ಬಡರೋಗಿಗಳು ಮೆಚ್ಚುವ ಕೆಲಸವನ್ನು ಮಾಡಿದ ಸಚಿವ ಖಾದರ್
ಬೆಂಗಳೂರು, ಜ 5: ನಗರದ ಮಲ್ಲೇಶ್ವರಂ ವೃತ್ತದಲ್ಲಿರುವ ಕೆ ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ಆರಂಭಿಸಲಾಗಿರುವ ಜನಸಾಮಾನ್ಯರ ಡಯಾಗ್ನೋಸ್ಟಿಕ್ ಲ್ಯಾಬ್' ಇನ್ನು ಮುಂದೆ ಕಡಿಮೆ ದರದಲ್ಲಿ ಸೇವೆ ನೀಡಲಿದೆ ಎಂದು ರಾಜ್ಯಪಾಲ ವಜುಬಾಯಿ ವಾಲಾ ಹೇಳಿದ್ದಾರೆ.
ಪ್ರತಿದಿನ 24 ಗಂಟೆ ಕಾರ್ಯ ನಿರ್ವಹಿಸುವ ಈ ಲ್ಯಾಬ್ ಸದ್ಯ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಆರಂಭವಾಗಿದೆ. ಈ ಸೌಲಭ್ಯ ಉದ್ಘಾಟಿಸಿ ಮಾತನಾಡುತ್ತಿದ್ದ ರಾಜ್ಯಪಾಲರು, ಇತರ ಖಾಸಗಿ ಆಸ್ಪತ್ರೆಗಳಲ್ಲಿ ಇಮೇಜಿಂಗ್ ಮತ್ತು ಪ್ರಯೋಗಾಲಯ ಪರೀಕ್ಷೆಗಳಿಗೆ ಬಡರೋಗಿಗಳು ಹೆಚ್ಚು ಹಣ ಕಟ್ಟಾಲಾಗದೆ, ಕಾಯಿಲೆಯನ್ನ ಗುಣಪಡಿಸಲಾಗದೆ ಸಾವನ್ನಪ್ಪಿರುವ ಉದಾಹರಣೆಗಳಿವೆ. (ಚೆನ್ನೈನಿಂದ ಬಂದವರಿಗೆ ಉಚಿತ ತಪಾಸಣೆ)

ಆದ ಕಾರಣ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗಬಾರದೆಂದು, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ತುಮಕೂರು, ಉಡುಪಿ, ಮಂಗಳೂರು, ಮೈಸೂರು, ಕೋಲಾರ ಹಾಗೂ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆ, ಘೋಷಾ ಸರ್ಕಾರಿ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ಮತ್ತು ಮಂಡ್ಯದ ಜಿಲ್ಲಾ ಆಸ್ಪತ್ರೆಗಳಲ್ಲೂ ಈ ಸೌಲಭ್ಯ ಆರಂಭವಾಗಲಿವೆ ಎಂದು ರಾಜ್ಯಪಾಲರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಚಿವ ಖಾದರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವಾಲಯದ ಕೆಲಸಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸರಕಾರಕ್ಕೆ, ಕರ್ನಾಟಕ ಆರೋಗ್ಯ ಇಲಾಖೆಯ ಮಾದರಿಯಲ್ಲೇ ಕಾರ್ಯ ನಿರ್ವಹಿಸುವಂತೆ ಶಿಫಾರಸು ಮಾಡುತ್ತೇನೆಂದು ರಾಜ್ಯಪಾಲರು, ಖಾದರ್ ಕಾರ್ಯವೈಖರಿಯನ್ನು ಹೊಗಳಿದ್ದಾರೆ.
ಇದೆ ವೇಳೆ ಮಾತನಾಡಿದ ಆರೋಗ್ಯ ಸಚಿವ ಯು ಟಿ ಖಾದರ್, ಸದ್ಯದಲ್ಲೇ 'ಮುಖ್ಯಮಂತ್ರಿ ಸಾಂತ್ವನ' ಯೋಜನೆ ಜಾರಿಗೆ ತರುತ್ತಿದ್ದೇವೆ. ಇಡೀ ದೇಶದಲ್ಲಿ ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವುದರಲ್ಲಿ ಕರ್ನಾಟಕವೇ ಮೊದಲು ಎಂದು ಹೇಳಿದ್ದಾರೆ. (ಆರೋಗ್ಯ ಕವಚಕ್ಕೆ 198 ಆಂಬ್ಯುಲೆನ್ಸ್ ಸೇರ್ಪಡೆ)
ನಗರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಆರಂಭಿಸಿರುವ ಡಯಗ್ನೋಸ್ಟಿಕ್ ಲ್ಯಾಬ್ ನಿಂದ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ನಾನಾ ಪರೀಕ್ಷೆಗಳನ್ನು ನಡೆಸಿಕೊಡಲಾಗುವುದು ಎಂದು ಸಚಿವ ಖಾದರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications