ಪಶ್ಚಾತ್ತಾಪ ಪಡಲು ನಾನೇನು ತಪ್ಪು ಮಾಡಿಲ್ಲ: ಭವಾನಿ
ಬೆಂಗಳೂರು, ಅ.8: 'ಪಶ್ಚಾತ್ತಾಪ ಪಡಲು ನಾನೇನು ತಪ್ಪು ಮಾಡಿಲ್ಲ, ನಾನು ವಾದಿಸಿದ್ದು ಆ ಸಂದರ್ಭದಲ್ಲಿ ಸರಿಯಾಗೇ ಇತ್ತು' ಎಂದು ಸರ್ಕಾರಿ ಅಭಿಯೋಜಕ ಜಿ. ಭವಾನಿ ಸಿಂಗ್ ಅವರು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ ಬುಧವಾರ ಹೇಳಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ಜಾಮೀನು ನೀಡಲು ಅಡ್ಡಿ ಇಲ್ಲ ಎಂದು ಕೋರ್ಟ್ ಹಾಲ್ ನಲ್ಲಿ ಸಿಂಗ್ ಹೇಳಿದ್ದು ಈಗ ಚರ್ಚಾಸ್ಪದ ವಿಷಯವಾಗಿದೆ.
ಅ.1ರಂದು ವಿಶೇಷ ನ್ಯಾಯಪೀಠದ ಮುಂದೆ ಜಯಾ ಅವರ ಜಾಮೀನು ಅರ್ಜಿ ವಿಚಾರಣೆ ಬಂದಾಗ ನಾನು ವಿರೋಧಿಸಿದ್ದೆ. ಅ.7ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಜಯಲಲಿತಾ ಪರ ವಕೀಲ ರಾಮ್ ಜೇಠ್ಮಲಾನಿ ಅವರು ಜಾಮೀನಿಗಿಂತ, ಅಪರಾಧಿ ಎಂದು ನೀಡಿರುವ ಆದೇಶವನ್ನು ರದ್ದು ಪಡಿಸಬೇಕು ಎಂದು ವಾದಿಸಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ವಾಯಿದೆ ಕೋಡಿ ಎಂದು ಕೇಳಿದೆ. [ಜಯಾಗೆ ಜಾಮೀನು, ರಾಜಗೋಪುರಕ್ಕೆ ಬೆಂಕಿ!]
ಸಿಆರ್ ಪಿಸಿ ಸೆಕ್ಷನ್ 389ರ ಅನ್ವಯ ಜಯಲಲಿತಾ ಅವರಿಗೆ ಶಿಕ್ಷೆ ವಿಧಿಸಿರುವ ಆದೇಶ ರದ್ದು ಪಡಿಸಲು ಕೋರ್ಟಿಗೆ ಅಧಿಕಾರವಿದೆ. ಹೀಗಾಗಿ ಇಂದೇ ಜಾಮೀನು ಮಂಜೂರು ಮಾಡಬೇಕು. ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ಮಂಜೂರಾಗಿದೆ ಎಂದು ವಾದವನ್ನು ಮತ್ತೊಂದು ಹಾದಿಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಜಾಮೀನು ನೀಡುವುದು ಬಿಡುವುದು ನ್ಯಾಯಾಧೀಶರು ಹಾಗೂ ಜಯಾ ವಕೀಲರಿಗೆ ಸಂಬಂಧಿಸಿದ ವಿಷಯವಾಗಿತ್ತು.

ಬೇಲ್ ಕೇಳುತ್ತಿರುವ ರೀತಿಯೇ ಸರಿಯಿಲ್ಲ
ಇಬ್ಬರ ನಡುವೆ ತಡೆಗೋಡೆ ಆಗಲು ನನಗೆ ಇಷ್ಟವಿರಲಿಲ್ಲ ಹಾಗಾಗಿ ಷರತ್ತುಬದ್ಧ ಜಾಮೀನು ನೀಡಲು ನಾನು ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ ಎಂದು ಭವಾನಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಜಯಾ ಪರ ವಕೀಲರ ವಾದದ ವೈಖರಿಯನ್ನು ತರಾಟೆಗೆ ತೆಗೆದುಕೊಂಡ ಭವಾನಿ ಅವರು ಬೇಲ್ ಕೇಳುತ್ತಿರುವ ರೀತಿಯೇ ಸರಿಯಿಲ್ಲ. ಬೇಲ್ ಕೇಳುವ ಬದಲು ಮೆರಿಟ್ಸ್ , ಆದೇಶ ರದ್ದು ಮಾಡಿ ಎಂದು ವಾದಿಸುತ್ತಿದ್ದಾರೆ ಇದು ತಪ್ಪು ಎಂದಿದ್ದಾರೆ.

