ಶ್ರೀಕೃಷ್ಣ ಜನ್ಮಾಷ್ಟಮಿ: ಸೆ.6ಕ್ಕೆ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ
ಬೆಂಗಳೂರು, ಸೆಪ್ಟಂಬರ್ 04: ಕರ್ನಾಟಕದ ವಿವಿಧೆಡೆ 'ಶ್ರೀ ಕೃಷ್ಣಾ ಜನ್ಮಾಷ್ಟಮಿ' ಹಬ್ಬದ ಸಂಭ್ರಮಾಚಾರಣೆಗೆ ತಯಾರಿ ನಡೆತಯತ್ತಿದೆ. ಈ ವಿಶೇಷ ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿ 'ಪ್ರಾಣಿ ವಧೆ ಮತ್ತು ಮಾಂಸ' ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಪ್ರಕಟಣೆ ಹೊರಡಿಸಿದೆ.
ಭಗವಾನ್ ಶ್ರೀ ಕೃಷ್ಣನ ಜನ್ಮದಿನವನ್ನು ಸ್ಮರಿಸುವ ಹಬ್ಬ ಈ ಶ್ರೀಕೃಷ್ಣ ಜನ್ಮಾಷ್ಟಮಿಯಾಗಿದೆ. ಈ ವರ್ಷ ಸೆಪ್ಟಂಬರ್ 6ರಂದು ಆಚರಣೆ ನಡೆಯಲಿದೆ. ಒಟ್ಟು ಎರಡು ದಿನ ಆಚರಿಸಲಾಗುತ್ತಿದೆ. ಈ ಸಂಬಂಧ ಬುಧವಾರ ಸೆಪ್ಟಂಬರ್ 6ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು (ಪಶುಪಾಲನೆ) ರವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಕೆಲವು ವಿಶೇಷ ಹಬ್ಬಗಳಲ್ಲಿ ಪ್ರಾಣಿ ವಧೆ ನಿಷೇಧಿಸಿದಂತೆ ಈ ಹಬ್ಬದಂದು ಸಹ ಪ್ರಾಣಿ ವಧೆ ನಿಷೇಧಿಸಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ ಬೆಂಗಳೂರಿನ ದೇವಸ್ಥಾನ, ಶ್ರೀಕೃಷ್ಣನ ಆರಾಧಕರು ಸೇರಿದಂತೆ ವಿವಿಧ ಮನೆಗಳಲ್ಲಿ ಭರ್ಜರಿ ತಯಾರಿ ನಡೆದಿದೆ. ಈಗಾಗಲೇ ಮಾರುಕಟ್ಟೆಗಳಲ್ಲಿ ಜನ ಖರೀದಿಗಾಗಿ ದಾಂಗುಡಿ ಇಡುತ್ತಿದ್ದಾರೆ. ಹಬ್ಬದ ಸನ್ನಿವೇಶಗಳಲ್ಲಿ ಹೂ, ಹಣ್ಣು, ಕಾಯಿಗಳ ದರಗಳು ಹೆಚ್ಚಾಗುವ ಸಾಧ್ಯತೆಗಳು ಇವೆ. ಒಟ್ಟು ಎರಡು ದಿನ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ ನಡೆಯಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ-ಸಮಯದ ಮಾಹಿತಿ
* ಅಷ್ಟಮಿ ತಿಥಿ ಆರಂಭ- ಸೆಪ್ಟಂಬರ್ 6 ರಂದು ಮಧ್ಯಾಹ್ನ 03.37ಕ್ಕೆ ಆರಂಭವಾಗುತ್ತದೆ.
* ರೋಹಿಣಿ ನಕ್ಷತ್ರ ಪ್ರಾರಂಭ- ಸೆಪ್ಟಂಬರ್ 6 ಬೆಳಗ್ಗೆ 9.20
* ರೋಹಿಣಿ ನಕ್ಷತ್ರ ಕೊನೆ- ಸೆಪ್ಟಂಬರ್ 7 ಬೆಳಗ್ಗೆ 10.25
* ಅಷ್ಟಮಿ ತಿಥಿ ಅಂತ್ಯ- ಸೆಪ್ಟಂಬರ್ 7 ರಂದು ಬೆಳಗ್ಗೆ 10.25ಕ್ಕೆ ಕೊನೆಗೊಳ್ಳುತ್ತದೆ.
* ಜನ್ಮಾಷ್ಟಮಿ ಸೆಪ್ಟಂಬರ್ 7 ಜನ್ಮಾಷ್ಟಮಿ
* ನಿಶಿತಾ ಪೂಜಾ ಸಮಯ ಸೆಪ್ಟಂಬರ್ 7 ಮಧ್ಯಾಹ್ನ 12.02 ರಿಂದ
* ಮಧ್ಯರಾತ್ರಿ ಕ್ಷಣ 12.25, ಚಂದ್ರೋದಯ ಕ್ಷಣ 11.55 ರಾತ್ರಿ












Click it and Unblock the Notifications