ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಟ್ಟಡಗಳಿಗೆ ಕರೆಂಟ್ ಕಟ್
ಬೆಂಗಳೂರು, ಸೆಪ್ಟೆಂಬರ್,04 : ಎಲ್ಲೆಡೆ ಗಗನ ಚುಂಬಿ ಕಟ್ಟಡಗಳು ತಾ ಮುಂದು ನಾ ಮುಂದು ಎಂದು ತಲೆ ಎತ್ತುತ್ತಿವೆ. ಅದರ ಹಿಂದೆ ಅಗ್ನಿ ದುರಂತದಂತಹ ಭಾರೀ ಅವಘಡಗಳಿಗೂ ಇವು ಆಹ್ವಾನ ನೀಡುತ್ತಿವೆ.
ಅವಘಡಗಳ ಸರಣಿ ಪರಾಮರ್ಶಿಸಿದ ಸರ್ಕಾರ ರಾಜ್ಯಾದ್ಯಂತ ಅಗ್ನಿ ಸುರಕ್ಷಾ ಕ್ರಮ ಅಳವಡಿಸಿಕೊಳ್ಳದಿರುವ ಬಹುಮಹಡಿ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಲು ಅಗ್ನಿ ಶಾಮಕ ಇಲಾಖೆಗೆ ಸೂಚನೆ ನೀಡಲು ನಿರ್ಧರಿಸಿದೆ.[ಜಲಾಶಯಗಳಲ್ಲಿ ನೀರಿನ ಕೊರತೆ, ಬೆಂಗಳೂರಲ್ಲಿ 2 ಗಂಟೆ ಪವರ್ ಕಟ್]

ಅಗ್ನಿ ಶಾಮಕ ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿದ ಗೃಹ ಸಚಿವ ಕೆ.ಜೆ ಜಾರ್ಜ್ 'ಕೆಲವು ಬಹು ಮಹಡಿ ಕಟ್ಟಡಗಳ ಮಾಲೀಕರು ಅಗ್ನಿ ಶಾಮಕ ಇಲಾಖೆಯಿಂದ ನಿರಕ್ಷೇಪಣಾ ಪತ್ರ ಪಡೆದಿಲ್ಲ. ಕಟ್ಟಡ ನಿರ್ಮಾಣ ಆರಂಭದ ಸಂದರ್ಭದಲ್ಲಿ ನಿರಾಕ್ಷೇಪಣಾ ಪತ್ರ(No Objection Certificate)ದ ಆಧಾರದ ಮೇಲೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಸ್ವಾಧೀನ ಪ್ರಮಾಣ ಪತ್ರ ಪಡೆದಿದ್ದಾರೆ. ಇಂತಹ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುವುದು' ಎಂದು ತಿಳಿಸಿದರು.
ಬಹು ಮಹಡಿ ಕಟ್ಟಡಗಳ ಆಡಿಟಿಂಗ್ ಮುಗಿದ ಬಳಿಕ ಅಗ್ನಿ ಸುರಕ್ಷಾ ಕ್ರಮ ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಸ್ವಲ್ಪ ಕಾಲಾವಕಾಶ ನೀಡಲಾಗುವುದು. ನಿಗದಿತ ಅವಧಿಗಳೊಳಗೆ ಅವು ಸರ್ಕಾರದ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಆ ಕಟ್ಟಡಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.












Click it and Unblock the Notifications