ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ, ರೈಲು ಸೇವೆ ಪುನರಾರಂಭ

ಬೆಂಗಳೂರು, ಜೂನ್ 18; ಬೆಂಗಳೂರು-ಮೈಸೂರು ನಡುವಿನ ಮೆಮು ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಮೈಸೂರು ವಿಭಾಗ ಪುನರಾರಂಭಿಸಿದೆ. ತುಮಕೂರು-ಯಶವಂತಪುರ ನಡುವೆ ಮತ್ತೊಂದು ಡೆಮು ರೈಲು ಸಂಚಾರ ಆರಂಭವಾಗಿದೆ.

ಬೆಂಗಳೂರು-ಮೈಸೂರು ನಡುವೆ ರಾಜ್ಯರಾಣಿ ಎಕ್ಸ್‌ಪ್ರೆಸ್ (06567/ 06568), ಚಾಮುಂಡಿ ಎಕ್ಸ್‌ಪ್ರೆಸ್ (06569/ 06570) ಮತ್ತು ಟಿಪ್ಪು ಎಕ್ಸ್‌ಪ್ರೆಸ್ (06201/ 06202) ರೈಲುಗಳು ಪ್ರತಿದಿನ ಸಂಚಾರ ಆರಂಭಿಸಿವೆ.

SWR Resumed Several Train Between Bengaluru And Mysuru

ಜೂನ್ 20ರಿಂದ ಮೈಸೂರು-ಬಾಗಲಕೋಟೆ ನಡುವಿನ ಬಸವ ಎಕ್ಸ್‌ಪ್ರೆಸ್ (07307/ 07308) ಸಂಚಾರ ನಡೆಸಲಿದೆ. ಜೂನ್ 16ರಿಂದ ಮೈಸೂರು-ಕೊಚ್ಚುವೇಳಿ (06316/ 06315) ಸಂಚಾರ ಪ್ರಾರಂಭವಾಗಿದೆ.

ಮತ್ತೊಂದು ಡೆಮು ರೈಲು; ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ನಡುವೆ ಮತ್ತೊಂದುದ ಡೆಮು ರೈಲು ಸೇವೆ ಆರಂಭವಾಗಿದೆ. ಯಶವಂತಪುರದಿಂದ ಬೆಳಗ್ಗೆ 5.30ಕ್ಕೆ ತುಮಕೂರಿನಿಂದ 8ಕ್ಕೆ ಹೊರಡಲಿದೆ.

ಯಶವಂತಪುರದಿಂದ ಬೆಳಗ್ಗೆ 9.30ಕ್ಕೆ. ತುಮಕೂರಿನಿಂದ ಸಂಜೆ 4.20ಕ್ಕೆ ಹೊರಡಲಿದೆ. ಯಶವಂತಪುರದಿಂದ ಸಂಜೆ 6ಕ್ಕೆ ಮತ್ತು ತುಮಕೂರಿನಿಂದ ರಾತ್ರಿ 7.40ಕ್ಕೆ ಹೊರಡಲಿದೆ.

ಈ ಡೆಮು ರೈಲು ಯಶವಂತಪುರ-ತುಮಕೂರು ನಡುವೆ ಎಲ್ಲಾ ನಿಲ್ದಾಣದಲ್ಲಿಯೂ ನಿಲ್ಲಲಿದೆ. ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಿ ಕೈಗಾರಿಕೆಗೆಳಿಗೆ ಅನುಮತಿ ನೀಡಿದ್ದು, ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲು ರೈಲು ಸೇವೆ ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+