ಬೆಂಗಳೂರಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಮಚ್ಚು ತೋರಿಸಿ ದರೋಡೆ
Recommended Video
ಬೆಂಗಳೂರು, ಜನವರಿ 27: ಕಾರ್ ಮಾಲಿಕನೊಬ್ಬನನಿಗೆ ಗನ್ ತೋರಿಸಿ ಕಾರಿನ ಜೊತೆಗೆ ಒಡೆವೆಗಳನ್ನು ದೋಚಿಹೋದ ಘಟನೆ ಮಾಸುವ ಮುನ್ನವೇ ಮತ್ತೊಂದು ದರೋಡೆ ಪ್ರಕರಣ ನಡೆದಿದೆ.
ಕಿಡಿಗೇಡಿಗಳು ಮಚ್ಚು ಹಿಡಿದು ಸ್ವಿಗ್ಗಿ ಡೆಲಿವರಿ ಬಾಯ್ ಹತ್ತಿರವಿದ್ದ ಹಣವನ್ನೆಲ್ಲಾ ದೋಚಿ ಪರಾರಿಯಾಗಿದ್ದಾರೆ.
ದೊಮ್ಮಲೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‍ಗೆ ಬೆಳಗ್ಗಿನ ಜಾವ 4.30ರ ವೇಳೆಗೆ ಮಚ್ಚಿನಲ್ಲಿ ಒಬ್ಬ ವ್ಯಕ್ತಿ ಅಟ್ಯಾಕ್ ಮಾಡಲು ಮುಂದಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಸ್ವಿಗ್ಗಿ ಡೆಲಿವರಿ ಮಾಡುವ ಯುವಕನ ಬೈಕನ್ನು ಅಡ್ಡಗಟ್ಟಿ ಮಚ್ಚು ಝಳಪಿಸಿ ದುಡ್ಡು ಕಿತ್ತುಕೊಂಡಿದ್ದಾನೆ.

ನಗರಗಳಲ್ಲಿ ಪದೇ ಪದೇ ಈ ರೀತಿಯ ಘಟನೆ ನಡೆಯುತ್ತಿರೋದು ನೋಡಿದ್ರೇ ಎಷ್ಟರಮಟ್ಟಿಗೆ ಪೊಲೀಸ್ ಭದ್ರತೆ ಒದಗಿಸುತ್ತಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿದೆ. ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮಧ್ಯರಾತ್ರಿ ಕೂಡ ಈ ರೀತಿ ಘಟನೆಗಳು ನಡೆಯುತ್ತಿದ್ದವು. ಆದರೆ ಇದೀಗ ಬೆಳಗ್ಗಿನ ಜಾವ ಈ ರೀತಿ ಘಟನೆ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ. ಇದೇ ರೀತಿ, ದ್ವಿಚಕ್ರ ವಾಹನ ಕಳ್ಳತನ, ಮೊಬೈಲ್ ಕಳ್ಳತನ, ಸರಗಳ್ಳತನ ಎಲ್ಲವೂ ಹೆಚ್ಚಾಗಿದೆ.












Click it and Unblock the Notifications