ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಶಿವರಾತ್ರಿಗೆ ಶಾಪಿಂಗ್‌ ಮಾಡಲು ಚಿತ್ರಕಲಾ ಪರಿಷತ್‌ಗೆ ಬನ್ನಿ: ಕಾಶೀಮಾ ರಫಿ

|
Google Oneindia Kannada News

ಬೆಂಗಳೂರು ಮಾರ್ಚ್‌ 5: ನಗರದ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ತಾರ ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬಹುಭಾಷಾ ನಟಿ ಕಾಶೀಮಾ ರಫಿ ಚಾಲನೆ ನೀಡಿದ್ದಾರೆ. ಮಾರ್ಚ್‌ 14 ರವರೆಗೆ ಈ ಮೇಳ ನಡೆಯಲಿದೆ.

ಕಾಶೀಮಾ ರಫಿ ಮಾತನಾಡಿ, ಮುಂಬರುವ ಮಹಾಶಿವರಾತ್ರಿಗೆ ಉತ್ಪನ್ನಗಳನ್ನು ಖರೀದಿಸಲು ಅಲ್ಲದೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಕಲಾವಿದರ ಕೈಚಳಕದ ಕಲಾಕೃತಿಗಳನ್ನು ನೋಡುವ ಮತ್ತು ಕೊಂಡುಕೊಳ್ಳುವ ಉತ್ತಮ ಅವಕಾಶವನ್ನು ಫಾಲ್ಕನ್‌ ಈವೆಂಟ್ಸ್‌ ನಿಮ್ಮ ಮುಂದೆ ಇಡುತ್ತಿದೆ. ಇದೇ ಮಾರ್ಚ್‌ 4 ರಿಂದ ಮಾರ್ಚ್‌ 14 ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಚಿತ್ತಾರ - ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ (ಶಿವಾನಂದ ವೃತ್ತದ ಬಳಿ), ಬೆಂಗಳೂರು
ದಿನಾಂಕ: ಮಾರ್ಚ್ 14 ರ ವರೆಗೆ

South Indian film actress Kaashima Rafi inaugurates Chittara at CKP

ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

ಈ ಚಿತ್ತಾರದ ವಿಶೇಷವೆಂದರೆ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

South Indian film actress Kaashima Rafi inaugurates Chittara at CKP

Recommended Video

10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada

ನಗರದ ಮಧ್ಯಭಾಗದ ಕರಕುಶಲ ವಸ್ತುಗಳಿಗೊಸ್ಕರವೇ ಬಹಳಷ್ಟು ಪ್ರಸಿದ್ದಿಯನ್ನು ಹೊಂದಿರುವ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಇಂತಹದೊಂದು ವಿಶಿಷ್ಟ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಮುಂಬರುವ ಹಬ್ಬದ ಸೀಸನ್‌ಗೆ ಶಾಪಿಂಗ್‌ ಮಾಡಲು ಹಾಗೂ ಒಂದು ಸಂಪೂರ್ಣ ದಿನದ ಶಾಪಿಂಗ್‌ನ ಅನುಭವ ಪಡೆಯಲು ಈ ಮೇಳ ಸೂಕ್ತ ಆಯ್ಕೆಯಾಗಿರಲಿದೆ ಎಂದು ಹೇಳಿದರು.

English summary
South Indian film actress Kaashima Rafi today Inaugurated Chittara - Arts, Craft, Handloom & Exhibition at Chitrakala Parishad. The Mela will is on till March 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X