ವಿದ್ಯಾರಣ್ಯಪುರ ಕ್ಲೀನ್ ಆಯ್ತು, ಇನ್ನು ನಿಮ್ಮಿಷ್ಟ!
ಬೆಂಗಳೂರು, ಜ.29 : ಉದ್ಯಾನ ನಗರಿ ಬೆಂಗಳೂರನ್ನು ಸ್ವಚ್ಛ ನಗರಿಯಾಗಿಸಲು ಪಣತೊಟ್ಟಿರುವ ಪ್ರೊ. ಎಂವಿ ರಾಜೀವ್ ಗೌಡ ಅವರ ನೇತೃತ್ವದ ತಂಡ ಬುಧವಾರ ವಿದ್ಯಾರಣ್ಯಪುರದಲ್ಲಿ 'ಸ್ವಲ್ಪ ಕ್ಲೀನ್ ಅಪ್ ಮಾಡಿ' ಅಭಿಯಾನವನ್ನು ನಡೆಸಿತು. ತಂಡ ಬೆಂಗಳೂರು ನಗರದಲ್ಲಿ ನಡೆಸಿದ 13ನೇ ಅಭಿಯಾನವೂ ಯಶಸ್ವಿಯಾಗಿ ಮುಕ್ತಾಯವಾಯಿತು.
ಬುಧವಾರ ವಿದ್ಯಾರಣ್ಯಪುರದ 16 ಕ್ರಾಸ್ ಎಚ್ಎಂಟಿ ಪಾರ್ಕ್ ಹೊರಗೆ ಪ್ರೊ.ಎಂವಿ ರಾಜೀವ್ ಗೌಡ ತಂಡ ಸ್ಪಲ್ಟ ಕ್ಲೀನ್ ಅಪ್ ಮಾಡಿ ಅಭಿಯಾನ ನಡೆಸಿತು. ಸ್ಥಳೀಯ ಶಾಸಕ ಮತ್ತು ಕೃಷಿ ಸಚಿವ ಕೃಷ್ಣಬೈರೇಗೌಡ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಬುಧವಾರ ಬೆಳಗ್ಗೆ 7.45ಕ್ಕೆ ಆರಂಭವಾದ ಅಭಿಯಾನ 3.45ಕ್ಕೆ ಅಂತ್ಯವಾಯಿತು. [ಸ್ವಲ್ಪ ಕ್ಲೀನ್ ಅಪ್ ಮಾಡಿ ಅಭಿಯಾನಕ್ಕೆ ಚಾಲನೆ]
ಸ್ಪಲ್ಟ ಕ್ಲೀನ್ ಅಪ್ ತಂಡದ ಕಾರ್ಯಕರ್ತರು ಕೆಲವು ದಿನಗಳಿಂದ ಸ್ಥಳದಲ್ಲಿ ಪರಿಶೀಲನೆ ನಡೆಸಿ, ನಿರಂತರವಾಗಿ ಕಸ ಸುರಿಯುವ ಸ್ಥಳವನ್ನು ಹೇಗೆ ಕ್ಲೀನ್ ಮಾಡಬೇಕು ಎಂದು ಯೋಜನೆ ರೂಪಿಸಿದರು. ಅದರಂತೆ ಬುಧವಾರ ಪ್ರೊ.ರಾಜೀವ್ ಗೌಡ ಸುಮಾರು 30 ಕಾರ್ಯಕರ್ತರ ಜೊತೆ ಸ್ಥಳಕ್ಕೆ ತೆರಳಿ ಅಭಿಯಾನವನ್ನು ಪೂರ್ಣಗೊಳಿಸಿದರು.

13ನೇ ಅಭಿಯಾನ
ಪ್ರೊ. ಎಂವಿ ರಾಜೀವ್ ಗೌಡ ಅವರ ನೇತೃತ್ವದ ತಂಡ ಬುಧವಾರ ವಿದ್ಯಾರಣ್ಯಪುರದಲ್ಲಿ 'ಸ್ವಲ್ಪ ಕ್ಲೀನ್ ಅಪ್ ಮಾಡಿ' ಅಭಿಯಾನವನ್ನು ನಡೆಸಿತು. ತಂಡ ಬೆಂಗಳೂರು ನಗರದಲ್ಲಿ ನಡೆಸಿದ 13ನೇ ಅಭಿಯಾನವೂ ಯಶಸ್ವಿಯಾಗಿ ಮುಕ್ತಾಯವಾಯಿತು.

ಸಚಿವರು ಪಾಲ್ಗೊಂಡಿದ್ದರು
ಬುಧವಾರ ವಿದ್ಯಾರಣ್ಯಪುರದ ಎಚ್ಎಂಟಿ ಪಾರ್ಕ್ ಹೊರಗೆ ನಡೆದ `ಸ್ಪಲ್ಟ ಕ್ಲೀನ್ ಅಪ್ ಮಾಡಿ ಅಭಿಯಾನ`ದಲ್ಲಿ ಸ್ಥಳೀಯ ಶಾಸಕ ಮತ್ತು ಕೃಷಿ ಸಚಿವ ಕೃಷ್ಣಬೈರೇಗೌಡ ಈ ಪಾಲ್ಗೊಂಡಿದ್ದರು.

