ಸನ್ನಿ ಅಂದ್ರೆ ಫನ್ನಿ ಅಲ್ಲ, ಟ್ವಿಟ್ಟರಲ್ಲಿ ಗುಡುಗಿದ ಫ್ಯಾನ್ಸ್
ಬೆಂಗಳೂರು, ಡಿಸೆಂಬರ್ 19: ಬೆಂಗ್ಳೂರಲ್ಲಿ ಸೇಸಮ್ಮ ಸನ್ನಿ ಲಿಯೋನ್ ಡ್ಯಾನ್ಸ್ ನೋಡ್ಬೇಕು ಎಂದು ಟಿಕೆಟ್ ಬುಕ್ ಮಾಡಿಕೊಂಡವರು ಈಗ ಕೈ ಕೈ ಹಿಸುಕಿಕೊಳ್ಳಬೇಕಾಗಿದೆ. ಪೊಲೀಸರ ರಕ್ಷಣೆ ಸಿಗದ ಕಾರಣ ಕಾರ್ಯಕ್ರಮಕ್ಕೆ ಬರಕ್ಕಿಲ್ಲ ಎಂದು ನಟಿ ಸನ್ನಿ ಲಿಯೋನ್ ಅವರು ಮಂಗಳವಾರ ಹೇಳಿದ್ದಾರೆ. ಇದಾದ ಬಳಿಕ ಅಭಿಮಾನಿಗಳು ರೊಚ್ಚಿಗೆದ್ದು ಟ್ವಿಟ್ಟರ್ ನಲ್ಲಿ ಬೆಂಗಳೂರು ಪೊಲೀಸರು ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ.
'ಸನ್ನಿ ನೈಟ್' ಕಾರ್ಯಕ್ರಮದ ಅಯೋಜಕರು,ಕರ್ನಾಟಕ ರಕ್ಷಣಾ ವೇದಿಕೆ, ಸರ್ಕಾರದ ಪ್ರತಿರೋಧಕ್ಕೆ ಸವಾಲು ವಿರುದ್ಧ ರಿಟ್ ಅರ್ಜಿ ಸಲ್ಲಿಸಿ ಕೋರ್ಟಿನಲ್ಲಿ ಕಾನೂನು ಸಮರಕ್ಕೆ ನಾಂದಿ ಹಾಡಿದ್ದಾರೆ. ಆಯೋಜಕರಲ್ಲಿ ಒಬ್ಬರಾದ ಭವ್ಯ ಎಂಬುವರು ಟೈಮ್ ಕ್ರಿಯೆಷನ್ಸ್ ಪರವಾಗಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಮೌಖಿಕ ಆದೇಶವನ್ನಷ್ಟೇ ನೀಡಿದ್ದಾರೆ. ಕಾರ್ಯಕ್ರಮ ರದ್ದಾದರೆ ಭಾರಿ ನಷ್ಟವಾಗಲಿದೆ ಎಂದಿದ್ದಾರೆ.
ಸೇಸಮ್ಮ ಸಾಂಗಿನಲ್ಲಿ ಕುಣಿದಿರುವ ಸನ್ನಿ ಲಿಯೋನ್ 'ನಾನು ಇಲ್ಲಿಗೆ ಬರೋಕೆ ತುಂಬಾ ತೊಂದರೆ' ಎಂದು ಥೇಟ್ ಡಿಕೆ ಚಿತ್ರದ ಹಾಡಿನ ರೀತಿಯಲ್ಲೇ ಪ್ರತಿಕ್ರಿಯಿಸಿದ್ದಾರೆ. ಸನ್ನಿ ಟ್ವೀಟ್ ಗೆ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಸರ್ಕಾರದ ವಿರುದ್ಧ ದನಿ ಎತ್ತುವ ಸಾಲು
ಪ್ರೇಮ್ ನಟಿಸಿ, ನಿರ್ದೇಶಿಸಿದ ಡಿಕೆ ಚಿತ್ರದ ಸೇಸಮ್ಮ ಸಾಂಗ್ ನಲ್ಲೂ ಮಹಿಳೆಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ದನಿ ಎತ್ತುವ ಸಾಲುಗಳಿವೆ. ಈ ಕಾರ್ಯಕ್ರಮಕ್ಕೆ 2 ರಿಂದ 3 ಕೋಟಿ ರು ಹೂಡಿಕೆ ಮಾಡಲಾಗಿತ್ತು. ಪ್ರಕರಣ ಸದ್ಯ ಕೋರ್ಟ್ ಮೆಟ್ಟಿಲೇರಿದೆ.
| Array |
ಕುನಾಲ್ ಕಾಮ್ರ, ಸ್ಟಾಂಡ್ ಅಪ್ ಕಾಮಿಡಿಯನ್
ಕುನಾಲ್ ಕಾಮ್ರ, ಸ್ಟಾಂಡ್ ಅಪ್ ಕಾಮಿಡಿಯನ್ :ಉತ್ತರಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾತನಾಡುವ ಮುನ್ನ ಬೆಂಗಳೂರಿನ ಪರಿಸ್ಥಿತಿ ಸುಧಾರಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ನೇರವಾಗಿ ಪ್ರಶ್ನೆ ಹಾಕಿದ್ದಾರೆ.
|
ಮಧು ಮೆನನ್
ಸನ್ನಿ ಹಾಗೂ ಅವರ ಗೂಂಡಾಗಿರಿ ತಂಡದಿಂದ ನಮ್ಮನ್ನು ರಕ್ಷಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದ್ದಕ್ಕೆ ಧನ್ಯವಾದ ಎಂದು ಬೆಂಗಳೂರು ಪೊಲೀಸರಿಗೆ ಟ್ವೀಟ್ ಮಾಡಿದ್ದಾರೆ-ಮಧು ಮೆನನ್
|
ಚಿರಾಗ್ ಶಾ
ಪ್ರೀತೀಶ್ ನಂದಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಚಿರಾಗ್ ಶಾ ಅವರು ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೆಹಲಿಯ ಹೈಕಮಾಂಡ್ ಕೈಲಿದೆ ಹಾಗಾಗಿ ಇಂಥ ದುರಂತ ನೋಡಬೇಕಿದೆ ಎಂದಿದ್ದಾರೆ.
|
ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಜಯಂತಿ
ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಜಯಂತಿ ಆಚರಣೆ ನಡೆಯುತ್ತದೆ. ಗಲಭೆಗಳಾಗುತ್ತದೆ. ಆದರೆ, ಜನರಿಗೆ ಮನರಂಜನೆ ಸಿಗುವುದಕ್ಕೆ ಮಾತ್ರ ಕಡಿವಾಣ ಬೀಳುತ್ತದೆ. ಸನ್ನಿ ನೀವು ರಾಹುಲ್ ಗಾಂಧಿಯನ್ನು ಕೇಳಬೇಕಿತ್ತು.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications