ಕೆರೆಗಳ ಬಫರ್ ಝೋನ್: ಎನ್‌ಜಿಟಿಗೆ ಮತ್ತೆ ಮೊರೆ ಹೋಗಲು ಚಿಂತನೆ
ಬೆಂಗಳೂರು, ಆಗಸ್ಟ್ 31: ಬೆಂಗಳೂರಿನ ಕೆರೆಗಳ ಸುತ್ತ 75 ಮೀಟರ್ ಬಫರ್ ಝೋನ್ ಅಂತರ ಪಾಲಿಸಬೇಕೆಂಬ ಎನ್ ಜಿಟಿ ಆದೇಶವನ್ನು ಪ್ರಶ್ನಿಸಿ ಮತ್ತೆ ಎನ್‌ಜಿಟಿಗೆ ಮೊರೆ ಹೋಗಲು ಸರ್ಕಾರ ಚಿಂತನೆ ನಡೆಸಿದೆ.
ವಿಧಾನಸೌಧದಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಈ ವಿಷಯ ತಿಳಿಸಿದರು. ದೇಶದ ಯಾವುದೇ ನಗರ, ಪಟ್ಟಣಗಳಲ್ಲಿ ಜಾರಿಯಲ್ಲಿರದ 75 ಮೀಟರ್ ಅಂತರದ ಬಫರ್ ಝೋನ್ ಬೆಂಗಳೂರಿನಲ್ಲಿ ಮಾತ್ರ ಜಾರಿಯಲ್ಲಿದೆ. ಮಳೆ ನೀರು ಗಾಲುವೆಗಳ ಸುತ್ತ 35 ಮೀಟರ್ ಕಾಯ್ದುಕೊಳ್ಳುವ ನಿಯಮವನ್ನು ಬೆಂಗಳೂರಿಗೆ ಮಾತ್ರ ಹೇರಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಕೆರೆಗಳ ಅಭಿವೃದ್ಧಿ: ಸಿಎಂ ಸುಳಿವು
ಎನ್‌ಜಿಟಿಯ ಈ ಆದೇಶವನ್ನು ಮೊದಲ ಹಂತದಲ್ಲಿ ಎನ್‌ಜಿಟಿಯಲ್ಲಿಯೇ ಪ್ರಶ್ನಿಸಿ ನಂತರ ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್ ಗೆ ಮೊರೆ ಹೋಗಲು ಚಿಂತನೆ ನಡೆದಿದೆ. ಈ ಬಗ್ಗೆ ಅಡ್ವೊಕೇಟ್ ಜನರಲ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !