SWR: ಬೆಂಗಳೂರು SMVT, ಯಶವಂತಪುರ ನಿಲ್ದಾಣದಿಂದ ಈ ಮಾರ್ಗದಲ್ಲಿ ವಿಶೇಷ ರೈಲು ಸೇವೆ, ವೇಳಾಪಟ್ಟಿ
ಬೆಂಗಳೂರು, ಸೆಪ್ಟಂಬರ್ 12: ಹಬ್ಬದ ಸಂದರ್ಭ ಪ್ರಯಾಣಿಕರ ಸೌಲಭ್ಯಕ್ಕಾಗಿ ದಕ್ಷಿಣ ಪಶ್ಚಿಮ ರೈಲ್ವೆ ಎರಡು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಯಶವಂತಪುರ-ಮಡಗಾಂವ್ ಮತ್ತು ಎಸ್‌ಎಂವಿಟಿ ಬೆಂಗಳೂರು-ಬೀದರ್ ನಡುವೆ ತಾತ್ಕಾಲಿಕ ರೈಲುಗಳನ್ನು ಕಾರ್ಯಾಚರಣೆ ಮಾಡಲಿದೆ.ಈ ರೈಲುಗಳ ದಿನಾಂಕ, ಸಮಯ ವೇಳಾಪಟ್ಟಿ ಹಾಗೂ ನಿಲುಗಡೆ ಮಾಡಿದೆ ಇಲ್ಲಿದೆ.
ನೈಋತ್ಯ ರೈಲ್ವೆ (SWR) ಯಶವಂತಪುರ-ಮಡಗಾಂವ್ ಮತ್ತು ಎಸ್‌ಎಂವಿಟಿ ಬೆಂಗಳೂರು-ಬೀದರ್ ಒಂದು ಟ್ರಿಪ್ ಸೇವೆ ನೀಡಲಿದೆ. ಈ ರೈಲುಗಳು ವಿಶೇಷ ಸೇವೆಯು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 1ರವರೆಗೆ ಲಭ್ಯವಾಗಲಿದೆ. ಪ್ರಯಾಣಿಕರು ವೇಳಾಪಟ್ಟಿ ಗಮನಿಸಿ ಸಂಚಾರ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳು ಕೋರಿದ್ದಾರೆ.

ಯಶವಂತಪುರ-ಮಡಗಾಂವ್ ವಿಶೇಷ ಸಂಚಾರ
ರೈಲು ಸಂಖ್ಯೆ 06249 ಯಶವಂತಪುರ-ಮಡಗಾಂವ್ ಸೆಪ್ಟೆಂಬರ್ 30ರಂದು ಮಧ್ಯಾಹ್ನ 12:00ಕ್ಕೆ ಯಶವಂತಪುರ ನಿಲ್ದಾಣ ಹೊರಟು, ಮರುದಿನ ಬೆಳಗ್ಗೆ 05:30ಕ್ಕೆ ಮಡಗಾಂವ್ ನಿಲ್ದಾಣದ ತಲುಪಲಿದೆ. ಮರಳಿ ಅದೇ ದಿಕ್ಕಿನಲ್ಲಿ ಮಡಗಾಂವ್-ಯಶವಂತಪುರ ವಿಶೇಷ ರೈಲು (06250) ಅಕ್ಟೋಬರ್ 1ರಂದು ಬೆಳಗ್ಗೆ 06:30 ಗಂಟೆಗೆ ಹೊರಟು, ಅದೇ ದಿನ ರಾತ್ರಿ 11:40ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬಂದು ಸೇರಿಲಿದೆ.
ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಎಲ್ಲ ವರ್ಗದ ಬೋಗಿ ಸೇರಿ ಒಟ್ಟು 16 ಬೋಗಿಗಳನ್ನು ಹೊಂದಿದೆ. ಮಾರ್ಗ ಮಧ್ಯದಲ್ಲಿ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಉಡುಪಿ, ಕಾರವಾರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಎಂವಿಟಿ ಬೆಂಗಳೂರು-ಬೀದರ್ ವಿಶೇಷ ರೈಲು ಸೇವೆ
ಎಸ್‌ಎಂವಿಟಿ ಬೆಂಗಳೂರು-ಬೀದರ್ ವಿಶೇಷ ರೈಲು (06291) ಸೆಪ್ಟೆಂಬರ್ 30ರಂದು ರಾತ್ರಿ 09:15ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಅಕ್ಟೋಬರ್ 1ರಂದು ಬೆಳಗ್ಗೆ 11:30ಕ್ಕೆ ಬೀದರ್ ತಲುಪಲಿದೆ. ಮರಳಿ ಅದೇ ದಿಕ್ಕಿನಲ್ಲಿ ಬೀದರ್-ಬೆಂಗಳೂರು ಎಸ್‌ಎಂವಿಟಿ ರೈಲು (06292) ಅಕ್ಟೋಬರ್ 1ರಂದು ಮಧ್ಯಾಹ್ನ 01:00 ಗಂಟೆಗೆ ಬೀದರ್‌ನಿಂದ ಹೊರಟು, ಮರುದಿನ ಬೆಳಗ್ಗೆ 04:00ಕ್ಕೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಬರಲಿದೆ.
ಈ ರೈಲು 22 ಬೋಗಿಗಳನ್ನು ಒಳಗೊಂಡಿದೆ. ಯಲಹಂಕ, ಧರ್ಮಾವರಂ, ಅನಂತಪುರ, ರಾಯಚೂರು, ಕಲಬುರಗಿ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ಹತ್ತಿರದ ರೈಲು ನಿಲ್ದಾಣ ವಿಚಾರಣಾ ಕೇಂದ್ರವನ್ನು ಸಂಪರ್ಕಿಸಬಹುದು. ಇಲ್ಲವೇ ಸಹಾಯವಾಣಿ 139ಕ್ಕೆ ಕರೆ ಮಾಡಿ ಅಥವಾ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.












Click it and Unblock the Notifications