ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡದಲ್ಲಿ ಹಾಡಲು 84 ವರ್ಷ ಕಾದೆ: ಆಶಾ ಭೋಂಸ್ಲೆ ಮನದಾಳದ ಮಾತು

By Nayana
|
Google Oneindia Kannada News

ಬೆಂಗಳೂರು, ಜೂನ್ 8: ನನಗೆ ಕನ್ನಡ ಚಿತ್ರಗೀತೆಯಲ್ಲಿ ಹಾಡಲು ಮೊದಲಿನಿಂದಲೂ ಮನಸಿತ್ತು. ಆದರೆ ಕನ್ನಡ ಕನ್ನಡ ಚಿತ್ರವೊಂದರಲ್ಲಿ ಹಾಡಲು 84 ವರ್ಷಗಳ ಕಾಲ ಕಾಯುವಂತಾಯಿತು ಎಂದು ಭಾರತೀಯ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಮನದಾಳ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ರಾತ್ರಿ ನಡೆಯಲಿರುವ ಸೌಂಡ್‌ ಆಫ್‌ ಟಾಲೆಂಟ್ ಸಂಗೀತೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 84 ವರ್ಷಗಳ ಬಳಿಕ ಕನ್ನಡ ಚಿತ್ರಗೀತೆಯೋಮದರಲ್ಲಿ ಹಾಡಲು ಅವಕಾಶ ಸಿಕ್ಕಿದ್ದು ನ್ನ ಸೌಭಾಗ್ಯ. ಆದರೆ ಇಷ್ಟು ವರ್ಷಗಳ ಕಾಲ ಯಾವುದೇ ಕನ್ನಡದ ನಿರ್ದೇಶಕರು ಹಾಡಲು ಆಹ್ವಾನ ನೀಡಲಿಲ್ಲ ಎನ್ನುವುದೇ ಸೋಜಿಗದ ಸಂಗತಿ.

ಕನ್ನಡ ಹಾಡಿಗೆ ಮತ್ತೆ ಧ್ವನಿಯಾದ ಆಶಾ ಭೋಂಸ್ಲೆ

ತಮಿಳು, ಮಲಯಾಳಂ, ತೆಲುಗು ಭಾಷೆಯಲ್ಲಿ ಹಾಡಿದ್ದೆನಾದರೂ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎರಡು ಮೂರು ಗೀತೆಗಳನ್ನಷ್ಟೇ ಹಾಡಿದ್ದೇನೆ ಎಂದು ಕನ್ನಡ ಚಿತ್ರರಂಗದಿಂದ ತಾವು ಬಹುಕಾಲ ದೂರ ಉಳಿಯಲು ಕಾರಣವನ್ನು ವಿವರಿಸಿದರು.

Sound of silent with legendary Asha Bhosle

ನಾಣು ದೇವರಲ್ಲ ಎಲ್ಲರಂತೆ ನಾನು, ಹಿಂದೊಮ್ಮೆ ಪುಟ್ಪರ್ತಿಗೆ ಹೋಗುವ ಸಂದರ್ಭದಲ್ಲಿ ನನ್ನ ತಾಯಿ ಜೊತೆ ಬೆಂಗಳೂರಿಗೆ ಬಂದು ಇಲ್ಲಿಂದ ಪುಷ್ಪರ್ತಿಗೆ ತೆರಳಿದ್ದೆ, ಆಗ ಇದ್ದ ಬೆಂಗಲೂರಿಗೂ, ಈಗ ಇರುವ ಬೆಂಗಳೂರಿಗೂ ಸಾಕಷ್ಟು ಬದಲಾವಣೆ ಇದೆ ಎಂದು ಬೆಂಗಳೂರಿನ ಜತೆಗಿರುವ ತಮ್ಮ ಒಡನಾಟವನ್ನು ಹಂಚಿಕೊಂಡರು.

ಪ್ರಸ್ತುತ ಚಲನಚಿತ್ರ ಸಂಗೀತ ಕುರಿತಾಗಿ ವಿಶ್ಲೇಷಿಸಿದ ಅವರು, ಪ್ರಸ್ತುತ ಹಾಡುಗಳು ಕೇವಲ ನೃತ್ಯಕ್ಕೆ ಸೀಮಿತವಾಗಿದ್ದು, ಅವುಗಳ ಸಾಹಿತ್ಯ ನೆನಪಿಗೆ ಹೊಳಯುವುದೇ ಇಲ್ಲ, ಹಿಂದೆ ಸಾಹಿತ್ಯವೂ ನೆನಪಿನಲ್ಲುಳಿದೂ ಆ ಗೀತೆಯಿಂದಲೇ ಚಿತ್ರವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದೆವು, ಆದರೆ ಈಗ ಕಾಲ ಬದಲಾಗಿದೆ ಹೀಗಾಗಿಯೇ ಅಂತ್ಯಾಕ್ಷರಿ ಹಾಡುವ ಸಂದರ್ಭದಲ್ಲಿ ಹಳೆಯ ಹಾಡುಗಳೇ ತಟ್ಟನೆ ನೆನಪಿಗೆ ಬರುತ್ತವೆ ಹೊಸ ಗೀತೆಗಳು ನೆನಪಿಗೆ ಬರುವುದಿಲ್ಲ ಎಂದು ಚಲನಚಿತ್ರ ಸಂಗೀತ ಪ್ರಾಮುಖ್ಯತೆಯನ್ನು ವಿವರಿಸಿದರು.

ಆಸಾ ಭೋಸ್ಲೆ ಅವರು ಶನಿವಾರ ಸಂಜೆ ಸೌಂಡ್ ಆಫ್‌ ಟಾಲೆಂಟ್ ವೈಟ್‌ ಫೀಲ್ಡ್ ಫೀನಿಕ್‌ ಮಾರ್ಕೆಟ್‌ ಸಿಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರಗೀತೆಯನ್ನು ಪ್ರಸ್ತುತಪಡಿಸಲಿದ್ದಾರೆ.

English summary
Legendary singer Asha Bhosle will perform Sound of silent old songs performance at Phoenix market city in White field on June 9, Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X