SWR: ಗುಡ್‌ನ್ಯೂಸ್, ಬೆಂಗಳೂರಿನಿಂದ ಹೊರ ರಾಜ್ಯಕ್ಕೆ ವಿಶೇಷ ರೈಲು ಸೇವೆ: ನಿಲುಗಡೆ, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 24: ಕರ್ನಾಟಕ ಒಳಗೊಂಡಂತೆ ದೇಶದ ವಿವಿದ ಮಾರ್ಗಗಳಲ್ಲಿ ಭಾರತೀ ರೈಲ್ವೆ ಇಲಾಖೆಯು ಗಣೇಶ ಹಬ್ಬದ ಪ್ರಯುಕ್ತ ವಿಶೇಷ ರೈಲು ಸೇವೆ ನೀಡುತ್ತಿದೆ. ಇದೀಗ ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಬರೋಬ್ಬರಿ 13 ಟ್ರಿಪ್ ಸೇವೆ ಒದಗಿಸುತ್ತಿದೆ. ಈ ಮೂಲಕ ಹಬ್ಬದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಜೊತೆಗೆ ಸಾರ್ವಜನಿಕರಿಗೆ ಹಬ್ಬಕ್ಕೆ ಹೆಚ್ಚುವರಿ ಸಾರಿಗೆ ಸೇವೆ ಒದಗಿಸುತ್ತಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ಬೆಂಗಳೂರುSMVT-ನಾರಂಗಿ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06559) ಅನ್ನು ನೈಋತ್ಯ ರೈಲ್ವೆ ಕಾರ್ಯಾಚರಣೆ ಮಾಡಲಿದೆ. ಎರಡು ಮಾರ್ಗಗಳ ರೈಲು ಸಂಚಾರ, ಸಮಯ, ದಿನಾಂಕ ಹಾಗೂ ನಿಲುಗಡೆ ನಿಲ್ದಾಣಗಳ ಮಾಹಿತಿ ಇಲ್ಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್‌ಗೂ ಅವಕಾಶ ನೀಡಲಾಗಿದೆ.

ಈ ರೈಲು ಸೆಪ್ಟಂಬರ್ 02. ರಿಂದ 25.11.2025 ರವರೆಗೆ ಸಂಚಾರ ಮಾಡಲಿದೆ. ಬೆಂಗಳೂರು SMVT-ನಾರಂಗಿ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06559) ಪ್ರತಿ ಮಂಗಳವಾರ SMVT ಬೆಂಗಳೂರಿನಿಂದ 23:40 ಗಂಟೆಗೆ ಹೊರಡುತ್ತದೆ. ಶುಕ್ರವಾರ ಬೆಳಗ್ಗೆ 05:00 ಗಂಟೆಗೆ ನಾರಂಗಿ ತಲುಪುತ್ತದೆ.
ಮರಳಿ ಅದೇ ದಿಕ್ಕಿನಲ್ಲಿ ನಾರಂಗಿ-ಬೆಂಗಳೂರು SMVT ರೈಲು (06560) ಸೆಪ್ಟಂಬರ್ 06 ರಿಂದ 29.11.2025 ರವರೆಗೆ ಪ್ರತಿ ಶನಿವಾರ ಸಂಚರಿಲಿಲಿದೆ. ನಾರಂಗಿಯಿಂದ ಬೆಳಗ್ಗೆ 05:30 ಗಂಟೆಗೆ ಹೊರಟು, ಸೋಮವಾರ ಬೆಳಗ್ಗೆ 09:45 ಕ್ಕೆ ಬೆಂಗಳೂರು SMVT ಗೆ ಬಂದು ಸೇರುತ್ತದೆ.
ವಿಶೇಷ ರೈಲು ನಿಲುಗಡೆ ನಿಲ್ದಾಣಗಳು
ಈ ರೈಲು ಅಜಪುರಂ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟ, ಗುಡೂರು, ಓಂಗೋಲೆ, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಖುರ್ದಾ ರಸ್ತೆ, ಭುವನೇಶ್ವರ, ಕಟಕ್, ಭದ್ರಕ್, ಬಲೇಶ್ವರ, ಖರಗ್‌ಪುರ, ಆಂದುಲ್, ದಂಕುಣಿ, ಬರ್ದ್ಧಮಾನ್, ಬೋಲ್‌ಪುರ್ (ಶಾಂತಿನಿಕೇತನ), ರಾಂಪುರ್ ಹ್ಯಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬಾರ್ಸೋಯಿ, ಜಲು ಕಿಬ್ಶನ್ ನ್ಯೂ, ಬಾರ್ಸೋಯಿ, ಜಲ್ಪೈಗುರಿ ರಸ್ತೆ, ನ್ಯೂ ಕೂಚ್ ಬೆಹಾರ್, ನ್ಯೂ ಅಲಿಪುರ್ದುವಾರ್, ನ್ಯೂ ಬೊಂಗೈಗಾಂವ್, ಬಾರ್ಪೇಟಾ ರಸ್ತೆ, ರಂಗಿಯಾ, ಕಾಮಾಖ್ಯ ಮತ್ತು ಗುವಾಹಟಿ ನಿಲ್ದಾಣಗಳಲ್ಲಿ ಎರಡು ಬದಿ ಸಂಚಾರ ವೇಳೆ ನಿಲುಗಡೆ ನೀಡಲಿದೆ.
ಈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಎಲ್ಲ ವರ್ಗದ ಕೋರ್ಚ್‌ಗಳನ್ನು ಒಳಗೊಂಡಂತೆ ಒಟ್ಟು 21 ಬೋಗಿಗಳನ್ನು ಹೊಂದಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಅನ್ನು IRCTC ವೆಬ್‌ಸೈಟ್, ಅಪ್ಲಿಕೇಷನಲ್ಲಿ ಬುಕ್ ಮಾಡಬಹುದು. ರೈಲುಗಳ ಮಾಹಿತಿ, ವಿವರ ಇತರ ವಿಚಾರಣೆಗೆ ಪ್ರಯಾಣಿಕರು 139 ಗೆ ಸಂಪರ್ಕಿಸಬೇಕು. ಇಲ್ಲವೇ ವೆಬ್‌ಸೈಟ್ www.enquiry.indianrail.gov.in ಇಲ್ಲವೇ NTES ಅಪ್ಲಿಕೇಶನ್ ಬಳಸುವಂಥೆ SWR ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications