಳಿ ಧನ್ಬಾದ್ ನಿಂದ ಆಗಸ್ಟ್ 25 ರಿಂದ ಡಿಸೆಂಬರ್ 29ರವರೆಗೆ ಪ್ರತಿ ಸೋಮವಾರ ಚಲಿಸಲಿದೆ. ಬುಧವಾರ ರಾತ್ರಿ 20:45 ಕ್ಕೆ ಧನ್ಬಾದ್‌ನಿಂದ ಹೊರಟು ರಾತ್ರಿ 21:30ಕ್ಕೆ ಯಶವಂತಪುರ ತಲುಪಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ನಿಲುಗಡೆ ನಿಲ್ದಾಣಗಳು

ಯಲಹಂಕ, ಧರ್ಮಾವರಂ, ಅನಂತಪುರ, ಗೂಟಿ, ಧೋನೆ, ಕರ್ನೂಲ್ ಸಿಟಿ, ಮಹೆಬೂಬ್‌ನಗರ, ಕಾಚೇಗೌಡ, ಕಾಜಿಪೇಟ್, ರಾಮಗುಂಡಂ, ಬಲ್ಹರ್ಷಾ, ನಾಗ್ಪುರ, ಇಟಾರ್ಸಿ, ಪಿಪಾರಿಯಾ, ನರಸಿಂಗ್‌ಪುರ, ಮದನ್ ಮಹಲ್, ಕಟ್ನಿ, ಸತ್ನಾ, ಪ್ರಯಾಗ್‌ರಾಜ್ ಛೋಕಿ, ಮಿರ್ಜಾಪುರ, ಪಿ.ಟಿ. ದೀನ್ ದಯಾಳ್ ಉಪಾಧ್ಯಾಯ ಜೂ., ಭಬುವಾ ರಸ್ತೆ, ಸಸಾರಾಮ್, ಅನುಗ್ರಹ ನಾರಾಯಣ ರಸ್ತೆ, ಗಯಾ, ಕೊಡೆರ್ಮಾ, ಹಜಾರಿಬಾಗ್ ರಸ್ತೆ, ಪರಸ್ನಾಥ್ ಮತ್ತು ನೇತಾಜಿ ಸುಭಾಸ್ ಚಂದ್ರ ಬೋಸ್ ಗೋಮೊಹ್ ನಿಲ್ದಾಣಗಳಲ್ಲಿ ಎರಡು ಬದಿ ಸಂಚಾರದಲ್ಲೂ ನಿಲುಗಡೆ ನೀಡಲಿದೆ.

ರೈಲು ಪ್ರಯಾಣಿಕರು 02 ಎಸಿ 3-ಟೈರ್, 13 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್‌ಎಲ್‌ಆರ್/ಡಿ ಕೋಚ್‌ಗಳನ್ನು ಒಳಗೊಂಡಂತೆ 21 ಕೋಚ್‌ಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ www.enquiry.indianrail.gov.in, NTES ಅಪ್ಲಿಕೇಶನ್ ಬಳಸಿ ಟಿಕೆಟ್ ಬುಕ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 139 ಸಂಪರ್ಕಿಸಬಹುದು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+