ಬೆಂಗಳೂರು: ಮಳೆಯಿಂದ ಸ್ಲಂ ನಿವಾಸಿಗಳ ಪರದಾಟ, ಬಿಬಿಎಂಪಿಗೆ ಸ್ಥಳಾಂತರವೇ ಸವಾಲು
ಬೆಂಗಳೂರು, ಜೂನ್. 11: ಮುಂಗಾರು ಪೂರ್ವ ತುಂತುರು ಮಳೆಯಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭಾರೀ ಮಳೆಯಿಂದಾಗಿ ಹಲವು ಭಾಗಗಳು ಜಲಾವೃತಗೊಂಡಿವೆ. ಪ್ರವಾಹಕ್ಕೆ ಈಡಾದ ರಸ್ತೆಗಳು ಮತ್ತು ನೆಲಮಾಳಿಗೆಯಲ್ಲಿ ನಿಂತು ಜನರು ಕಷ್ಟಪಡುತ್ತಿರುವಾಗಲೇ, ನಗರದಲ್ಲಿನ ಕೊಳೆಗೇರಿ ನಿವಾಸಿಗಳು ಮಳೆಯಿಂದ ಕನಿಷ್ಠ ರಕ್ಷಣೆ ನೀಡುವ ತಾತ್ಕಾಲಿಕ ಕ್ರಮಗಳನ್ನು ಅವಲಂಬಿಸಬೇಕಾಗಿದೆ.
ಪ್ರತಿಬಾರಿ ಮಳೆಗಾಲದ ಮೊದಲು ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿನ ಈ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳನ್ನು ಸ್ಥಳಾಂತರವಾಗುವಂತೆ ಕೇಳುತ್ತಿದ್ದರು. ಇಲ್ಲದಿದ್ದರೆ ಅವರಿಗೆ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಖಾಸಗಿ ಸಂಸ್ಥೆಗಳ ಒಳಗೊಳ್ಳುವಿಕೆಯಿಂದಾಗಿ ಜನರನ್ನು ಸ್ಥಳಾಂತರಿಸುವುದು ಸವಾಲಾಗಿ ಉಳಿದಿದೆ.

"ಖಾಸಗಿ ಸಂಸ್ಥೆಗಳು ರಾಜ್ಯದ ಇತರ ರಾಜ್ಯಗಳು ಅಥವಾ ಇತರ ಜಿಲ್ಲೆಗಳಿಂದ ಬರುವ ಹೆಚ್ಚಿನ ಸಂಖ್ಯೆಯ ಜನರಿಗೆ ಖಾಸಗಿ ಭೂಮಿಯಲ್ಲಿ ಇರಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಅವು ಹಣವನ್ನು ತೆಗೆದುಕೊಳ್ಳುತ್ತವೆ. ಆದರೆ, ಸ್ಲಂಗಳು ಅವು ಅಲ್ಲಿ ಇರಬಾರದು. ಏಕೆಂದರೆ ವಸತಿ ಭೂಮಿಯಾಗಿ ಪರಿವರ್ತನೆಯಾಗುವ ಕಂದಾಯ ಭೂಮಿಗೆ ಕೆಲವು ಸುರಕ್ಷತೆಗಳಿವೆ. ಆದರೆ ಈ ಸಂದರ್ಭದಲ್ಲಿ ಅವರು (ಖಾಸಗಿಯವರು) ಕಂದಾಯ ಭೂಮಿಯಲ್ಲಿ ಶೆಡ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದು ಸವಾಲಾಗಿದೆ" ಎಂದು ಅಧಿಕಾರಿಯೊಬ್ಬರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
"ಇದು ಮಾನವೀಯ ಸಮಸ್ಯೆಯಾಗಿರುವುದರಿಂದ, ಖಾಸಗಿ ಭೂಮಿಯಲ್ಲಿ ವಸತಿಗಳನ್ನು ನಿರ್ಮಿಸಲು ಜನರನ್ನು ಹೊಣೆಗಾರರನ್ನಾಗಿ ಮಾಡುವುದು ಕಷ್ಟವಾಗಿದೆ. ಕಾನೂನಿನ ಪ್ರಕಾರ, ಕಂದಾಯ ಭೂಮಿಯಲ್ಲಿ ಜನರು ಏಕೆ ನೆಲೆಸಲು ಅವಕಾಶ ನೀಡಿದರು ಎಂಬುದರ ಕುರಿತು ಭೂ ಮಾಲೀಕರನ್ನು ಪ್ರಶ್ನಿಸಲು ನಮಗೆ ಅವಕಾಶವಿದೆ, ಅದು ಕಂದಾಯ ಇಲಾಖೆಯ ಮೊದಲ ಜವಾಬ್ದಾರಿಯಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಅಂದಾಜು 80ರಿಂದ 100 ಅಘೋಷಿತ ಕೊಳೆಗೇರಿಗಳಿವೆ. ಘೋಷಿತ ಕೊಳೆಗೇರಿಗಳು ಕೋರ್ ಪ್ರದೇಶಗಳಲ್ಲಿವೆ ಮತ್ತು ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಏಕೆಂದರೆ ಬಿಬಿಎಂಪಿಯು ನೀರು ತ್ವರಿತವಾಗಿ ಹೊರಹೋಗಲು ಮತ್ತು ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಡೆಯಲು ಕಾಲುವೆಗಳನ್ನು ನಿರ್ಮಿಸಿದೆ. ಆದರೆ ಬಿಬಿಎಂಪಿಯ ಪ್ರಮುಖ ಕಾಳಜಿ ಇರುವುದು ತಗ್ಗು ಪ್ರದೇಶಗಳಲ್ಲಿನ ಅನಧಿಕೃತ ಕೊಳೆಗೇರಿಗಳ ಬಗ್ಗೆ. ಇವು ಪ್ರವಾಹಕ್ಕೆ ಒಳಗಾಗುವ ಸಾಧ್ಯತೆಯಿದೆ" ಎಂದು ಬಿಬಿಎಂಪಿ ಅಧಿಕಾರಿ ಹೇಳಿದ್ದಾರೆ.