ಯುವತಿಯೊಡನೆ ಅಸಭ್ಯ ವರ್ತನೆ: ಗ್ರಾಹಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದ ಸ್ವಿಗ್ಗಿ
ಬೆಂಗಳೂರು, ಏ.2: ಗ್ರಾಹಕರ ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆ.ನಮ್ಮಿಂದ ತಪ್ಪಾಗಿಲ್ಲ ಎಂದು ಸ್ವಿಗ್ಗಿ ಸಮರ್ಥಿಸಿಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಘಟನೆ ನಡೆದ ಸಮಯದಿಂದಲೂ ಗ್ರಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಡೆಲಿವರಿ ಬಾಯ್‌ನ್ನು ವಜಾಗೊಳಿಸಿದ್ದೇವೆ. ಸಮಸ್ಯೆ ಬಗೆಹರಿದಿದೆ. ಯಾವುದೇ ಭಯವಿಲ್ಲದೆ ಸ್ವಿಗ್ಗಿಯಲ್ಲಿ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ.

ಆಹಾರವನ್ನು ಸರಬರಾಜು ಮಾಡುವವರಿಗೆ ತರಬೇತಿ ನೀಡಲಾಗುತ್ತದೆ. ಗ್ರಾಹಕರ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಕೂಡ ತಿಳಿಸಲಾಗುತ್ತದೆ. ಹಾಗೆಯೇ ಅವರ ಹಿನ್ನೆಲೆ ಏನು ಎನ್ನುವುದನ್ನು ಅರಿತು ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಗ್ರಾಹಕರ ಸುರಕ್ಷತೆಗೆ ನಾವು ಗಮನ ಕೊಡುತ್ತೇವೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದಿದೆ.
ಗ್ರಾಹಕರೊಬ್ಬರ ಮನೆಗೆ ಆಹಾರ ಡೆಲಿವರಿ ಮಾಡಲು ಹೋದಾಗ ಡೆಲಿವರಿ ಬಾಯ್ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ್ದ ಎಂದು ಯುವತಿ ದೂರು ನೀಡಿದ್ದಳು.












Click it and Unblock the Notifications