Get Updates
Get notified of breaking news, exclusive insights, and must-see stories!

SWR ಗುಡ್ ನ್ಯೂಸ್: ಬೆಂಗಳೂರಿನಿಂದ ಇಲ್ಲಿಗೆ ವಿಶೇಷ ರೈಲುಗಳ ಕಾರ್ಯಾಚರಣೆ, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 01: ದಸರಾ ಪ್ರಯುಕ್ತ ಮಾತ್ರವಲ್ಲದೇ ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ವಿಶೇಷ ರೈಲುಗಳ ಸೇವೆ ಆರಂಭಿಸಿದೆ. ಈ ಸೇವೆಯು ಸೆಪ್ಟೆಂಬರ್ 28 ರಂದೇ ಆರಂಭವಾಗಿದ್ದು, ಅಕ್ಟೊಬರ್ 5 ಮತ್ತು 6ರವರೆಗೆ ಮುಂದುವರಿಯಲಿದೆ. ಇದರಿಂದ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಬಹುದಾಗಿದೆ. ಈ ಮಾರ್ಗಗದ ಪ್ರಯಾಣಿಕರಿಗೆ ಅನುಕೂಲ ಒದಗಿಸಿದಂತಾಗುತ್ತದೆ.

ನೈಋತ್ಯ ರೈಲ್ವೆಯು (South Western Railway) ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ-ಎರ್ನಾಕುಲಂ ಜಂಕ್ಷನ್ ನಡುವೆ ವಿಶೇಷ ರೈಲು ಸೇವೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ರೈಲುಗಳ ಸಮಯ, ಸಂಖ್ಯೆ, ನಿಲುಗಡೆ ಹಾಗೂ ವೇಳಾಪಟ್ಟಿ ಇಲ್ಲಿದೆ.

SWR Annoueced Special Train Services Between Ernakulam and Bengaluru Cant See Schedule

ಎರ್ನಾಕುಲಂ- ಬೆಂಗಳೂರು ಕಂ. ನಿಲ್ದಾಣ ರೈಲುಗಳ ವೇಳಾಪಟ್ಟಿ

* ರೈಲು ಸಂಖ್ಯೆ 06147 ಎರ್ನಾಕುಲಂ ಜಂಕ್ಷನ್ ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷವು ಸೆಪ್ಟೆಂಬರ್ 28ರಿಂದ ಕಾರ್ಯಾರಂಭ ಮಾಡಿದೆ. 2025 ಅಕ್ಟೋಬರ್ 5ರ ಭಾನುವಾರಗಳಂದು ಸಂಜೆ 4:20 ಕ್ಕೆ ಎರ್ನಾಕುಲಂ ಜಂಕ್ಷನ್ (ERS) ನಿಂದ ಹೊರಡುತ್ತದೆ. ಮರುದಿನ (ಸೋಮವಾರ) ಬೆಳಗ್ಗೆ 08:15 ಕ್ಕೆ ಬೆಂಗಳೂರು ಕಂಟೋನ್ಮೆಂಟ್ (BNC) ನಿಲ್ದಾಣಕ್ಕೆ ಬರಲಿದೆ. ಈ ರೈಲು 2 ಟ್ರಿಪ್‌ ಸೇವೆ ನೀಡಲಿದೆ.

* ಬೆಂಗಳೂರು ಕಂಟೋನ್ಮೆಂಟ್ ಎರ್ನಾಕುಲಂ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06148) ವಿಶೇಷವು 2025 ಸೆಪ್ಟೆಂಬರ್ 29 ಮತ್ತು 2025 ಅಕ್ಟೋಬರ್ 6ರಂದು ಸೋಮವಾರ ರಾತ್ರಿ 22:10 ಕ್ಕೆ ಬೆಂಗಳೂರು ಕಂಟೋನ್ಮೆಂಟ್ (BNC) ನಿಂದ ಹೊರಡುತ್ತದೆ. ಈ ರೈಲು ಮೂರನೇ ದಿನ (ಮಂಗಳವಾರ) ಬೆಳಗ್ಗೆ 10:00 ಗಂಟೆಗೆ ಎರ್ನಾಕುಲಂ ಜಂಕ್ಷನ್ (ERS) ತಲುಪಲಿದೆ. ಈ ರೈಲು ಸಹ 2 ಟ್ರಿಪ್‌ಗಳ ಸೇವೆ ನೀಡುತ್ತದೆ.

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಅಲುವಾ, ತ್ರಿಶೂರ್, ಪಾಲಕ್ಕಾಡ್ ಜಂಕ್ಷನ್, ಪೋದನೂರು ಜಂಕ್ಷನ್, ತಿರುಪ್ಪೂರು, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಬಂಗಾರಪೇಟೆ, ವೈಟ್‌ಫೀಲ್ಡ್, ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಪ್ರಯಾಣಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

ಈ ರೈಲು 22 LHB ಬೋಗಿಗಳೊಂದಿಗೆ ಚಲಿಸಲಿದೆ. ಇದರಲ್ಲಿ ಎರಡು ಎಸಿ ಪ್ರಥಮ ದರ್ಜೆ, ಮೂರು ಎಸಿ 2-ಟೈರ್, ಏಳು ಎಸಿ 3-ಟೈರ್ ಎಕಾನಮಿ, ನಾಲ್ಕು ಸ್ಲೀಪರ್ ಕ್ಲಾಸ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಜನರೇಟರ್ ಹೊಂದಿರುವ ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಸೇರಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮುಂಗಡ ಬುಕ್ಕಿಂಗ್ ಗಾಗಿ ನೀವು IRCTC ವೆಬ್‌ಸೈಟ್, ಆಪ್ ಮೂಲಕ ಬುಕ್ ಮಾಡಿಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+