Get Updates
Get notified of breaking news, exclusive insights, and must-see stories!

ಬೆಂಗಳೂರು ರೈಲು ನಿಲ್ದಾಣದಲ್ಲಿ ಏ.1ರಿಂದ 'ಯುಪಿಐ ಪೇಮೆಂಟ್ ಸಿಸ್ಟಮ್' ಜಾರಿ

ಬೆಂಗಳೂರು, ಮಾರ್ಚ್ 31: ಭಾರತೀಯ ರೈಲ್ವೆಯು ಮುಂದಿನ ಆರ್ಥಿಕ ವರ್ಷದಿಂದ ರೈಲ್ವೆಯ ಸಾಮಾನ್ಯ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿತ್ತು. ಅದರ ಅನುಷ್ಠಾನ ಜಾರಿಗೆ ಎಲ್ಲ ಸಿದ್ಧತೆ ನಡೆದಿವೆ. ಈಗಾಗಲೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೆಜೆಸ್ಟಿಕ್ (KSR) ರೈಲು ನಿಲ್ದಾಣದಲ್ಲಿ ಹಣ ಪಾವತಿಗೆ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಹೌದು, ಸದ್ಯ ನೈಋತ್ಯ ರೈಲ್ವೆಯು ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಯುಪಿಐ ಮೂಲಕ ಟಿಕೆಟ್ ಹಣ ಪಾವತಿಯ ಯೋಜನೆ ಜಾರಿಗೆ ತಂದಿದೆ. ಇದು ಏಪ್ರಿಲ್ 01ರಿಂದ ಜಾರಿಗೆ ಬರಲಿದೆ.

SWR Implements UPI Based Digital Payment System in Railway Station from April 1st Know Details

ರೈಲ್ವೆ ಪ್ರಯಾಣಿಕರು ಜನರಲ್ ಟಿಕೆಟ್ ಹೊರತುಪಡಿಸದರೆ ಬೇರೆ ನಾನ್ ಎಸಿ ಸ್ಲೀಪರ್, ಎಸಿ ಸ್ಲಿಪರ್, ಐಶಾರಾಮಿ ಟಿಕೆಟ್ ಪಡೆಯಲು ಆನ್‌ಲೈನ್‌ಲ್ಲಿ ಕಾಯ್ದಿರಿಸಬಹುದು. ಅಲ್ಲಿಯೇ ಡಿಜಿಟಲ್ ಹಣ ಪಾವತಿಸಬಹುದು. ಆದರೆ ಇದು ಸಾಮಾನ್ಯ ಟಿಕೆಟ್ ಖರೀದಿಸುವ ಜನರಲ್ ಪ್ರಯಾಣಿಕರಿಗೆ ಅನ್ವಯಿಸಲ್ಲ.

ಟಿಕೆಟ್ ಕೌಂಟರ್‌ನಲ್ಲಿ ಡಿಜಿಟಲ್ ಪಾವತಿ

ಹೀಗಾಗಿ ರೈಲ್ವೆ ಇಲಾಖೆಯು ಸಾಮಾನ್ಯ ಟಿಕೆಟ್ (General Passengers) ಖರೀದಿಸುವಾಗ ಕೌಂಟರ್‌ನಲ್ಲಿ ನಗದು ಹಣ ಕೊಟ್ಟೇ ಖರೀದಿಸಬೇಕಿತ್ತು. ಇದೀಗ ಆ ವ್ಯವಸ್ಥೆ ಜೊತೆಗೆ ಯುಪಿಐ ಪಾವತಿ ವ್ಯವಸ್ಥೆ ಬರಲಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಬೆಂಗಳೂರು ಎಲ್ಲ ನಿಲ್ದಾಣಗಳಿಗೆ ವಿಸ್ತರಣೆ

