Train Cancelled: ಬೆಂಗಳೂರಿನಿಂದ ಹೊರಡುವವರು ಗಮನಿಸಿ, ಭಾಗಶಃ ರೈಲುಗಳು ರದ್ದು!
ಬೆಂಗಳೂರು, ಜುಲೈ 22: ಭಾರತೀಯ ರೈಲ್ವೆಯ ಕರ್ನಾಟಕ ವಲಯವಾದ ನೈಋತ್ಯ ರೈಲ್ವೆಯ (SWR) ವ್ಯಾಪ್ತಿಯಲ್ಲಿ ಸುರಕ್ಷತಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಬೆಂಗಳೂರಿನಿಂದ ವಿವಿಧೆಡೆ ಹೊರಡುತ್ತಿದ್ದ ಕೆಲವು ರೈಲಗಳು ಭಾಗಶಃ ರದ್ದಾಗಿವೆ. ಯಾವೆಲ್ಲ ರೈಲುಗಳು ಎಲ್ಲಿಂದ? ಹೊರಡಲಿವೆ, ಎಲ್ಲಿಗೆ ಕೊನೆಯಾಗುತ್ತವೆ ಎಂಬ ವೇಳಾಪಟ್ಟಿ ಇಲ್ಲಿದೆ.
* ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12657) ಜುಲೈ 30ರಂದು, ಆಗಸ್ಟ್ 6 ಮತ್ತು 13 ರಂದು ಪ್ರಯಾಣ ಆರಂಭಿಸಲಿದೆ. ಈ ರೈಲು ವೈಟ್‌ಫೀಲ್ಡ್‌ನಲ್ಲಿಯೇ ಪ್ರಯಾಣ ಅಂತ್ಯಗೊಳಿಸುತ್ತದೆ.

* ನಾಂದೇಡ್-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16594), ಜುಲೈ 30, ಆಗಸ್ಟ್ 6 ಮತ್ತು 13 ರಂದು ಪ್ರಯಾಣ ಆರಂಭಿಸಲಿದ್ದು, ಯಲಹಂಕದಲ್ಲಿ ಮಾರ್ಗ ಕೊನೆಗೊಳ್ಳಲಿದೆ. ಇದನ್ನು ಗಮನಿಸಿ ಪ್ರಯಾಣಿಕರು ಸಂಚರಿಸಬೇಕು.
* ಹುಬ್ಬಳ್ಳಿ-KSR ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17392), ಜುಲೈ 30, ಆಗಸ್ಟ್ 6 ಮತ್ತು 13 ರಂದು ಸಂಚಾರ ಆರಂಭಿಸಲಿದ್ದು, ಯಶವಂತಪುರಕ್ಕೆ ಬರಲಿದೆ, ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸುವುದಿಲ್ಲ.
* KSR ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17391), ಜುಲೈ 31, ಆಗಸ್ಟ್ 7 ಮತ್ತು 14 ರಂದು ಪ್ರಯಾಣ ನಡೆಸಲಿದ್ದು, ಇದು ಮೆಜೆಸ್ಟಿಕ್ ನಿಲ್ದಾಣ ಬದಲಾಗಿ, ಯಶವಂತಪುರದಿಂದ ತೆರಳಲಿದೆ.
* ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು (ಸಂಖ್ಯೆ 06244) ಜುಲೈ 30, ಆಗಸ್ಟ್ 6 ಮತ್ತು 13 ರಂದು ಪ್ರಯಾಣ ಬೆಳೆಸಲಿದೆ. ಈ ರೈಲು ಯಶವಂತಪುರದಲ್ಲಿ ಕೊನೆಯ ನಿಲುಗಡೆ ಹೊಂದಿರಲಿದೆ.
* ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ಡೈಲಿ ಪ್ಯಾಸೆಂಜರ್ ವಿಶೇಷ ರೈಲು (ಸಂಖ್ಯೆ 06243) ಜುಲೈ 31ರಂದು, ಆಗಸ್ಟ್ 7 ಮತ್ತು 14 ರಂದು ಪ್ರಯಾಣಿಸಲಿದೆ. ಇದು ಯಶವಂತಪುರ ಸಂಚರಿಸಲಿದೆ. ಈ ದಿನಾಂಕಗಳಂದು ಪ್ರಯಾಣಿಕರು ಗಮನಿಸಿ ಸಂಚರಿಸುವಂತೆ ನೈಋತ್ಯ ರೈಲ್ವೆ ವಲಯ ಮನವಿ ಮಾಡಿಕೊಂಡಿದೆ.












Click it and Unblock the Notifications