ಕಾರ್ಪೊರೇಟ್ ಲೈಫ್ ಬಗ್ಗೆ ದೂರುವವರಿಗೆ ಯುವತಿಯ ಖಡಕ್‌ ಕ್ಲಾಸ್, ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಒಪನ್‌ ಮಾಡಿದ್ರೆ ಸಾಕು, ಐಟಿ-ಬಿಟಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಕೆಲಸದ ಒತ್ತಡ, ಟಾರ್ಗೆಟ್ ಹಾಗೂ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯ ವರೆಗಿನ ಉದ್ಯೋಗದ ಬಗ್ಗೆ ದೂರುತ್ತಿರುವುದು, ಮೀಮ್‌ಗಳನ್ನ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಕೆಲಸದ ಅವಧಿ, ರಜೆಗಳ ಕೊರತೆ ಹಾಗೂ ಮಾನಸಿಕ ಒತ್ತಡದ ಬಗ್ಗೆ ನೆಟ್ಟಿಗರು ಯಾವಾಗಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ.

ಆದರೆ, ಈ ಎಲ್ಲಾ ಚರ್ಚೆಗಳ ನಡುವೆ ದಿಶಾ ದೇಸಾಯಿ ಎಂಬ ಮಹಿಳೆಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಹೊಸ ಸಂಚಲನ ಮೂಡಿಸಿದೆ. ತಮ್ಮ ಕೆಲಸವನ್ನ ಸದಾ ದೂಷಿಸುವವರಿಗೆ ಅವರು ನೀಡಿರುವ ಪ್ರಾಯೋಗಿಕ ಸಲಹೆ ಇದೀಗ ಭಾರಿ ವೈರಲ್ ಆಗುತ್ತಿದೆ.

Stop Complaining

ಆರ್ಥಿಕ ಭದ್ರತೆ ನೀಡುವ ಕಾರ್ಪೊರೇಟ್ ಲೈಫ್

"ನಾನು ಕೂಡ ಹಿಂದೆ ಕಾರ್ಪೊರೇಟ್ ಲೈಫ್ ಬಗ್ಗೆ ಬಹಳಷ್ಟು ದೂರುತ್ತಿದ್ದೆ. ಆದರೆ, ಈಗ ನನಗೆ ಅರಿವಾಗಿದೆ. ನಾವು ನಮ್ಮ ಕೆಲಸವನ್ನ ಎಷ್ಟೇ ದ್ವೇಷಿಸಿದರೂ, ಅದೇ ಕೆಲಸ ನಮ್ಮ ಜೀವನಕ್ಕೆ ಬೇಕಾದ ಹಣ ಒದಗಿಸುತ್ತಿದೆ," ಎಂದು ದಿಶಾ ದೇಸಾಯಿ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ನಾವು ವಾಸಿಸುವ ಮನೆಯ ಬಾಡಿಗೆ, ನಾವು ಮಾಡುವ ಪಾರ್ಟಿಗಳು, ಪ್ರವಾಸಗಳು ಹಾಗೂ ಭವಿಷ್ಯದ ಹೂಡಿಕೆಗಳಿಗೆ ನಮ್ಮ ಆಫೀಸ್‌ ಸಂಬಳವೇ ಆಧಾರ.

ಹೀಗಿರುವಾಗ, ನಮಗೆ ಆರ್ಥಿಕ ಭದ್ರತೆ ಒದಗಿಸುವ ಕೆಲಸದ ಬಗ್ಗೆ ಪ್ರತಿದಿನವೂ ದೂರುವುದು, ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ ಎನ್ನುವುದು ದಿಶಾ ಅವರ ಅಭಿಪ್ರಾಯ. ನಿಮ್ಮ ಕೆಲಸದ ಪ್ರತಿಯೊಂದು ಅಂಶವನ್ನೂ ನೀವು ಪ್ರೀತಿಸಲೇಬೇಕು ಎಂದೇನಿಲ್ಲ, ಆದರೆ ಅದು ನಿಮ್ಮ ಬದುಕಿಗೆ ಆಧಾರವಾಗಿರುವಾಗ ಅದರ ಬಗ್ಗೆ ದ್ವೇಷ ಸಾಧಿಸುವುದು ಅರ್ಥಹೀನ ಎಂಬುದು ಅವರ ವಾದ.

ಬೇಸರವಿದ್ದರೆ ಪರ್ಯಾಯ ಆದಾಯ ಕಂಡುಕೊಳ್ಳಿ

ತಮ್ಮ ವಿಡಿಯೋದಲ್ಲಿ ದಿಶಾ ಅವರು ಮತ್ತೊಂದು ಪ್ರಮುಖ ಅಂಶವನ್ನು ಪ್ರಸ್ತಾಪಿಸಿದ್ದಾರೆ. "ಒಂದು ವೇಳೆ ನಿಮಗೆ ನಿಮ್ಮ ಉದ್ಯೋಗ ಇಷ್ಟವಿಲ್ಲದಿದ್ದರೆ, ಅದರಿಂದ ಹೊರಬಂದು ಬೇರೇನಾದರೂ ಹೊಸತನ್ನ ಕಂಡುಕೊಳ್ಳುವುದು ನಿಮ್ಮದೇ ಜವಾಬ್ದಾರಿ. ಸ್ವಂತ ಉದ್ಯೋಗ ಅಥವಾ ಬೇರೆ ಆದಾಯದ ಮೂಲ ಕಂಡುಕೊಳ್ಳುವವರೆಗೂ ಈಗಿರುವ ಕೆಲಸವನ್ನು ಗೌರವಿಸಬೇಕು," ಎಂದು ಅವರು ಕಿವಿಮಾತು ಹೇಳಿದ್ದಾರೆ.

ಕುಳಿತುಕೊಂಡು ಕೆಲಸವನ್ನ ದೂಷಿಸುವ ಬದಲು, ಸ್ವಂತ ಕಾಲಿನ ಮೇಲೆ ನಿಲ್ಲಲು ಬೇಕಾದ ಬೇರೆ ಬೇರೆ ಮಾರ್ಗಗಳನ್ನ ಹುಡುಕಿಕೊಳ್ಳಿ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ. ನಾವು ನಮ್ಮ ಜೀವನಶೈಲಿಯನ್ನ ಕಾಪಾಡಿಕೊಳ್ಳಲು ನಮ್ಮ ಕೆಲಸವೇ ಮುಖ್ಯವಾಗಿರುವುದರಿಂದ, ಅನಗತ್ಯವಾಗಿ ಅದರ ಬಗ್ಗೆ ದೂಷಿಸುವುದನ್ನ ಮೊದಲು ನಿಲ್ಲಿಸಬೇಕು ಎಂದು ತಮ್ಮ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿಯೂ ಅವರು ಒತ್ತಿ ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ದಿಶಾ ದೇಸಾಯಿ ಅವರ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಬಳಕೆದಾರರು ಅವರ ಮಾತಿಗೆ ದನಿಗೂಡಿಸಿದ್ದು, "ಇದು ನೂರಕ್ಕೆ ನೂರು ಸತ್ಯ" ಎಂದು ಕಾಮೆಂಟ್ ಮಾಡಿದ್ದಾರೆ. "ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಇಂತಹದ್ದೊಂದು ರಿಯಾಲಿಟಿ ಚೆಕ್ ಅಗತ್ಯವಿತ್ತು. ಕಾರ್ಪೊರೇಟ್ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿರಬಹುದು, ಆದರೆ ಆರ್ಥಿಕ ಸ್ಥಿರತೆ ಅದಕ್ಕಿಂತಲೂ ಹೆಚ್ಚು ಮುಖ್ಯವಾಗುತ್ತದೆ," ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+