ಕ್ರಿಯಾತ್ಮಕ ಯೋಜನೆ
ಸ್ಪಲ್ಟ ಕ್ಲೀನ್ ಅಪ್ ತಂಡದ ಕಾರ್ಯಕರ್ತರು ಕೆಲವು ದಿನಗಳಿಂದ ಸ್ಥಳದಲ್ಲಿ ಪರಿಶೀಲನೆ ನಡೆಸಿ, ನಿರಂತರವಾಗಿ ಕಸ ಸುರಿಯುವ ಸ್ಥಳವನ್ನು ಹೇಗೆ ಕ್ಲೀನ್ ಮಾಡಬೇಕು ಎಂದು ಯೋಜನೆ ರೂಪಿಸಿದ್ದರು. ಇಂದು ಅಭಿಯಾನ ನಡೆಸುವ ಮೂಲಕ ಪ್ರದೇಶವನ್ನು ಸ್ವಚ್ಛಗೊಳಿಸಿದರು.

ಏನಿದು ಸ್ವಲ್ಪ ಕ್ಲೀನ್ ಅಪ್ ಮಾಡಿ
ಉದ್ಯಾನ ನಗರಿ ಬೆಂಗಳೂರನ್ನು ಸ್ವಚ್ಛ ನಗರಿಯಾಗಿಸಲು ಪಣತೊಟ್ಟಿರುವ ಪ್ರೊ. ಎಂವಿ ರಾಜೀವ್ ಗೌಡ ಅವರ ನೇತೃತ್ವದ ತಂಡ 'ಸ್ವಲ್ಪ ಕ್ಲೀನ್ ಅಪ್ ಮಾಡಿ' ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ. ಸಮಾನ ಮನಸ್ಕ ನಾಗರೀಕರು, ವಿದ್ಯಾರ್ಥಿಗಳ ಜತೆ ಕಾರ್ಪೊರೇಟರ್ ಗಳು ಕೂಡಾ ಈ ಅಭಿಮಾನಕ್ಕೆ ಕೈ ಜೋಡಿಸಿದ್ದಾರೆ.

ಮೊದಲು ಹೀಗಿತ್ತು, ನಂತರ ಹೀಗಾಯ್ತು
ಸ್ವಲ್ಪ ಕ್ಲೀನ್ ಅಪ್ ಮಾಡಿ' ಅಭಿಯಾನ ನಡೆಯುವುದಕ್ಕೂ ಮೊದಲು ಈ ಸ್ಥಳ ಹೀಗಿತ್ತು. ಸದ್ಯ ಹೇಗೆ ಬದಲಾಗಿದೆ ನೋಡಿ.

ಖಾಲಿಜಾಗ ಕಸದ ತೊಟ್ಟಿಯಲ್ಲ
ಬೆಂಗಳೂರಿನಲ್ಲಿ ಖಾಲಿಜಾಗ ಕಂಡರೆ ಅಲ್ಲಿ ಕಸವನ್ನು ಸುರಿಯುತ್ತಾರೆ. 'ಸ್ವಲ್ಪ ಕ್ಲೀನ್ ಅಪ್ ಮಾಡಿ' ಅಭಿಯಾನದ ನಂತರ ಕಸದಿಂದ ತುಂಬಿಹೋಗಿದ್ದ ಜಾಗ ಎಷ್ಟು ಸ್ವಚ್ಛವಾಗಿದೆ ನೋಡಿ.

ರಾಜೀವ್ ಗೌಡ ಅವರ ಕನಸು
'ಸ್ವಲ್ಪ ಕ್ಲೀನ್ ಅಪ್ ಮಾಡಿ' ಅಭಿಯಾನ ಪ್ರೊ.ರಾಜೀವ್ ಗೌಡ ಅವರ ಕನಸು. ಸಮಾನ ಮನಸ್ಕರ ಜೊತೆಗೂಡಿ ಅವರು ಈ ಅಭಿಯಾನವನ್ನು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಡೆಸಿದ್ದಾರೆ. ಮ್ಯಾನೇಜ್ಮೆಂಟ್, ರಾಜಕಾರಣ, ಕ್ವಿಜ್ ಮುಂತಾದ ಕ್ಷೇತ್ರಗಳಲ್ಲಿ 'ಮಾಸ್ಟರ್' ಅನ್ನಿಸಿಕೊಂಡಿರುವ ಬಹುಮುಖ ಪ್ರತಿಭೆಯ ಚಳವಳಿಗಾರ ಡಾ. ಎಂ.ವಿ. ರಾಜೀವ್ ಗೌಡ ಅವರಿಗೆ ಯಶಸ್ವಿ ರಾಜಕಾರಣಿಯಾಗುವ ಕನಸಿದೆ.












Click it and Unblock the Notifications