ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ತುರ್ತು ಚಿಕಿತ್ಸಾ ಘಟಕ ಆರಂಭ
ಬೆಂಗಳೂರು, ಮೇ 30 : ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ತುರ್ತು ಚಿಕಿತ್ಸಾ ವಿಭಾಗವನ್ನು ಆರಂಭಿಸಿದೆ. ಮಣಿಪಾಲ್ ಆಸ್ಪತ್ರೆ ಈ ಚಿಕಿತ್ಸಾ ಘಟಕವನ್ನು ನಿರ್ವಹಣೆ ಮಾಡುತ್ತದೆ.
ಮೆಜೆಸ್ಟಿಕ್‌ನಲ್ಲಿರುವ ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ನಂ 1ರಲ್ಲಿ ತುರ್ತು ಚಿಕಿತ್ಸಾ ಘಟಕವಿದೆ. ಮಣಿಪಾಲ್ ಆಸ್ಪತ್ರೆಯ ಜೊತೆ ಒಪ್ಪಂದ ಮಾಡಿಕೊಂಡು ಘಟಕವನ್ನು ನಿರ್ಮಾಣ ಮಾಡಲಾಗಿದೆ.
ಯಾವುದಾದರೂ ಅವಘಡ ನಡೆದರೆ ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳಿಸುವ ಕೆಲವನ್ನು ತುರ್ತು ಚಿಕಿತ್ಸಾ ಘಟಕ ಮಾಡಲಿದೆ. 2011ರಲ್ಲಿಯೇ ಘಟಕವನ್ನು ಆರಂಭಿಸಲಾಗಿತ್ತು, ಆದರೆ, 2 ವರ್ಷಗಳ ಹಿಂದೆ ಅದು ಸ್ಥಗಿತಗೊಂಡಿತ್ತು.

ಮಣಿಪಾಲ್ ಆಸ್ಪತ್ರೆ ಈ ಘಟಕವನ್ನು ನಿರ್ವಹಣೆ ಮಾಡಲಿದೆ. ದಿನದ 24 ಗಂಟೆಯೂ ಘಟಕ ಕಾರ್ಯ ನಿರ್ವಹಣೆ ಮಾಡಲಿದ್ದು, ಡಾಕ್ಟರ್ ಮತ್ತು ನರ್ಸ್‌ಗಳು ಸಹ ಮೂರು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ.
ಬೆಂಗಳೂರು ವಿಭಾಗಕ್ಕೆ ಸೇರುವ ಬೇರೆ ರೈಲ್ವೆ ನಿಲ್ದಾಣದಲ್ಲಿಯೂ ಶೀಘ್ರದಲ್ಲಿಯೇ ಘಟಕ ಆರಂಭವಾಗಲಿದೆ.












Click it and Unblock the Notifications