ನಮ್ಮ ಆಕ್ಷೇಪಣೆ ಇಲ್ಲ ಎಂದು ಭವಾನಿ ಸಿಂಗ್
ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ ಹಾಗೂ ಇನ್ನಿತರ ಅಪರಾಧಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಾದ ಪ್ರತಿವಾದವನ್ನು ಆಲಿಸಿದ ನ್ಯಾ. ಎ.ವಿ ಚಂದ್ರಶೇಖರ ಅವರು ಆದೇಶ ಪ್ರತಿ ತಯಾರಿಸುವುದಕ್ಕೂ ಮುನ್ನ ಸರ್ಕಾರಿ ಅಭಿಯೋಜಕರನ್ನು ಜಾಮೀನು ನೀಡಿಕೆ ಬಗ್ಗೆ ಆಕ್ಷೇಪಣೆ ವಿದಿಯೇ? ಎಂದು ಪ್ರಶ್ನಿಸಿದ್ದಾರೆ. ನಮ್ಮ ಆಕ್ಷೇಪಣೆ ಇಲ್ಲ ಎಂದು ಭವಾನಿ ಸಿಂಗ್ ಉತ್ತರಿಸಿದ್ದಾರೆ.

ಜಯಾ ಪರ ವಕೀಲರ ಆತುರ ಅನರ್ಥ
ಈ ಕ್ಷಣದಲ್ಲಿ ಹಾಲ್ ನಲ್ಲಿದ್ದ ಜಯಾ ಪರ ವಕೀಲರಲ್ಲಿ ಒಬ್ಬರಾದ ದೊರೈ ಪಾಂಡ್ಯನ್ ಅವರು ಇನ್ನೂ ಆದೇಶ ಹೊರಡುವ ಮುನ್ನವೇ ಜಯಾ ಅವರಿಗೆ ಜಾಮೀನು ಖಚಿತ, ಎಸ್ ಪಿಪಿ ಅವರು ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಹೊರಗಡೆ ಬಂದು ಸಾರಿದ್ದಾರೆ.
ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಪರಪ್ಪನ ಅಗ್ರಹಾರ, ಹೈಕೋರ್ಟ್ ದಾಟಿ ತಮಿಳುನಾಡು ಸೇರಿ ಜಯಾ ಅಭಿಮಾನಿಗಳು ಸಂಭ್ರಮಾಚರಣೆ ಮಾಡತೊಡಗಿದರು.
ಕೊನೆಯಲ್ಲಿ ಸಕತ್ ಟ್ವಿಸ್ಟ್
ಕೊನೆಯಲ್ಲಿ ಪ್ರಕರಣ ಒಳ್ಳೆ ತಿರುವು ಪಡೆದುಕೊಂಡಿದೆ. ನ್ಯಾ. ಚಂದ್ರಶೇಖರ್ ಅವರು ತಮ್ಮ ತೀರ್ಪಿನ ಪ್ರತಿ ಓದುವಾಗ ಭವಾನಿ ಸಿಂಗ್ ಅವರು ಭವಾನಿ ಸಿಂಗ್ ಈ ಮೊದಲು(ಅ.1) ಜಾಮೀನು ಕೊಡಬಾರದು ಎಂದಿದ್ದರು ಇಂದು ಆಕ್ಷೇಪಣೆ ಇಲ್ಲ ಎಂದಿದ್ದಾರೆ. ಎಸ್ ಪಿಪಿ ಅವರ ವಾದದ ವೈಖರಿ ಗೊಂದಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊನೆಗೆ ಹಲವಾರು ಕಾರಣಗಳನ್ನು ನೀಡಿ ಜಯಾ ಇನ್ನಿತರರ ಅಪರಾಧಿಗಳಿಗೆ ಜಾಮೀನು ನಿರಾಕರಿಸಿದರು. [ಜಡ್ಜ್ ನೀಡಿದ ಕಾರಣಗಳು ಇಲ್ಲಿವೆ]

ಭವಾನಿ ಸಮರ್ಥನೆಗೆ ತಕ್ಕಂತೆ ನಡೆಯಿತು
ಜಾಮೀನು ನೀಡುವುದು ಬಿಡುವುದು ನ್ಯಾಯಾಧೀಶರು ಹಾಗೂ ಜಯಾ ವಕೀಲರಿಗೆ ಸಂಬಂಧಿಸಿದ ವಿಷಯವಾಗಿತ್ತು. ಹೀಗಾಗಿ ನಾನು ಆಕ್ಷಪೇನೆ ಸಲ್ಲಿಸಿಲ್ಲ ಎಂದಿದ್ದಾರೆ. ಅ.7ರಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸದಿದ್ದರೂ ಅ.1ರಂದು ಆಕ್ಷೇಪಣೆ ಸಲ್ಲಿಸಿ ನೀಡಿದ ಲಿಖಿತ ವಾದದ ಪ್ರತಿಯನ್ನು ನ್ಯಾ. ಚಂದ್ರಶೇಖರ್ ಅವರು ಪರಿಗಣಿಸಿದರು ಹೀಗಾಗಿ, ಜಡ್ಜ್ ಕೇಳಿದಾಗ ಆಕ್ಷೇಪಣೆ ಇಲ್ಲ ಎಂದು ಭವಾನಿ ಅವರು ಹೇಳಿದರೂ ಈ ಹಿಂದೆ ನೀಡಿದ್ದ ಪ್ರತಿ ಜಯಾಗೆ ಮುಳುವಾಯಿತು.












Click it and Unblock the Notifications