ಬೆಂಗಳೂರು; ಜ. 24ರಿಂದ ಕೆಲವು ರೈಲುಗಳ ಸಂಚಾರ ರದ್ದು, ಪಟ್ಟಿ

ಬೆಂಗಳೂರು, ಜನವರಿ 21: ಸುರಕ್ಷತಾ ಕಾಮಗಾರಿಗಳ ನಿರ್ವಹಣೆ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮಲ್ಲಸಂದ್ರ ಮತ್ತು ತುಮಕೂರು ಮಾರ್ಗದಲ್ಲಿ ಸುರಕ್ಷತಾ ಕಾಮಗಾರಿಗಳ ನಿರ್ವಹಣೆ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಸಂಚಾರ ನಡೆಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 24 ರಿಂದ 27ರ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.

ಯಶವಂತಪುರ-ಅರಸೀಕೆರೆ ಡೆಮು ವಿಶೇಷ ರೈಲು, ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಗೋವಾ-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಬಿಕನೇರ್ ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.

South Western Cancelled Diverted Train Routes

ಯಾವ-ಯಾವ ರೈಲು

* ಕೆಎಸ್ಆರ್‌-ಬೆಂಗಳೂರು ಎಕ್ಸ್‌ಪ್ರೆಸ್ 06202 ಜನವರಿ 24 ರಿಂದ 27ರ ತನಕ ಸ್ಥಗಿತ

* ಯಶವಂತಪುರ-ಅರಸೀಕೆರೆ ಡೆಮು ವಿಶೇಷ ರೈಲು (06275) ಸಂಚಾರ ಜ.25, 26, 27 ಭಾಗಶಃ ಸ್ಥಗಿತ. ರೈಲು ತುಮಕೂರು-ಯಶವಂತಪುರ ನಡುವೆ ಸಂಚಾರ ನಡೆಸಲಿದೆ.

* ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (02726) ಜ. 24ರಿಂದ 27ರ ತನಕ ಧಾರವಾಡ-ಅರಸೀಕೆರೆ ನಡುವೆ ಸಂಚಾರ.

* ಅರಸೀಕೆರೆ-ಯಶವಂತಪುರ ಡೆಮು ರೈಲು 06276 ಜನವರಿ 25 ರಿಂದ 29ರ ತನಕ ತುಮಕೂರು ತನಕ ಹೋಗಿ ವಾಪಸ್ ಬರಲಿದೆ.

* ಗೋವಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲು 07340 ಜನವರಿ 28ರಿಂದ ಅರಸೀಕೆರೆ ತನಕ ಸಂಚಾರ ನಡೆಸಿ ಜ.29ರಂದು ವಾಪಸ್ ಗೋವಾ ಕಡೆ ಸಂಚಾರ ನಡೆಸಲಿದೆ.

* ಯಶವಂತಪು-ಬಿಕನೇರ್ (06587), ಯಶವಂತಪುರ-ಬಾರ್ಮರ್ (04805), ಯಶವಂತಪುರ-ಹಜರತ್ ನಿಜಾಮುದ್ದೀನ್ (06249), ಮೈಸೂರು-ವಾರಣಾಸಿ (06229) ರೈಲುಗಳು ಯಶವಂತಪುರ, ಚಿಕ್ಕಬಣಾವರ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ ನಡೆಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+