ಮಗು ಹೆರುವುದೇ ಬೇಡ, ಹೊಸ ಅಭಿಯಾನಕ್ಕೆ ನಾಂದಿ
ಬೆಂಗಳೂರು, ಫೆಬ್ರವರಿ 11: ಮಕ್ಕಳನ್ನು ಹೇಗೆ ಪಡೆಯುವುದು, ಮಕ್ಕಳಾಗದಿದ್ದರೆ ಚಿಕಿತ್ಸೆ ಹೇಗೆ, ಸೂಕ್ತ ಆಹಾರ ವ್ಯವಸ್ಥೆಗಳ ಬಗ್ಗೆ ಚರ್ಚೆಯಾಗುವುದು ಸಾಮಾನ್ಯ. ಈ ಕುರಿತು ವೈದ್ಯರ ಸಲಹೆ ಪಡೆಯುವುದು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ಮಲ್ಲೇಶ್ವರದಲ್ಲೊಂದು ಬೇಬಿ ಶೋವರ್ ನಡೆದಿದೆ ಆದರೆ ಯಾವುದೇ ಉಡುಗೊರೆಗಳಿಲ್ಲ, ಮಗುವಿನ ಹೆಸರಿನ ಬಗ್ಗೆ ಚರ್ಚೆ ನಡೆದಿಲ್ಲ, ಆಟಗಳಿರಲಿಲ್ಲ, ಅದರ ಬದಲು ಮಗುವನ್ನು ಹೆರುವುದೇ ಬೇಡ ಎನ್ನುವ ಕುರಿತು ಚರ್ಚೆ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿ ಹೊಸದೊಂದು ಚರ್ಚೆ ಭಾನುವಾರ ನಡೆದಿದೆ, ಬೆಂಗಳೂರು, ಮುಂಬೈ, ಗೋವಾ ಇತರೆ ಪ್ರದೇಶಗಳಲ್ಲಿನ ಕೆಲ ಆಸಕ್ತರ 30-40 ಜನರ ಗುಂಪೊಂದು ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.
ಮಕ್ಕಳಿಲ್ಲದೆ ಬದುಕುವುದು ಹೇಗೆ? ಮಕ್ಕಳ ರಹಿತ ಜೀವನದ ಕುರಿತಂತೆ ಚರ್ಚೆ ನಡೆದಿದೆ. ಇದೊಂದು ಜಾಗತಿಕ ಅಭಿಯಾನವನ್ನಾಗಿಸಲು ಈ ಗುಂಪು ಚರ್ಚೆಯನ್ನಾರಂಭಿಸಿದೆ.

ಮಗು ರಹಿತ ಕುಟುಂಬಕ್ಕೆ ತೆರಿಗೆ ವಿನಾಯಿತಿ ಸೇರಿದಂತೆ ಇತರೆ ವಿನಾಯಿತಿ ಘೋಷಣೆ ಮಾಡುವ ಕುರಿತು ಈ ಗುಂಪು ಸುಮಾರು 8 ಗಂಟೆಗಳ ಕಾಲ ಚರ್ಚೆ ನಡೆಸಿದೆ.
ಮಕ್ಕಳನ್ನು ಹೆರುವುದರಿಂದ ಭೂಮಿಗೆ ಇನ್ನಷ್ಟು ಹೊರೆಯಾಗಿದೆ.ಈಗ ಹಾಲಿ ಇರುವ ಜಗತ್ತಿಗೆ ಮಾಡುತ್ತಿರುವಂತಹ ಅನ್ಯಾಯ ಎನ್ನುವ ವಿಚಾರ ಧಾರೆಯಲ್ಲಿ ಈ ಚರ್ಚೆಗಳು ನಡೆದಿವೆ.











Click it and Unblock the Notifications