Static Shock: ಬೆಂಗಳೂರಿಗರೇ ಇದರ ಅನುಭವ ನಿಮಗೂ ಆಗಿದೆಯಾ? ಕಾರಣ ಇಲ್ಲಿದೆ
ಕೆಲ ವಸ್ತುಗಳನ್ನು ಮುಟ್ಟಿದರೆ ಕರೆಂಟ್ ಶಾಕ್ ಹೊಡೆದ ಅನುಭವವಾಗುತ್ತಿದೆಯೇ? ಈ ರೀತಿ ನಡೆಯಲು ಕಾರಣವೇನು? ಹಠಾತ್ ಈ ಬದಲಾವಣೆಗೆ ಕಾರಣಗಳೇನು? ಎಂದು ಜನ ಆಶ್ಚರ್ಯ ಪಡುತ್ತಿದ್ದಾರೆ.
ಬೆಂಗಳೂರು ಫೆಬ್ರವರಿ 28: ಇತ್ತೀಚೆಗೆ ಬೆಂಗಳೂರಿನ ಹಲವಾರು ನಿವಾಸಿಗಳು ನನಗೆ ಸಣ್ಣ ಪ್ರಮಾಣದಲ್ಲಿ ಕರೆಂಟ್ ಶಾಕ್ ಹೊಡೆದ ಅನುಭವವಾಯಿತು ಎಂದು ಹೇಳುತ್ತಿದ್ದಾರೆ. ಇತರ ಜನರನ್ನು ಸ್ಪರ್ಶಿಸಿದಾಗ, ಚೇರ್ ಮುಟ್ಟಿದಾಗ, ಹಾಸಿಗೆ, ವಾಟರ್ ಟ್ಯಾಪ್ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ಮುಟ್ಟಿದಾಗ ಸಣ್ಣ ಪ್ರಮಾಣದಲ್ಲಿ ಕರೆಂಟ್ ಶಾಕ್ ಹೊಡೆದ ಅನುಭವವಾಯಿತು ಎಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಸ್ಟಾಟಿಕ್ ಶಾಕ್ (Static Shock) ಎಂದು ಕರೆಯುತ್ತಾರೆ.
ಯಾವುದಾದರೂ ಒಂದು ವಸ್ತು ಮುಟ್ಟಿದಾಗ ಚಟ್ ಎಂದು ಒಂದು ಶಬ್ದ ಬರುತ್ತದೆ. ಕೂದಲು ಕೂಡ ಕೆಲ ವಸ್ತುಗಳತ್ತ ಆಕರ್ಷಿಸಿದಂತೆ ವಾಲುತ್ತವೆ. ಉದಾಹರಣೆಗೆ ಹಾಸಿಗೆ, ಇತರ ಜನ ಹತ್ತಿರ ಬಂದಾಗ ಕೂದಲು ನೇರವಾಗಿ ನಿಲ್ಲುವುದು, ಹರಡಿಕೊಳ್ಳುವುದು ಅವುಗಳನ್ನು ಒಗ್ಗೂಡಿಸಿದಾಗ 'ಚಟ್' ಎಂಬ ಶಬ್ದ ಕೇಳಿ ಬರುತ್ತದೆ. ಇದರಿಂದ ಕರೆಂಟ್ ಶಾಕ್ ಹೊಡೆದಂತೆ ಅನುಭವವಾಗುತ್ತದೆ ಎಂದು ಜನ ಹೇಳಿಕೊಳ್ಳುತ್ತಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಈ ತಿಂಗಳ ಆರಂಭದಲ್ಲಿ ಆಕಾಂಕ್ಷಾ ಗೌರ್ ಎಂಬ ನಿವಾಸಿ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. "ಬೆಂಗಳೂರು ಜನರೇ, ಕೆಲವು ದಿನಗಳಿಂದ ಲೋಹವನ್ನು ಸ್ಪರ್ಶಿಸಿದಾಗ ನೀವು ಕರೆಂಟ್ ಶಾಕ್ ಹೊಡೆದಂತ ಅನುಭವವನ್ನು ಅನುಭವಿಸುತ್ತಿದ್ದೀರಾ? ನನ್ನ ಹೆಚ್ಚು ಸಂಖ್ಯೆಯ ಸ್ನೇಹಿತರು ಇದನ್ನು ಅನುಭವಿಸುತ್ತಿದ್ದಾರೆ" ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಹಲವಾರು ಇತರ ಬೆಂಗಳೂರಿಗರು ಸಹ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ರೀತಿ ನಡೆಯಲು ಕಾರಣವೇನು? ಹಠಾತ್ ಈ ಬದಲಾವಣೆಗೆ ಕಾರಣಗಳೇನು? ಎಂದು ಜನ ಆಶ್ಚರ್ಯ ಪಡುತ್ತಿದ್ದಾರೆ. ವಿಜ್ಞಾನಿಗಳು ಮತ್ತು ತಜ್ಞರು ಇದನ್ನು ಮೇಲ್ವಿಚಾರಣೆ ಮಾಡಿದ್ದಾರೆ. ಅವರ ಪ್ರಕಾರ, ಇದು ನಗರದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸಂಭವಿಸುತ್ತಿದೆ.

ಸ್ಟಾಟಿಕ್ ಶಾಕ್ ಹಿಂದಿನ ಕಾರಣಗಳು:-
ತಜ್ಞರು ಈ ಬಗ್ಗೆ ವಿವರಣೆ ನೀಡಿದ್ದು ಚಳಿಗಾಲದ ಕೊನೆಯಲ್ಲಿ ಹವಾಮಾನವು ಬೆಚ್ಚಗಾಗಲು ಪ್ರಾರಂಭಿಸಿದಾಗ ಶುಷ್ಕ ವಾತಾವರಣದಲ್ಲಿ ಇದು ಸಂಭವಿಸುತ್ತದೆ ಎಂದಿದ್ದಾರೆ.
