ಬನಶಂಕರಿ ದೇವಸ್ಥಾನದಲ್ಲಿ ಎಸ್‌ಐ ಪತ್ನಿಯ ಚಿನ್ನವನ್ನೇ ಕದ್ದ ಕಳ್ಳರು
ಬೆಂಗಳೂರು, ಜನವರಿ 22: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪತ್ನಿಯ ಚಿನ್ನವನ್ನೇ ಕಳವು ಮಾಡಿರುವ ಘಟನೆ ಬನಶಂಕರಿ ದೇವಸ್ಥಾನದಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಿಪುರಂ ಸಂಚಾರ ಠಾಣೆಯಲ್ಲಿ ಎಸ್‌ಐ ಆಗಿರುವ ಡಿ ರಮೇಶ್ ಅವರ ಪತ್ನಿ ಎಚ್ ಗೀತಾ ಅವರು ಬನಶಂಕರಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಳ್ಳತನ ನಡೆದಿದೆ. ದೇವಸ್ಥಾನದ ಆಸುಪಾಸಿನಲ್ಲಿ ಪದೇ ಪದೇ ಚಿನ್ನಾಭರಣ ನಡೆಯುತ್ತಿದ್ದರೂ ಯಾವುದಕ್ಕೂ ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ನಾಲ್ಕು ಮಂದಿ ಪೊಲೀಸ್ ಅಧಿಕಾರಿಗಳ ಪತ್ನಿಯರು ಬನಶಂಕರಿ ದೇಗುಲಕ್ಕೆ ಹೋಗಿದ್ದರು, ಎಲ್ಲರೂ ಒಬ್ಬರ ಹಿಂದೆ ಒಬ್ಬರಂತೆ ದೇವಸ್ಥಾನ ಪ್ರವೇಶಿಸಿ ಹೊರಗೆ ಬಂದಿದ್ದರು. ಆದರೆ ಹೊರಗೆ ಬರುವಾಗ ಗೀತಾ ಅವರ ಬ್ಯಾಗ್‌ನಲ್ಲಿದ್ದ ಪರ್ಸ್ ಕಳ್ಳತನವಾಗಿತ್ತು.

ಅದರಲ್ಲಿ 12 ಗ್ರಾಂ ತೂಕದ ಒಂದು ಚಿನ್ನ ಬಳೆ ಹಾಗೂ 8 ಗ್ರಾಂ ತೂಕದ ಚಿನ್ನದ ಚೈನ್, ಚಿನ್ನದ ಡಾಟಲರ್ ಮತ್ತು ಆಧಾರ್ ಕಾರ್ಡ್, ಮತದಾರರ ಚೀಟಿ ಇತ್ತು. ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲಾಗಿದೆ.
ಕಳ್ಳತನ ನಡೆದ ದಿನ ದೇವಸ್ಥಾನ ಶೌಚಗೃಹದಲ್ಲಿ ಗೀತಾ ಅವರ ಪರ್ಸ್ ಮತ್ತು ಆಧಾರ್ ಕಾರ್ಡ್ ಪತ್ತೆಯಾಗಿದೆ ಹಾಗಾಗಿ ಇದು ಕಳ್ಳಿಯರದ್ದೇ ಕೈವಾಡ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications