ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಗೆ ದಂಡ ಕಟ್ಟಲೂ ಬಂತು ಕಾರ್ಡ್ ಸ್ವೈಪಿಂಗ್ ಸೌಲಭ್ಯ

ದಂಡ ವಸೂಲಿಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಹೊಸ ವ್ಯವಸ್ಥೆ. ಕಾರ್ಡ್ ಸ್ವೈಪಿಂಗ್ ಯಂತ್ರಗಳನ್ನು ಅಳವಡಿಸಿಕೊಂಡ ಟ್ರಾಫಿಕ್ ಪೊಲೀಸರು.

|
Google Oneindia Kannada News

ಬೆಂಗಳೂರು, ಆಗಸ್ಟ್ 15: ಬೆಂಗಳೂರು ಟ್ರಾಫಿಕ್ ಪೊಲೀಸರ ಬಳಿ ಸಿಕ್ಕಿಹಾಕಿಕೊಂಡಿದ್ದೀರಾ? ಅವರು ಹೇಳಿದಷ್ಟು ದಂಡ ಕಟ್ಟಲು ನಿಮ್ಮಲ್ಲಿ ಆ ಸಮಯಕ್ಕೆ ಬೇಕಾದಷ್ಟು ಹಣವಿಲ್ಲವೇ?

ಇಂಥ ಸಂದರ್ಭದಲ್ಲಿ, ಪೊಲೀಸರಿಗೆ ದಂಡ ಕಟ್ಟಲು ಹಣಕ್ಕಾಗಿ ತಡಕಾಡಬೇಡಿ. ತಲೆ ಕೆಡಿಸಿಕೊಳ್ಳಬೇಡಿ. ಇಂಥ ಸಮಸ್ಯೆಯನ್ನು ನಿವಾರಿಸಲೆಂದೇ, ಟ್ರಾಫಿಕ್ ಪೊಲೀಸರು ಈಗ ಕಾರ್ಡ್ ಸ್ವೈಪಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಈ ವ್ಯವಸ್ಥೆಯಡಿ, ಜನರು ತಮ್ಮಲ್ಲಿನ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಪೊಲೀಸರಿಗೆ ದಂಡ ಕಟ್ಟಬಹುದಾಗಿದೆ.

Swipe Your Card to Pay ‘Challan’ Anywhere in Bengaluru

ಅಸಲಿಗೆ, ಕಾರ್ಡ್ ಸ್ವೈಪಿಂಗ್ ವ್ಯವಸ್ಥೆ ಜಾರಿಯ ತುರ್ತು ಅವಶ್ಯಕತೆ ಬಂದಿದ್ದು, ಅಪನಗದೀಕರಣದ ನಂತರದ ಸನ್ನಿವೇಶದಲ್ಲಿ. ಆಗ, ಪೊಲೀಸರಿಗೆ ದಂಡ ತೆರಬೇಕಿದ್ದ ಜನರಿಗೂ, ಅವರಿಂದ ದಂಡ ವಸೂಲಿ ಮಾಡಬೇಕಿದ್ದ ಪೊಲೀಸರಿಗೂ ಇಬ್ಬರಿಗೂ ತಲೆ ನೋವು ಉಂಟಾಗಿತ್ತು.

ಹಾಗಾಗಿಯೇ, ಸ್ವೈಪಿಂಗ್ ವ್ಯವಸ್ಥೆಗೆ ಬೇಕಾದ ಪಿಒಎಸ್ ಯಂತ್ರಗಳಿಗೆ ಬೇಡಿಕೆ ಬಂದಿತ್ತು. ಹಾಗಾಗಿ, ಜುಲೈ ತಿಂಗಳಲ್ಲೇ ಒಟ್ಟು 650 ಪಿಒಎಸ್ ಯಂತ್ರಗಳನ್ನು ಪೊಲೀಸ್ ಇಲಾಖೆ ಖರೀದಿಸಿತು.

ಜನವರಿ 1ರಿಂದ ಕೇಂದ್ರ ಸರ್ಕಾರವು ಟ್ರಾಫಿಕ್ ನಿಯಮ ಉಲ್ಲಂಘನೆಗಳಿಗೆ ವಿಧಿಸಲಾಗಿರುವ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ ನಂತರ, ಪೊಲೀಸ್ ಇಲಾಖೆಗೆ ಬರುವ ದಂಡದ ಪ್ರಮಾಣವೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.

English summary
The next time you are caught for a traffic violation in Bengaluru, you can simply swipe your debit or credit card. City cops recently adopted a new device, which can find motorists’ past violations, create a new violation notice, take the payment by card and print a receipt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X