ಬೆನಡ್ರಿಲ್ ಬಿಗ್ ಗೋಲ್ಡನ್ ವಾಯಿಸ್ ಸ್ಪರ್ಧೆಗೆ ಸೋನು ಜಡ್ಜ್
ಬೆಂಗಳೂರು, ಡಿಸೆಂಬರ್ 07: ಬಿಗ್ ಎಫ್ ಎಂ ನ ಅತಿ ನಿರೀಕ್ಷತ ಹಾಡುಗಾರಿಗೆಯ ಪ್ರತಿಭೆ ಅನ್ವೇಷಣೆಯ 'ಬೆನಡ್ರಿಲ್ ಬಿಗ್ ಗೋಲ್ಡನ್ ವಾಯ್ಸ್' ಆರನೇ ಋತುವನ್ನು ಕೆಮ್ಮಿನ ಸಿರಪ್ ಬೆನಡ್ರಿಲ್ ಆಯೋಜಿಸಿದೆ. ಇದು ರಾಷ್ಟ್ರದಾದ್ಯಂತ ಎಲೆಮರೆಯಲ್ಲಿರುವ ಪ್ರತಿಭೆಗಳನ್ನು ಹೊರತರುವ ಗುರಿ ಹೊಂದಿದೆ.
ಖ್ಯಾತ ಗಾಯಕ ಸೋನು ನಿಗಂ ಅವರು ಭಾಗವಹಿಸುವವರಿಗೆ ಮಾರ್ಗದರ್ಶನ ನೀಡಲಿದ್ದಾರೆ ಮತ್ತು ಅಂತಿಮ ಹಂತದ ತಯಾರಿಯಲ್ಲಿ ಜೊತೆಯಾಗಿ ಪ್ರತಿಭೆಗಳಿಗೆ ಸಲಹೆ ನೀಡಲಿದ್ದಾರೆ. ಈ ಬಾರಿ 6 ನೇ ಆವೃತ್ತಿಯಲ್ಲಿ 'ಸುರ್ ಬನೆ ಹುಮಾರೆ' ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿದೆ. ಇದು ನಮ್ಮ ದೇಶದ ವೈವಿಧ್ಯಮಯ ಸಂಗೀತ ಲೋಕವನ್ನು ವಿಭಿನ್ನ ರೀತಿಯಲ್ಲಿ ಸೆರೆಹಿಡಿಯಲಿದೆ.
ಸೋನು ನಿಗಂ ಅವರು ಪ್ರತಿಭಾನ್ವಿತ ಉದಯೋನ್ಮುಖ ಗಾಯಕರಿಗೆ ಬೆನೆಡ್ರಿಲ್ ಬಿಗ್ ಗೋಲ್ಡನ್ ವಾಯ್ಸ್ ನ ಸೀಸನ್ 6ಕ್ಕೆ ಡಿಸೆಂಬರ್ 16, 2018 ರೊಳಗೆ ಹಾಡುಗಳನ್ನು ಕಳುಹಿಸಲು ಕೇಳಿಕೊಂಡಿದ್ದಾರೆ.

ಇತ್ತೀಚಿನ ಕೆಲ ವರ್ಷಗಳ ಹಿಂದೆ ಇದ್ದ ಸಂಗೀತದ ಪ್ರತಿಭೆ ಹುಡುಕಾಟ ಎಂಬುದೀಗ 'ಟ್ಯಾಲೆಂಟ್ ಶೋ' ಎಂಬ ಹೆಸರು ಪಡೆದುಕೊಂಡಿದೆ. ಪ್ರಾರಂಭದಲ್ಲಿಯೇ ಭಾಗವಹಿಸುವವರು ವೇದಿಕೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ.
ಹಿಂದಿನ ಆವೃತ್ತಿಯಲ್ಲಿ ಸ್ಪರ್ಧಿಗಳು ಈ ವೇದಿಕೆಯನ್ನು ಡಿಜಿಟಲ್ ಪ್ಲಾಟ್ ಫಾರ್ಮ್ ಆಗಿ ಬದಲಿಸಿಕೊಂಡಿದ್ದರು. ಟಾಪ್ 10 ಸ್ಪರ್ಧಿಗಳು ವೆಬ್ಸೋಡ್ ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆದಿದ್ದರು. ಈ ವರ್ಷ ಕೂಡಾ, 'ಬೆನಡ್ರಿಲ್ ಬಿಗ್ ಗೋಲ್ಡನ್ ವಾಯ್ಸ್' ಸೋನ ನಿಗಮ್ ಅವರ ಉಪಸ್ಥಿತಿ ಮತ್ತು ಪ್ರಾದೇಶಿಕ ಸಂಗೀತದೊಂದಿಗೆ ಕಾರ್ಯಕ್ರಮ ರಸವತ್ತಾಗಿ ಮೂಡಿ ಬರಲಿದೆ.
ಅನೇಕ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು, ಸ್ಥಳೀಯ ಮಟ್ಟದ ಮಟ್ಟದ ಧ್ವನಿ ಪರೀಕ್ಷೆಯ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಕಾರ್ಯಕ್ರಮದ 'ಟಾಪ್ 10' ಮಂದಿಯನ್ನು ಆಯ್ಕೆ ಮಾಡುವ ಮುನ್ನ, ತೀರ್ಪುಗಾರರ ಕಾಮೆಂಟ್ ಗಳನ್ನು ವಿಜೇತರ ಧ್ವನಿಯನ್ನೂ ಪ್ರಸಾರ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬೆಂಗಳೂರಿಗರು ತಮ್ಮ ಮಾಹಿತಿಯನ್ನು ಫೇಸ್ ಬುಕ್ ಮೂಲಕವೂ ಕಳುಹಿಸಬಹುದು.












Click it and Unblock the Notifications