ಸ್ವಚ್ಛ ಭಾರತಕ್ಕೆ ಕೈಜೋಡಿಸಿದ ಸ್ಟರ್ಲಿಂಗ್ ರೆಸಾರ್ಟ್ಸ್‌

ಬೆಂಗಳೂರು, ಡಿ. 4: ಸ್ಟರ್ಲಿಂಗ್ ಹಾಲಿಡೆ ರೆಸಾರ್ಟ್ಸ್ (ಇಂಡಿಯಾ) ಲಿ. ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿದೆ. ತನ್ನ ಬೆಂಗಳೂರಿನ ರೆಸಾರ್ಟ್ ಸೇರಿದಂತೆ ಭಾರತದಾದ್ಯಂತ ಇರುವ 21 ರೆಸಾರ್ಟ್‌ಗಳು ಹಾಗೂ 12 ಮಾರಾಟ ಕಚೇರಿಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದೆ. [ಗಾಂಧೀಜಿ ಕನಸು ನನಸಾಗಿಸೋಣ: ಮೋದಿ]

ರೆಸಾರ್ಟ್‌ನ ಸಿಬ್ಬಂದಿ ನಡೆಸಿದ ಸ್ವಚ್ಛ ಭಾರತ ಅಭಿಯಾನದಲ್ಲಿ ಅತಿಥಿಗಳೂ ಕೈ ಜೋಡಿಸಿದ್ದು ವಿಶೇಷ. ಇಲ್ಲಿಯವರೆಗೆ ರೆಸಾರ್ಟ್‌ಗೆ ಸಂಬಂಧಿಸಿದ 750 ಜನ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಪಿಲ್ಲರ್ ರಾಕ್ಸ್, ಕೊಡೈಕೆನಾಲ್, ಪುರಿಯ ಲೋಕನಾಥ ದೇಗುಲ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ ಎಂದು ರೆಸಾರ್ಟ್ ತಿಳಿಸಿದೆ. [ಬೆಂಗಳೂರು ಯುವಕರ ಸ್ವಚ್ಛ ಭಾರತ ಕನಸು]

cleanindia

ಪ್ರತಿ ಭಾರತೀಯ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಬೇಕು. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು. ಸ್ಟೆರ್ಲಿಂಗ್ ರೆಸಾರ್ಟ್ ವತಿಯಿಂದ ದೇಶಾದ್ಯಂತ ವರ್ಷಪೂರ್ತಿ ಸ್ವಚ್ಛತಾ ಅಭಿಯಾನ ನಡೆಸುತ್ತೇವೆ ಎಂದು ರೆಸಾರ್ಟ್ ವ್ಯವಸ್ಥಾಪಕ ನಿರ್ದೇಶಕ ರಮೇಶ ರಮಾನಾಥನ್ ತಿಳಿಸಿದ್ದಾರೆ. [ಸ್ಟಾರ್ ಬಜಾರ್ ನಿಂದ ಸ್ವಚ್ಛತಾ ಅಭಿಯಾನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+