ಸದ್ಯ ಬೆಂಗಳೂರಿನ ಒಂದು ನಿಲ್ದಾಣದಲ್ಲಿ ಈ ಯುಪಿಐ ವ್ಯವಸ್ಥೆ ಅಳವಡಿಸಿರುವ ನೈಋತ್ಯ ರೈಲ್ವೆಯು ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ರೈಲು ನಿಲ್ದಾಣಗಳಲ್ಲೂ (ಯಶವಂತಪುರ, ಕಂಟೋನ್ಮೆಂಟ್ ರೈಲು ನಿಲ್ದಾಣ (ದಂಡು), ಬೈಯಪ್ಪನಹಳ್ಳಿ, ಕೆಂಗೇರಿ ಇತ್ಯಾದಿ) ಈ ವ್ಯವಸ್ಥೆ ಜಾರಿಗೆ ತರಲು ಪ್ಲಾನ್ ಮಾಡಿಕೊಂಡಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

SWR Implements UPI Based Digital Payment System in Railway Station from April 1st Know Details

ಯುಪಿಐ ಪಾವತಿ: ಚಿಲ್ಲರೆ ಸಮಸ್ಯೆಗೆ ಮುಕ್ತಿ

ರೈಲ್ವೆ ಮಂಡಳಿಯು ಹಲವು ಸುಧಾರಣೆ ಜಾರಿಗೆ ತರುತ್ತಿದೆ. ಅದರಲ್ಲಿ ಡಿಜಿಟಲ್ ಪಾವತಿಗೂ ಆದ್ಯತೆ ನೀಡಿದೆ. ಏಪ್ರಿಲ್ 1ರಿಂದ ಸಾಮಾನ್ಯ ಪ್ರಯಾಣಿಕರು ಟಿಕೆಟ್ ಕೌಂಟರ್‌ಗಳಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ್ ಆಪ್ ಸೇರಿದಂತೆ ಯುಪಿಐ ಆಧಾರಿತ ಎಲ್ಲ ಡಿಜಿಟಲ್ ವ್ಯವಸ್ಥೆಯಿಂದಲೂ ನೀವು ಕೌಂಟರ್‌ನಲ್ಲಿ ಹಣ ಪಾವತಿಸಬಹುದು.

ಭಾರತದಾದ್ಯಂತ ಸಾಮಾನ್ಯ ಪ್ರಯಾಣಿಕರಿಗಾಗಿ ಟಿಕೆಟ್ ಕೌಂಟರ್‌ನಲ್ಲಿ ಈ ಡಿಜಿಟಲ್ ಪಾವತಿಯನ್ನು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಪ್ರಾಥಮಿಕ ಹಂತದಲ್ಲಿ ಒಂದಷ್ಟು ರೈಲು ನಿಲ್ದಾಣಗಳಲ್ಲಿ ಇದು ಜಾರಿಗೆ ಬರಲಿದೆ. ನಂತರ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಇದರನ್ನು ವಿಸ್ತರಿಸುವ ಬಗ್ಗೆ ಇತ್ತೀಚೆಗೆ ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿತ್ತು.

ಟಿಕೆಟ್ ಬುಕ್ಕಿಂಗ್ ಸುಲಭ

ಡಿಜಿಟಲ್ ಪಾವತಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಈಗಾಗಲೇ ಇಲಾಖೆ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಇದರಿಂದ ಕೌಂಟರ್‌ನಲ್ಲಿ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ತಪ್ಪಲಿದೆ. ನಗದು ಹಣ ಇಲ್ಲದವರು ಇನ್ನು ಮುಂದೆ ಡಿಜಿಟಲ್ ವ್ಯವಸ್ಥೆಯಡಿ ಸಾಮಾನ್ಯ ಟಿಕೆಟ್ ಪಡೆಯಬಹುದು. ಇದು ಪ್ರಯಾಣಿಕರಿಗೆ ಚಿಲ್ಲರೆ ಕಿರಿ ಕಿರಿ ತಪ್ಪಲಿದೆ, ಕೌಂಟರ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸುಲಭವಾಗುವುದು ಸೇರಿದಂತೆ ಕೆಲವು ಪ್ರಯೋಜನ ನೀಡಲಿದೆ ಎಂದು ನೈಋತ್ಯ ರೈಲ್ವೆ ಪಿಆರ್‌ಒ ಮಾಹಿತಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+