ಬೆಂಗಳೂರಿನಲ್ಲಿ ಸ್ವಲ್ಪ ಕ್ಲೀನ್ ಮಾಡಿ ಅಭಿಯಾನ

ಬೆಂಗಳೂರು, ನ. 22 : ಬೆಂಗಳೂರಿನ ಜನರಿಗೆ ಬಡವಾವಣೆಗಳನ್ನು ಸ್ವಚ್ಛಗೊಳಿಸಿ ಎಂದು ತಿಳಿಸುವ ಸ್ವಲ್ಪ ಕ್ಲೀನ್ ಮಾಡಿ ಅಭಿಯಾನಕ್ಕೆ ಭಾರೀ ಬೆಂಬಲ ದೊರಕಿದೆ. ಕಳೆದ ಎಂಟು ವರ್ಷಗಳಿಂದ ಕಸದ ಗುಂಡಿಯಾಗಿದ್ದ ಆರ್.ಟಿ.ನಗರ ಸಮೀಪದ ಚಾಮುಂಡಿನಗರದ ಮುಖ್ಯರಸ್ತೆಯಲ್ಲಿ ಭಾನುವಾರ ನಡೆದ ಸ್ವಲ್ಪ ಕ್ಲೀನ್ ಮಾಡಿ ಅಭಿಯಾನದಿಂದ ಸ್ಥಳ ಸ್ವಚ್ಛವಾಗಿದೆ.

Resurgent India ಸಂಸ್ಥೆ ಬೆಂಗಳೂರಿನಲ್ಲಿ "ರೀಡ್ ಮಾಡಿ, ಲೀಡ್ ಮಾಡಿ, ಸ್ವಲ್ಪ ಕ್ಲೀನ್ ಮಾಡಿ" ಎಂಬ ಅಭಿಯಾನ ಆರಂಭಿಸಿದೆ. ಸಂಸ್ಥೆಯ ಅಧ್ಯಕ್ಷ ರಾಜೀವ್ ಗೌಡ ಈ ಅಭಿಯಾನದ ರೂವಾರಿ. ಚಾಮುಂಡಿನಗರದಲ್ಲಿ ಭಾನುವಾರ ಸಂಸ್ಥೆ ಸ್ಥಳೀಯ ಬಿಬಿಎಂಪಿ ಸದಸ್ಯರ ಸಹಕಾರದಲ್ಲಿ ನಡೆದ ಅಭಿಯಾನದಿಂದಾಗಿ, ಕಸದ ತೊಟ್ಟಿಯಾಗಿದ್ದ ಮುಖ್ಯ ರಸ್ತೆ ಸದ್ಯ ಸ್ವಚ್ಛವಾಗಿದೆ.

Swalpa Clean up Maadi

ಮೊದಲು ರಾಜೀವ್ ಗೌಡ ತಮ್ಮ ತಂಡದೊಂದಿಗೆ ಚಾಮುಂಡಿ ನಗರಕ್ಕೆ ಆಗಮಿಸಿ ನಾಲ್ಕು ದಿನಗಳಿಂದ ಅಲ್ಲಿನ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಿದ್ದರು. ನಂತರ ಸ್ಥಳೀಯರ ಸಹಕಾರದೊಂದಿಗೆ ಸ್ಥಳವನ್ನು ಸ್ವಚ್ಛಗೊಳಿಸಿ, ಕಸದ ಗುಂಡಿಯನ್ನು ತೆರವುಗೊಳಿಸಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಥಳವನ್ನು ಕ್ಲೀನ್ ಮಾಡುವುದು ಹೇಗೆ ಎಂದು ಜನರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. (ಸ್ವಲ್ಪ ಕ್ಲೀನ್ ಅಪ್ ಮಾಡಿ ಅಭಿಯಾನಕ್ಕೆ ಚಾಲನೆ)

ಕಸದ ಗುಂಡಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೇ ಬಿಬಿಎಂಪಿ ಸದಸ್ಯರೇ ಅದನ್ನು ಕೈಬಿಟ್ಟಿದ್ದರು. ಆದರೆ, ಸ್ವಲ್ಪ ಕ್ಲೀನ್ ಮಾಡಿ ಅಭಿಯಾನದಿಂದ ಎಂಟು ವರ್ಷಗಳಿಂದ ಹಾಗೇ ಉಳಿದಿದ್ದ ಸ್ಥಳ ಸುಂದರವಾಗಿದೆ. ವೈಜ್ಞಾನಿಕವಾಗಿಯೇ ಇಲ್ಲಿನ ಕಸದ ಸಮಸ್ಯೆಯನ್ನು ಬಗೆಹರಿಸಲಾಗಿದೆ.

ಮೊದಲು ಪೌರ ಕಾರ್ಮಿಕರ ಸಹಾಯದಿಂದ ಸ್ಥಳದಲ್ಲಿನ ಕಸನವನ್ನು ತೆಯಲಾಯಿತು. ಪುಟ್ ಪಾತ್ ಸೇರಿದಂತೆ ಕೆಲವು ದುರಸ್ತಿಗಳನ್ನು ಪೂರ್ಣಗೊಳಿಸಲಾಯಿತು. ನಂತರ ಭಾನುವಾರ ಅಂತಿಮವಾಗಿ ಸ್ಥಳವನ್ನು ವಿಶ್ರಾಂತಿ ತೆಗೆದುಕೊಳ್ಳಲು ಯೋಗ್ಯವಾದ ಸ್ಥಳವಾಗಿ ಪರಿವರ್ತಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+