ಶುಷ್ಕ ಹವಾಮಾನ:
ಚಳಿಗಾಲದಲ್ಲಿ ಅಥವಾ ನಮ್ಮ ಸುತ್ತಲಿನ ಹವಾಮಾನವು ಶುಷ್ಕವಾಗಿದ್ದಾಗ ವಿದ್ಯುತ್ ಚಾರ್ಜ್ ಸಾಮಾನ್ಯವಾಗಿ ರೂಪುಗೊಳ್ಳುತ್ತದೆ. ಗಾಳೀಯು ಶುಷ್ಕವಾಗಿರುತ್ತದೆ ಮತ್ತು ಎಲೆಕ್ಟ್ರಾನ್ಗಳು ನಮ್ಮ ಚರ್ಮದ ಮೇಲ್ಮೈಯಲ್ಲಿ ಸುಲಭವಾಗಿ ಬೆಳೆಯುತ್ತವೆ. ಬೇಸಿಗೆಯಲ್ಲಿ, ಗಾಳೀಯ ತೇವಾಂಶವು ಖುಣಾತ್ಮಕ ವಿದ್ಯುದಾವೇಶದ ಎಲೆಕ್ಟ್ರಾನ್ಗಳನ್ನು ನಿರ್ಮೂಲನೆ ಮಾಡುತ್ತದೆ ಹಾಗಾಗಿ ಬೇಸಿಗೆಯಲ್ಲಿ ಈ ರೀತಿಯ ಶಾಕ್ ಅಪರೂಪವಾಗಿ ಹೊಡೆಯುವತ್ತದೆ.
ಸಂಶ್ಲೇಷಿತ ಬಟ್ಟೆಗಳು:
ಪಾಲಿಯೆಸ್ಟರ್ ಮತ್ತು ನೈಲಾನ್‌ನಂತಹ ಸಿಂಥೆಟಿಕ್ ಬಟ್ಟೆಗಳು ಪರಸ್ಪರ ವಿರುದ್ಧವಾಗಿ ಉಜ್ಜಿದಾಗ ಇದು ಸಂಭವಿಸುತ್ತದೆ. ಲೋಹದ ವಸ್ತುಗಳನ್ನು ಸ್ಪರ್ಶಿಸಿದಾಗ ಮತ್ತು ಕಂಬಳಿಗಳು ಮತ್ತು ರಗ್ಗುಗಳು ನಿಮ್ಮ ದೇಹದ ಮೇಲೆ ಸ್ಥಿರ ವಿದ್ಯುತ್ ನಿರ್ಮಿಸಲು ಕಾರಣವಾಗುವ ಅವಾಹಕಗಳಾಗಿವೆ. ಕಾರ್ಪೆಟ್ ಮೇಲೆ ನಡೆಯುವಾಗ, ಲೋಹದ ವಸ್ತು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಸ್ಪರ್ಶಿಸಿದಾಗ ಈ ಅನುಭವ ಆಗಬಹುದು.
IISc ವಿಜ್ಞಾನಿಗಳ ಪ್ರಕಾರ, ಚಳಿಗಾಲದಿಂದ ಬೇಸಿಗೆಗೆ ಬದಲಾಗುತ್ತಿರುವ ಹವಾಮಾನದಿಂದಾಗಿ ಬೆಂಗಳೂರಿನಲ್ಲಿ ಇಂತಹ ಹೆಚ್ಚಿನ ಘಟನೆಗಳು ನಡೆಯತ್ತಿವೆ.
ಈ ಋಣಾತ್ಮಕ ಆವೇಶದ ಎಲೆಕ್ಟ್ರಾನ್‌ಗಳು
ಎಲೆಕ್ಟ್ರಾನ್‌ಗಳು ಶಾಶ್ವತವಾಗಿ ಅಂಟಿಕೊಳ್ಳುವುದಿಲ್ಲ, ಬದಲಿಗೆ ಅವುಗಳು ತಕ್ಷಣ ತಪ್ಪಿಸಿಕೊಳ್ಳುತ್ತವೆ. ಉದಾಹರಣೆಗೆ, ನಮ್ಮ ದೇಹದಲ್ಲಿನ ಎಲೆಕ್ಟ್ರಾನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ನಾವು ಧನಾತ್ಮಕ ಆವೇಶದ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣ, ಎಲೆಕ್ಟ್ರಾನ್‌ಗಳು ನಮ್ಮನ್ನು ಬಲೆಗೆ ಬೀಳಿಸಿ ಬಿಡುತ್ತವೆ. ನಾವು ಇಂಚಿನ ಅಂತರದಲ್ಲಿದ್ದರೂ ಸಹ ಗಾಳಿಯ ಕಣಗಳಿಂದಾಗಿ ನಮಗೆ ಶಾಕ್ ಹೊಡೆದ ಅನುಭವವಾಗುತ್ತದೆ. ಈ ಪ್ರಕ್ರಿಯೆಯಿಂದ ಮೂಡುವ ಕಿಡಿ ಬಿಸಿಯಾಗಿರುವುದರಿಂದ ನೋವನ್ನು ಉಂಟುಮಾಡುತ್ತದೆ ಮತ್ತು ಚರ್ಮಕ್ಕೆ ಸೂಜಿ ಕೊರೆಯುವಂತೆ ಭಾಸವಾಗುತ್ತದೆ.












Click it and Unblock the Notifications