SWR: 4 ತಿಂಗಳು ಬೆಂಗಳೂರಿನಿಂದ ಹೊರಡುವ ರೈಲುಗಳ ವೇಳಾಪಟ್ಟಿ ಬದಲಾವಣೆ: Monsoon Time Table

ಬೆಂಗಳೂರು, ಏಪ್ರಿಲ್ 25: ಮುಂಗಾರು ಮಳೆಗಾಲ ಆಗಮಿಸಲು ಇನ್ನು ಸಮಯವಿದೆ. ಅದಾಗಲೇ ನೈಋತ್ಯ ರೈಲ್ವೆ ಮಳೆಗಾಲ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮುಂಗಾರು ಮಳೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಸುಗಮ ಸಂಚಾರಕ್ಕಾಗಿ ನೈರುತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಸಂಚರಿಸುವ ಕೆಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಈ ಕುರಿತು ಕೊಂಕಣ ರೈಲ್ವೆ ನಿಗಮ ನಿಯಮಿತ ತಿಳಿಸಿದ್ದು, ಈ ಪರಿಷ್ಕೃತ ವೇಳಾಪಟ್ಟಿ 2025ರ ಜೂನ್ ಹದಿನೈದರಿಂದ ಅಕ್ಟೋಬರ್ ಇಪ್ಪತ್ತರವರೆಗೆ ಜಾರಿಯಲ್ಲಿರುತ್ತದೆ.

ಪರಿಷ್ಕೃತ ಸಮಯವು 2025ರ ಜೂನ್ ಹದಿನೈದರಂದು ಅಥವಾ ನಂತರ ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಅನ್ವಯಿಸುತ್ತದೆ ಎಂದು ಗುರುವಾರ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಗಾರು ವೇಳಾಪಟ್ಟಿ ಅನ್ವಯವಾಗುವ ರೈಲುಗಳ ವಿವರ ಹೀಗಿದೆ.

SWR has Changed Monsoon 2025 Schedule of Some Trains Effect from June 15 to October 20

ಮುಂಗಾರು ರೈಲು ವೇಳಾಪಟ್ಟಿ

* ರೈಲು ಸಂಖ್ಯೆ 16595/16596 ಕೆಎಸ್‌ಆರ್ ಬೆಂಗಳೂರು-ಕಾರವಾರ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು

* ರೈಲು ಸಂಖ್ಯೆ 16585/16586 ಎಎಮ್‌ವಿಟಿ ಬೆಂಗಳೂರು-ಮುರಡೇಶ್ವರ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು

* ರೈಲು ಸಂಖ್ಯೆ 16515/16516 ಯಶವಂತಪುರ-ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು

* ರೈಲು ಸಂಖ್ಯೆ 12741/12742 ವಾಸ್ಕೋಡಗಾಮಾ-ಪಾಟ್ನಾ-ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು

* ರೈಲು ಸಂಖ್ಯೆ 11097/11098 ಪುಣೆ-ಎರ್ನಾಕುಲಂ-ಪುಣೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು.

ಈ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ದಿನಾಂಕದ ಮುಂಚಿತವಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ನವೀಕರಿಸಲಾದ ವೇಳಾಪಟ್ಟಿಯ ಕುರಿತಾದ ಮಾಹಿತಿಯು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆ.

ಇನ್ನೂ ಬೆಂಗಳೂರಿನ ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ತೆರಳುವ ಬೆಂಗಳೂರು ಎಸ್‌ಎಂವಿಟಿ-ದಾನ್‌ಪುರ್ ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಮರು ಹೊಂದಿಸಲಾಗಿದೆ. ಇದೇ ಏಪ್ರಿಲ್ 25ರಿಂದ ರಾತ್ರಿ 11.50ರ ಬದಲಾಗಿ 01 ಗಂಟೆಯಿಂದ ಸಂಚರಿಸಲಿದೆ. ಕಾರ್ಯಾಚರಣೆಗಳ ಕಾರಣದಿಂದ ಸಮಯ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+