ಎಕ್ಸ್ ಪ್ರೆಸ್ ರೈಲಿನ ಕಿಟಕಿ ಸರಳು ಹಿಡಿದು ಯುವಕನ ಹುಚ್ಚು ಸಾಹಸ
Recommended Video

ಬೆಂಗಳೂರು, ಜುಲೈ 14: ಇದು ಮತ್ತೊಂದು ಭಯಂಕರ ಘಟನೆ. ಚಲಿಸುತ್ತಿರುವ ರೈಲಿನಲ್ಲಿ 'ಸಾಹಸ' ಮಾಡಲು ಹೋದ ಯುವಕ, ಆ ನಂತರ ಅದರಲ್ಲಿ ತಪ್ಪಾಗಿ, ಕೆಳಗೆ ಬಿದ್ದಿದ್ದಾನೆ. ಈಗ ಇಂಟರ್ ನೆಟ್ ನಲ್ಲಿ ಆ ವಿಡಿಯೋ ಗಿರಕಿ ಹೊಡೆಯುತ್ತಿದೆ. ಎಕ್ಸ್ ಪ್ರೆಸ್ ರೈಲಿನ ಹೊರಗೆ ಕಿಟಕಿ ಸರಳನ್ನು ಹಿಡಿದು ನೇತಾಡುವ ಸಾಹಸದಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ಈ ಘಟನೆ ವಿಡಿಯೋ ಏಕೆ ಆಗಿದೆ ಅಂದರೆ, ಈ ಸಾಹಸ ಮಾಡಲು ಆ ಯುವಕ ಮುಂದಾಗಿರುವುದೇ ಆ ವಿಡಿಯೋ ಸಲುವಾಗಿ. ಆದ್ದರಿಂದ ಈಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಹುಚ್ಚು ಸಾಹಸಕ್ಕೆ ಛೀ, ಥೂ ಎನ್ನಲಾಗುತ್ತಿದೆ. ಇಂಥ ಸಾಹಸ ಮಾಡುವ ಮೂಲಕ ರಾತ್ರೋರಾತ್ರಿ ಕೀರ್ತಿ ಪಡೆಯಲು ಬಯಸುವ ಯುವಕರ ಮನಸ್ಥಿತಿ ಬಗ್ಗೆ ಭಾರೀ ಟೀಕೆಯೂ ವ್ಯಕ್ತವಾಗುತ್ತಿದೆ.

ಆದರೆ, ರೈಲಿನ ಸರಳು ಹಿಡಿದು ನೇತಾಡುತ್ತಿದ್ದ ಯುವಕ ಕೆಳಗೆ ಬಿದ್ದ ನಂತರ ಏನಾಯಿತು ಅನ್ನೋ ಬಗ್ಗೆ ತಿಳಿದುಬಂದಿಲ್ಲ. ಆದರೆ ಯಾರಾದರೂ ಏಕೆ ಆ ರೈಲಿನಲ್ಲಿರುವ ತುರ್ತು ಸಮಯದ ಚೈನ್ ಎಳೆದು ನಿಲ್ಲಿಸುವ ಪ್ರಯತ್ನ ಮಾಡಿಲ್ಲ ಎಂಬುದರ ಬಗ್ಗೆಯೂ ಭಾರೀ ಚರ್ಚೆ ಆಗುತ್ತಿದೆ. ಒಟ್ಟಾರೆ ಪ್ರಾಣವನ್ನು ಒತ್ತೆಯಿಟ್ಟು, ಇಂಥ ಸಾಹಸ ಮಾಡಿ, ಸಾಧಿಸುವುದಾದರೂ ಏನು?












Click it and Unblock the Notifications