ಬೆಂಗಳೂರು ಉಪನಗರ ರೈಲು ಯೋಜನೆ, 6 ವರ್ಷಗಳಲ್ಲಿ ಪೂರ್ಣ

ಬೆಂಗಳೂರು,ಜನವರಿ 11:ಬೆಂಗಳೂರು ಉಪನಗರ ರೈಲು ಯೋಜನೆ ಮುಂದಿನ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ಈ ಕುರಿತು ಸಚಿವ ಪಿಯೂಷ್ ಗೋಯೆಲ್ ಮಾಹಿತಿ ನೀಡಿದ್ದಾರೆ. ಯೋಜನೆಯನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಗ್ಗೆ ಸಾಕಷ್ಟು ಅಧ್ಯಯನ ನಡೆಸಬೇಕಿದೆ.

ಯಾಕೆಂದರೆ ಬೆಂಗಳೂರು ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ನಗರವಾಗಿದ್ದು, ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಿದ್ದರೆ, ಭವಿಷ್ಯದ ಕುರಿತು ಆಲೋಚಿಸಲೇಬೇಕು.

ಉಪನಗರ ರೈಲು ಯೋಜನೆಗಳು ಆತ್ಮನಿರ್ಭರ ಭಾರತದ ಭಾಗವಾಗಿವೆ. ಒಮ್ಮೆ ಯೋಜನೆ ಪೂರ್ಣಗೊಂಡ ಬಳಿಕ ವಾಹನಗಳ ದಟ್ಟಣೆಯೂ ಕಡಿಮೆಯಾಗಲಿದೆ. ಹಾಗೆಯೇ ಕಡಿಮೆ ಖರ್ಚಿನಲ್ಲಿ ನಗರಕ್ಕೆ ಬರಬಹುದಾಗಿದೆ.

Bengaluru Suburban Railway Project Is To Be Completed In 6 Years

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಉಪನಗರ ರೈಲು ಯೋಜನೆಗೆ ಆದ್ಯತೆ ಮೇರೆಗೆ ರೈಲುಮಾರ್ಗ ಯೋಜನೆ ಪೂರ್ಣಗೊಳ್ಳಲು 6 ವರ್ಷಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದರಿಂದ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದಿಂದ ಸುಲಭವಾಗಿ ಸಂಪರ್ಕ ಸಾಧ್ಯವಾಗುತ್ತದೆ.

148.17 ಕಿಲೋ ಮೀಟರ್ ಉದ್ದದ ರೈಲುಮಾರ್ಗ ಸಂಪರ್ಕದ ಈ ಯೋಜನೆಗೆ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಮಧ್ಯೆ ಈ ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕ ರೈಲು ಮೂಲಭೂತಸೌಕರ್ಯ ಅಭಿವೃದ್ಧಿ ನಿಗಮ(ಕೆ-ಆರ್ ಐಡಿಇ) ಕೆಲಸ ಮಾಡುತ್ತಿದೆ.

ಪಿಪಿಪಿ ಮಾದರಿಯಲ್ಲಿ ಬೋಗಿಗಳ ಸ್ಥಾಪನೆಗೆ 2 ಸಾವಿರದ 854 ಕೋಟಿ ರೂಪಾಯಿ ಸೇರಿ 18 ಸಾವಿರದ 621 ಕೋಟಿ ರೂಪಾಯಿಗಳನ್ನು ಆರಂಭದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ನಂತರ ಕಳೆದ ಫೆಬ್ರವರಿಯಲ್ಲಿ 3 ಸಾವಿರ ಕೋಟಿ ರೂಪಾಯಿಗಳಷ್ಟು ವೆಚ್ಚ ಕಡಿತ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+