ಬೆಂಗಳೂರಲ್ಲಿ ರಾಘವೇಶ್ವರ ಶ್ರೀಗಳಿಂದ ಛಾತ್ರ ಚಾತುರ್ಮಾಸ್ಯ
ಬೆಂಗಳೂರು, ಆಗಸ್ಟ್, 18 : ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರು ಭಾಗ್ಯಶಾಲಿಗಳು, ಈ ಭಾಗ್ಯವನ್ನು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಾರ್ಥಕಪಡಿಸಿಕೊಳ್ಳಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀಸ್ವಾಮೀಜಿ ಹೇಳಿದರು.
ಛಾತ್ರ ಚಾತುರ್ಮಾಸ್ಯ ಕಾರ್ಯಕ್ರಮ ಗಿರಿನಗರದ ರಾಮಾಶ್ರಮದಲ್ಲಿ ಜುಲೈ 31 ರಂದು ಪ್ರಾರಂಭವಾಗಿದ್ದು, ಸೆಪ್ಟೆಂಬರ್ 29ರವರೆಗೆ ನಡೆಯಲಿದೆ. ಈ ಚಾತುರ್ಮಾಸದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ತಿಳಿಸಿದರು.[ಎಫ್ ಐಆರ್ ರದ್ದು, ರಾಘವೇಶ್ವರ ಶ್ರೀಗಳು ಸಲ್ಲಿಸಿದ್ದ ಅರ್ಜಿ ವಾಪಾಸ್]

ಸೋಮವಾರ ನಡೆದ ಧರ್ಮಸಭೆಯಲ್ಲಿ ಉಪಸ್ಥಿತರಿದ್ದ ಭಾರೀ ಸ್ವಾಮೀಜಿ ಅವರು ಶ್ರೀ ಭಾರತೀ ಪ್ರಕಾಶನದ ಡಾ. ಸುವಣಿನೀ ರಾವ್ ಕೊಣಲೆ ಅವರ 'ಜಟಾಯು ಸಂಪಾತಿ' ಪುಸ್ತಕ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ದೇವರು ಮನುಷ್ಯ ಜನ್ಮವನ್ನು ಮೋಕ್ಷ ಪಡೆಯಲು ದಯಪಾಲಿಸಿದ್ದಾನೆ. ಆದರೆ ಮಾನವರಾದ ನಾವು ಮೋಕ್ಷ ಪಡೆಯುವುದರ ಕಡೆ ಸ್ವಲ್ಪವೂ ಯೋಚಿಸುತ್ತಿಲ್ಲ. ಯಾವಾಗಲೂ ಸಮಾಜ ಘಾತುಕ ಚಿಂತನೆಗಳನ್ನು ಮಾಡುತ್ತಾ ಮನುಷ್ಯ ಜನ್ಮವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಇರುವ ಉತ್ತಮ ಜನ್ಮವನ್ನು ಅತ್ಯುತ್ತಮ ಕೈಂಕರ್ಯಗಳಿಗೆ ಬಳಸಿ ಬದುಕನ್ನು ಸಾರ್ಥಕ್ಯ ಮಾಡಿಕೊಳ್ಳಿ ಎಂದು ಸ್ವಾಮೀಜಿ ಕರೆ ನೀಡಿದರು.[ರಾಘವೇಶ್ವರ ಶ್ರೀಗಳಿಗೆ 13 ಪರೀಕ್ಷೆ ಮಾಡಲಾಗಿದೆ]
ಈ ಸಂದರ್ಭದಲ್ಲಿ ಸಂಗೀತ ವಿಭಾಗದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ರಮ್ಯಾ ಭಟ್ ಅವರಿಗೆ ಛಾತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಮಂಗಳೂರು ಮಂಡಲದ ಬಾಯಾರು, ಮುಡಿಪು, ಕೋಳ್ಯೂರು, ಕನ್ಯಾನ ವಲಯದವರು ಸರ್ವಸೇವೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಶಶಿ ಭೂಷಣ ಹೆಗಡೆ, ಮಹಾಮಂಡಲದ ಸೇವಾ ಪ್ರಧಾನ ಹೇರಂಭ ಶಾಸ್ತ್ರಿ, ಕೋಶಾಧ್ಯಕ್ಷ ಜೆಡ್ಡು ರಾಮಚಂದ್ರ ಭಟ್, ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications