ಸೂಪರ್‌ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಆಗಮನ: ಸಹೋದರನ ಭೇಟಿ
ಬೆಂಗಳೂರು, ಡಿಸೆಂಬರ್ 07: ಸೂಪರ್‌ಸ್ಟಾರ್ ರಜನಿಕಾಂತ್ ದಿಢೀರನೆ ಬೆಂಗಳೂರಿಗೆ ಆಗಮಿಸಿದ್ದು, ಸಹೋದರನನ್ನು ಭೇಟಿಯಾಗಿದ್ದಾರೆ.
ರಾಜಕೀಯವನ್ನು ಪ್ರವೇಶಿಸಲು ಸಿದ್ಧರಾಗಿರುವ ರಜನೀಕಾಂತ್ಏಕಾಏಕಿ ಬೆಂಗಳೂರಿಗೆ ಭೇಟಿ ನೀಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ನಟ ರಜನಿಕಾಂತ್ ಡಿಸೆಂಬರ್ 06 ರಂದು ಬೆಂಗಳೂರಿನಲ್ಲಿರುವ ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ಅವರ ಮನೆಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು. ಈ ವೇಳೆ ಸಾಕಷ್ಟು ಹೊತ್ತು ಕುಳಿತು ರಜನಿಕಾಂತ್ ಮತ್ತು ಸತ್ಯನಾರಾಯಣ ಅವರು ಉಭಯ ಕುಶಲೋಪರಿ ವಿಚಾರಿಸಿದರು.

ಟ್ವೀಟ್ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ್ದ ರಜನಿಕಾಂತ್ , 'ಈಗ ಬದಲಾವಣೆ, ರೂಪಾಂತರ ತಾರದಿದ್ದರೆ ಮತ್ತೆ ಯಾವಾಗಲೂ ಸಾಧ್ಯವಿಲ್ಲ ಎಂದಿದ್ದಾರೆ. ಜನವರಿಯಲ್ಲಿ ಪಕ್ಷ ಆರಂಭವಾಗುತ್ತದೆ, ಈ ಸಂಬಂಧ ಡಿಸೆಂಬರ್ 31ರಂದು ಘೋಷಣೆ ಮಾಡಲಾಗುವುದು.
ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಧಾರ್ಮಿಕ ರಾಜಕೀಯ ತಮಿಳು ನಾಡಿನಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದರು.
ಇದೇ ಡಿಸೆಂಬರ್ 3ರಂದು ನಟ ರಜನಿಕಾಂತ್ ಜನವರಿಯಲ್ಲಿ ಹೊಸ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದರು. ಅಲ್ಲದೆ ಡಿಸೆಂಬರ್ 31ರಂದು ಹೊಸ ಪಕ್ಷ ಕಟ್ಟುವ ಕುರಿತ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.












Click it and Unblock the Notifications