ಕೆಜೆ ಜಾರ್ಜ್ ವಿರುದ್ಧ ಹಿರೇಮಠ್ ಕೊಟ್ಟ ದಾಖಲೆಗಳೇನು?

ಬೆಂಗಳೂರು, ಏ. 22 : 'ಎಸ್.ಆರ್.ಹಿರೇಮಠ ಅವರು ತಮ್ಮ ವಿರುದ್ಧದ ಆರೋಪಗಳಿಗೆ ದಾಖಲೆ ನೀಡಲಿ' ಎಂದು ಸವಾಲು ಹಾಕಿದ್ದ ಗೃಹ ಸಚಿವ ಕೆಜೆ ಜಾರ್ಜ್ ಅವರಿಗೆ ಹಿರೇಮಠ ಅವರು ದಾಖಲೆಗಳ ಮೂಲಕವೇ ಉತ್ತರ ನೀಡಿದ್ದಾರೆ. ಬಿಡಿಎ ನಿವೇಶನ ಹೊಂದಿದ್ದರೂ ವೈಯಾಲಿಕಾವಲ್ ಹೌಸಿಂಗ್ ಸೊಸೈಟಿಯಿಂದ ಜಾರ್ಜ್ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು, ಜಾರ್ಜ್ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಬೇನಾಮಿ ಹೆಸರಿನಲ್ಲಿ ಗೃಹ ಸಚಿವರು ನಿವೇಶನ ಪಡೆದಿದ್ದಾರೆ ಎಂದು ದೂರಿದರು.[ಸದಾನಂದ ಗೌಡರನ್ನು ಸಂಪುಟದಿಂದ ಕೈಬಿಡಿ : ಹಿರೇಮಠ್]

KJ George

ಹಿರೇಮಠ ಅವರು ಹೇಳಿದ್ದಿಷ್ಟು : ಕೆಜೆ ಜಾರ್ಜ್ ಅವರು ಬೆಂಗಳೂರಿನಲ್ಲಿ ಬಿಡಿಎಯಿಂದ ನಿವೇಶನ ಪಡೆದಿದ್ದಾರೆ. ಆದರೆ, ಅದನ್ನು ಮರೆಮಾಚಿ ಪತ್ನಿ ಸುಜಾ ಜಾರ್ಜ್ ಮತ್ತು ಸಹೋದರ ಕೆ.ಜೆ.ಕುರುವಿಲ್ಲಾ ಅವರ ಹೆಸರಿನಲ್ಲಿ ವೈಯಾಲಿಕಾವಲ್ ಹೌಸಿಂಗ್ ಸೊಸೈಟಿಯಿಂದ ನಿವೇಶನ ಪಡೆದಿದ್ದಾರೆ. [ಸಾಮಾನ್ಯ ಜನರ ಶಕ್ತಿಯೇ ನನಗೆ ಸ್ಫೂರ್ತಿ : ಹಿರೇಮಠ]

ಬೇನಾಮಿ ಹೆಸರಿನಲ್ಲಿ ಖರೀದಿ : 2004ರಲ್ಲಿ ವೈಯಾಲಿಕಾವಲ್ ಹೌಸಿಂಗ್ ಸೊಸೈಟಿಯಿಂದ 8.40 ಲಕ್ಷ ರೂ.ಗೆ ನಾಗವಾರ ಬಳಿ ಒಂದು ನಿವೇಶನ ಖರೀದಿ ಮಾಡಿದ್ದರು. ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 21, 2013 ರಂದು ಆ ನಿವೇಶನವನ್ನು ಸೊಸೈಟಿಗೆ ಅಷ್ಟೇ ಹಣಕ್ಕೆ ವಾಪಸ್ ನೀಡಿದ್ದಾರೆ.

4 ತಿಂಗಳ ನಂತರ ಇಸ್ಮಾಯಿಲ್ ಷರೀಫ್ ಎನ್ನುವವರು ಈ ನಿವೇಶನವನ್ನು ಖರೀದಿಸಿದ್ದಾರೆ. ಇಸ್ಮಾಯಿಲ್ ಷರೀಫ್ ಅವರ ಹೆಸರಿನಲ್ಲಿ ಬೇನಾಮಿಯಾಗಿ ಜಾರ್ಜ್ ನಿವೇಶನ ಖರೀದಿ ಮಾಡಿದ್ದಾರೆ ಎಂಬುದು ಹಿರೇಮಠ್ ಅವರ ಆರೋಪವಾಗಿದೆ.

ವೈಯಾಲಿಕಾವಲ್ ಹೌಸಿಂಗ್ ಸೊಸೈಟಿ 9 ವರ್ಷಗಳ ಬಳಿಕ ಅಷ್ಟೇ ಹಣಕ್ಕೆ ನಿವೇಶನವನ್ನು ವಾಪಸ್ ಪಡೆಯುತ್ತದೆ ಮತ್ತು ಅದೇ ನಂಬರ್ ಸೈಟ್ ಅನ್ನು ಅಷ್ಟೇ ಹಣಕ್ಕೆ ಪುನಃ ಇಸ್ಮಾಯಿಲ್ ಷರೀಫ್ ಎನ್ನುವವರಿಗೆ ಮಾರಾಟ ಮಾಡುತ್ತದೆ ಎಂದು ಹಿರೇಮಠ್ ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+