Brand Bengaluru: ಬೆಂಗಳೂರು ಪರಿಸ್ಥಿತಿ ಸುಧಾರಿಸಲು ವಿದ್ಯಾರ್ಥಿಗಳು ಕೊಟ್ಟ ಸಲಹೆಗಳಿವು
ಆಕರ್ಷಕ ಬೆಂಗಳೂರನ್ನಾಗಿಸುವ ಸಲುವಾಗಿ ನಾಗರಿಕರಿಂದ ಸುಮಾರು 10,000 ಸಲಹೆಗಳು ಬಂದಿದ್ದು, ಬಂದಂತಹ ಸಲಹೆಗಳನ್ನು ಸರಿಯಾಗಿ ಅಧ್ಯಯನ ನಡೆಸಿ ಉತ್ತಮ ವರದಿಯನ್ನು ತಯಾರಿಸಿಕೊಡಲು ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ಬ್ಯ್ರಾಂಡ್ ಬೆಂಗಳೂರಿನ ನೋಡಲ್ ಅಧಿಕಾರಿಯಾದ ಜಯರಾಮ್ ರಾಯಪುರ ಸೃಷ್ಟಿ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಟೆಕ್ನಾಲಜಿ ಕಾಲೇಜು ಮುಖ್ಯಸ್ಥರಿಗೆ ಕೇಳಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ "ವೈಬ್ರಂಟ್ ಬೆಂಗಳೂರು / ಜನಹಿತ ಬೆಂಗಳೂರು" ವಿಷಯಕ್ಕೆ ಸಂಬಂಧಿಸಿದಂತೆ ಸೃಷ್ಟಿ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಟೆಕ್ನಾಲಜಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಆಕರ್ಷಕ ಬೆಂಗಳೂರಿಗೆ ಬಂದಂತಹ ಸಲೆಹೆಗಳ ಪ್ರ್ಯಾತ್ಯಕ್ಷಿಕೆಯ ಮೂಲಕ ಮಾಹಿತಿ ಪಡೆಯಲಾಯಿತು. ನಂತರ ಡಿಸೈನಿಂಗ್ ವಿದ್ಯಾರ್ಥಿಗಳನ್ನು 8 ಪ್ರತ್ಯೇಕ ತಂಡಗಳನ್ನಾಗಿ ಮಾಡಿ, ಆ ತಂಡಗಳಿಗೆ ವಿವಿಧ ವಿಷಯಗಳ ಕುರಿತು ಸಲಹೆಗಳನ್ನು ನೀಡಲು ಸೂಚಿಸಲಾಯಿತು.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಭಾಗಗಳಲ್ಲಿ ನಾಗರಿಕರಿಂದ ಸಾಕಷ್ಟು ಸಲಹೆಗಳನ್ನು ಪಡೆಯಲಾಗಿದೆ. ಅದನ್ನು ಕಾರ್ಯಗತಗೊಳಿಸುವ ಸಲುವಾಗಿ ಶೈಕ್ಷಣಿಕ ಸಂಸ್ಥೆಗಳ ಜೊತೆ ಪಾಲುದಾರಿಕೆ ಹೊಂದಲಾಗಿದೆ. ನಾಗರಿಕರಿಂದ ಸಾಕಷ್ಟು ಸಲಹೆಗಳು ಬಂದಿವೆ. ಅದರ ಜೊತೆಗೆ ವಿದ್ಯಾರ್ಥಿಗಳು ಕೂಡ ಸಲಹೆಗಳನ್ನು ನೀಡಿದರೆ, ಎಲ್ಲಾ ಸಲಹೆಗಳನ್ನು ಪರಿಶೀಲನೆ ನಡೆಸಿ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಿ ಉತ್ತಮ ಸಲಹೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಜಯರಾಮ್ ತಿಳಿಸಿದರು.
ಉತ್ತಮ ಸಲಹೆಗಳನ್ನು ಸರ್ಕಾರಕ್ಕೆ ಗಮನ ತರಲಾಗುವುದು
ನಗರದಲ್ಲಿ ಮೇಲುಸೇತುವೆಗಳ ಕೆಳಭಾಗ ಸುಂದರೀಕರಣಗೊಳಿಸುವುದು, ಬೆಂಗಳೂರು ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾರಂಪರಿಕ ಕಾರಿಡಾರ್ ನಿರ್ಮಾಣ, ಸಾರ್ವಜನಿಕ ಪ್ರದೇಶಗಳ ಅಭಿವೃದ್ಧಿ, ಗೋಡೆಗಳ ಮೇಲೆ ಆಕರ್ಷಕ ರೀತಿಯಲ್ಲಿ ಚಿತ್ರಗಳನ್ನು ಬಿಡಿಸುವುದು, ಆಂಪಿ-ಥಿಯೇಟರ್ ಗಳ ನಿರ್ಮಾಣ, ಸಾರ್ವಜನಿಕ ಸ್ಥಳಗಳಲ್ಲಿ ವಾಚನಾಲಯಗಳನ್ನು ತೆರೆಯುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಿಗ್ಗೆ ಉತ್ತಮ ಸಲಹೆಗಳು ಬಂದರೆ ಅದನ್ನು ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಬ್ರ್ಯಾಂಡ್ ಬೆಂಗಳೂರಿಗೆ ವಿದ್ಯಾರ್ಥಿಗಳು ಕೊಟ್ಟ ಸಲಹೆಗಳಿವು
ಬೆಂಗಳೂರಿನ ಪಾರಂಪರಿಕತೆ, ಸಂಸ್ಕೃತಿಯ ಬಗ್ಗೆ ಕ್ಯಾಲೆಂಡರ್ ಗಳಲ್ಲಿ ಮುದ್ರಿಸುವುದು. ಅದರಲ್ಲಿ ನಗರದಲ್ಲಾಗುವ ಮೇಳ, ಜಾತ್ರೆ, ಹಬ್ಬಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಪಾರಂಪರಿಕ ಸ್ಥಳಗಳ ಬಗ್ಗೆ ತಿಳಿಸುವುದು.
ಮೇಲುಸೇತುವೆ ಕೆಳಭಾಗದಲ್ಲಿ ಉದ್ಯಾನ ನಿರ್ಮಾಣ, ಆಟಿಕೆಗಳ ಅಳವಡಿಕೆ, ಪ್ರಾಣಿಗಳಿಗಾಗಿ ತಂಗುದಾಣ ನಿರ್ಮಾಣ, ವಿವಿಧ ಪ್ರತಿಮೆಗಳ ಅಳವಡಿಕೆ, ಪಾರ್ಕಿಂಗ್ ವ್ಯವಸ್ಥೆ ಮಾಡುವುದು
ಮೇಲುಸೇತುವೆಗಳ ಕೆಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಮೊಬೈಲ್ ಅಪ್ಲಿಕೇಷನ್ ಮೂಲಕ ಪೇ & ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಹಾಗೂ ಆಟೋಗಳಿಗೆ ತಂಗುದಾಣಗಳ ನಿರ್ಮಾಣ ಮಾಡುವುದು.
ತೆರೆದ ಪ್ರದೇಶಗಳಲ್ಲಿ ಆಸನಗಳ ವ್ಯವಸ್ಥೆ ಮಾಡುವುದು, ಪ್ರಮುಖ ಸ್ಥಳಗಳಲ್ಲಿ ಚೆಸ್ ಸೇರಿದಂತೆ ಇನ್ನಿತರೆ ಆಟಿಕಗಳನ್ನಿಟ್ಟು ಸಾರ್ವಜನಿಕರಿಗೆ ಆಟವಾಡಲು ಅನುವು ಮಾಡಿಕೊಡುವುದು.
ತೆರೆದ ಸ್ಥಳಗಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡುವುದು.
ಪಾದಚಾರಿ ಮಾರ್ಗಗಳಲ್ಲಿ ಪ್ರತ್ಯೇಕವಾಗಿ ಸೈಕಲ್ ಲೈನ್ ವ್ಯವಸ್ಥೆ ಕಲ್ಪಿಸುವುದು.
ವಲಸೆ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಹತೆ ನೀಡುವ ಸಲುವಾಗಿ ಶೈಕ್ಷಣಿಕ ಕಿಯೋಸ್ಕ್ ಗಳನ್ನು ತೆರೆಯುವುದು.
ಎಲ್ಲಾ ರಸ್ತೆ ಬದಿಯ ಖಾಲಿ ಜಾಗಗಳಿಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡುವುದು.
ಬೆಂಗಳೂರು ನಗರಕ್ಕೆ ಸಮಗ್ರ ಪರಂಪರೆ ಸಂರಕ್ಷಣಾ ಕಾನೂನು ಜಾರಿಗೆ ತರುವುದು.
ಬೆಂಗಳೂರಿನ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ತೆರೆದ ರಂಗಮಂದಿರಗಳು ಮತ್ತು ಸಾಂಪ್ರದಾಯಿಕ ಕೇಂದ್ರಗಳನ್ನು ಸ್ಥಾಪಿಸುವುದು.
ಸಿಗ್ನಲ್ ಫ್ರೀ ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ ನೀಡುವುದು.
ನಗರ ಕೇಂದ್ರಗಳನ್ನು ಸಂಪರ್ಕಿಸುವ ಕಾಲುದಾರಿಗಳ ನಿರ್ಮಾಣ ಮಾಡುವುದು
ಸರ್ಕಾರಿ ಮೂಲಸೌಕರ್ಯಗಳನ್ನು ರಿಂಗ್ ರೋಡ್ ಕಡೆಗೆ ಸ್ಥಳಾಂತರಿಸಿ, ಮೂಲಸೌಕರ್ಯಗಳಿದ್ದ ಸ್ಥಳದಲ್ಲಿ ಅತ್ಯಾಕರ್ಷಕ ಮೂಲಸೌಕರ್ಯವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು.
ವರ್ಚುವಲ್ ವಾಕ್ ನಿರ್ಮಾಣ
ಸಾರ್ವಜನಿಕ ಸ್ಥಳಗಲ್ಲಿ ನೋಟಿಸ್ ಬೋರ್ಡ್ ಗಳ ಅಳವಡಿಸುವುದು.
ಈ ವೇಳೆ ಸೃಷ್ಟಿ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಟೆಕ್ನಾಲಜಿಯ ಅಧ್ಯಕ್ಷರಾದ ಡಾ. ಅರಿಂದಮ್ ದಾಸ್, ಬ್ಯ್ರಾಂಡ್ ಬೆಂಗಳೂರಿನ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ












Click it and Unblock the Notifications