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು (KSDB) ರಾಜಕಾಲುವೆಗಳ ಸಮೀಪ ವಾಸಿಸುವ ಮತ್ತು ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳಲ್ಲಿ ವಾಸಿಸುವ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕ್ರಮಗಳನ್ನು ಕೈಗೊಂಡಿದೆ. ಆದರೆ ಇದು, ನಗರದಲ್ಲಿನ 410 ಘೋಷಿತ ಕೊಳೆಗೇರಿಗಳಲ್ಲಿ ಮಾತ್ರ. ಕಗ್ಗದಾಸಪುರ ಮತ್ತು ಬೆನ್ನಿಗಾನಹಳ್ಳಿಯಲ್ಲಿರುವವುಗಳು ಅಘೋಷಿತ ಕೊಳೆಗೇರಿಗಳಾಗಿವೆ. ಆದ್ದರಿಂದ ಇವು ಅವರ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಘೋಷಿತ ಕೊಳೆಗೇರಿಗಳಲ್ಲಿ ಪ್ರವಾಹದ ಬಗ್ಗೆ ನಮಗೆ ಯಾವುದೇ ವರದಿಗಳು ಬಂದಿಲ್ಲವಾದರೂ, ನಾವು ಈಗಾಗಲೇ ಪ್ರವಾಹ ಸಂಭವಿಸಬಹುದಾದ ಪ್ರದೇಶಗಳನ್ನು ಸಮೀಕ್ಷೆ ಮಾಡಿದ್ದೇವೆ ಮತ್ತು ಆ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿದ್ದೇವೆ ಎಂದು ಕೆಎಸ್‌ಡಿಬಿ ಆಯುಕ್ತ ಬಿ ವೆಂಕಟೇಶ್ ಹೇಳಿದ್ದಾರೆ. 10 ರಿಂದ 15 ಘೋಷಿತ ಕೊಳೆಗೇರಿಗಳ ನಿವಾಸಿಗಳನ್ನು ಲಗ್ಗೆರೆ ಮತ್ತು ತಾವರೆಕೆರೆಗೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.
ಕಗ್ಗದಾಸಪುರದ ಸ್ಲಂಗಳ ಜನರನ್ನು ಮಾತಾಡಿಸಿರುವ ಡೆಕ್ಕನ್ ಹೆರಾಲ್ಡ್‌ಗೆ, ಮಳೆಯ ನೀರಿನಿಂದ ತಮ್ಮ ಟೆಂಟ್‌ಗಳಿಗೆ ನೀರು ನುಗ್ಗಿ ರಾತ್ರಿ ಮಲಗಲು ಹೇಗೆ ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ವಿವರಿಸಿದ್ದಾರೆ. ಛಾವಣಿಗಳಲ್ಲಿ ಸೋರಿಕೆಯಾಗಿದೆ ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ. ಒಂದು ಕೊಳೆಗೇರಿಯಲ್ಲಿ ಸರಿಸುಮಾರು 70 ರಿಂದ 80 ಜನರು ಒಟ್ಟಿಗೆ ವಾಸಿಸುತ್ತಿದ್ದರು, ಅವರಲ್ಲಿ 20 ಮಕ್ಕಳಿದ್ದಾರೆರೆ. ಇಕ್ಕಟ್ಟಾದ ಜಾಗದಲ್ಲಿ ಸಾಮಾನ್ಯ ಮಾನ್ಸೂನ್ ಕಾಯಿಲೆಗಳಿಗೆ ಒಳಗಾಗುವಂತೆ ಮಾಡಿದೆ.
ನಿಂತ ನೀರು ಸೊಳ್ಳೆಗಳ ಹಾವಳಿಯ ಅಪಾಯವನ್ನು ಹೆಚ್ಚಿಸಿದೆ, ಜೊತೆಗೆ ನೈರ್ಮಲ್ಯ ಸೌಲಭ್ಯಗಳ ಕೊರತೆಯು ಈಗಾಗಲೇ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದಿದೆ. ಇಲ್ಲಿ ಶೌಚಾಲಯಗಳಿಲ್ಲ, ಹೀಗಾಗಿ ಸಮೀಪದ ಮೈದಾನಕ್ಕೆ ಹೋಗುತ್ತೇವೆ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ. ಬೆನ್ನಿಗಾನಹಳ್ಳಿಯ ಕೊಳೆಗೇರಿಯಲ್ಲೂ ಇದೇ ಸ್ಥಿತಿ ಮುಂದುವರಿದಿದೆ.
ಬಹುತೇಕ ಕೊಳೆಗೇರಿ ನಿವಾಸಿಗಳು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಬಿಬಿಎಂಪಿಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ವೇತನದ ಹೆಚ್ಚಿನ ಭಾಗವನ್ನು ಭೂಮಾಲೀಕರಿಗೆ ಬಾಡಿಗೆ ಪಾವತಿಸಲು ಖರ್ಚು ಮಾಡಿದ್ದಾರೆ. ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ, ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
(ಮಾಹಿತಿ ಕೃಪೆ : ಡೆಕ್ಕನ್ ಹೆರಾಲ್ಡ್)
-
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications