ನನ್ನಿಂದ ಬೆಳೆದ ನಾಯಕರು ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ: ಕುಮಾರಸ್ವಾಮಿ
ಬೆಂಗಳೂರು, ನವೆಂಬರ್ 22: ನನ್ನಿಂದ ಬೆಳೆದ ನಾಯಕರು ಸ್ವಾರ್ಥ ರಾಜಕೀಯ ಮಾಡ್ತಾ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಗಿರೀಶ್ ನಾಶಿ ಅವರ ಪರವಾಗಿ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಪ್ರಚಾರ ನಡೆಸಿದ್ ಕುಮಾರಸ್ವಾಮಿ ನಮ್ಮಿಂದ ಬೆಳೆದ ಹಲವು ನಾಯಕರು ಇದೀಗ ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ. ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತಿದ್ದಾರೆ.
ರಾಜಜಣ್ಣ ಮಹಾಲಕ್ಷ್ಮಿ ಲೇಔಟ್ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮೊದಲಿನಿಂದ ಮಾಡುತ್ತಿದ್ದರು. ಈ ಕ್ಷೇತ್ರದ ನಾಯಕ ರಾಜಣ್ಣ ನಂಗಿಂತಲೂ ಹಿರಿಯರು.ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಅಂದುಕೊಂಡಿದ್ದೆವು. ಪಕ್ಷದ ಎಲ್ಲಾ ನಾಯಕರ ಜತೆ ಚರ್ಚೆ ಮಾಡಿ ಗಿರೀಶ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

ಸದಾನಂದಗೌಡರು ಬೆವರು ಸುರಿಸಿ ರಾಜಕೀಯ ಮಾಡುತ್ತಿಲ್ಲ
ಸದಾನಂದಗೌಡರು ಬೆವರು ಸುರಿಸಿ ರಾಜಕೀಯ ಮಾಡುತ್ತಿಲ್ಲ, ಸದಾನಂದಗೌಡರು ಕಷ್ಟ ಪಟ್ಟು ಅಧಿಕಾರಕ್ಕೆ ಬಂದಿಲ್ಲ.. ಮೋದಿಯವರ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಇವರು, ಅವರ ತರಾ ಯಾರ್ದೊ ಹೇಸರ ಹೇಳಿ ರಾಜಕೀಯ ಮಾಡ್ತಾ ಇಲ್ಲ ಎಂದು ಹೇಳಿದರು.

ಯಡಿಯೂರಪ್ಪ ಅವರಿಗೆ ಚುನಾವಣೆ ಬಗ್ಗೆ ಆತಂಕವಿದೆ
ಯಡಿಯೂರಪ್ಪ ಅವರಿಗೆ ಚುನಾವಣೆ ಬಗ್ಗೆ ಆತಂಕವಿದೆ, ಹಾಗಾಗಿ ಮೊನ್ನೆ ನಡೆದ ಕ್ಯಾಬಿನೆಟ್ ಇದು ನನ್ನ ಕೊನೆಯ ಕ್ಯಾಬಿನೆಟ್ ಎಂದು ಹೇಳಿದ್ದರು.ನಿಮಗೂ ಕೊನೆ ಕ್ಯಾಬಿನೆಟ್ ಆಗಬಹುದು ಅಂತ ಯಾಕೆ ಹೇಳಿದ್ರು? ಅವರಿಗೆ ಎಷ್ಟೊಂದು ಆತಂಕ ಇದೆ ಅಂತ ಗೊತ್ತಾಗುತ್ತೆ ಎಂದರು.ಲೋಕಸಭಾ ಚುನಾವಣಾ ಲೆಕ್ಕಾಚಾರದಲ್ಲಿ ಈ ಬಾರಿಯೂ 15 ಕ್ಷೇತ್ರದಲ್ಲಿ ಗೆಲ್ತೇವೆ ಅಂತ ಹೇಳಿದ್ದು ಏನಾಗುತ್ತೆ ಅಂತ 9ನೇ ತಾರೀಖಿನಂದು ಗೊತ್ತಾಗುತ್ತೆ ಎಂದು ಹೇಳಿದರು.

ಡಿಎಸ್ ಸ್ಟಾರ್ ಪ್ರಚಾರಕರ ಕುರಿತು ಹಾಸ್ಯ
ನಮ್ಮ ಕುಟುಂಬದಿಂದ 8 ಸ್ಟಾರ್ ಪ್ರಚಾರಕರು ಆಗಿದ್ದಕ್ಕೆ ಕೆಲವು ಟೀಕೆ ಮಾಡುತ್ತಿದ್ದಾರೆ. ಆದರೆ ನಿನ್ನೆ ನಾನು ಹುಣಸೂರಿಗೆ ಹೋದಾಗ ಜನರೇ ನಿಖಿಲ್ ಅವರನ್ನು ಕಳುಹಿಸಿ ಎಂದು ಹೇಳಿದ್ದಾರೆ. ಜನರು ಬಯಸಿದ್ದಾರೆ, ನಾವಾಗಿಯೇ ಸ್ಟಾರ್ ಪ್ರಚಾರಕರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ
ಗೋಕಾಕ್ ಅಭ್ಯರ್ಥಿಗೆ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ಹಲವಾರು ಸಚಿವರು ಅಭ್ಯರ್ಥಿಯ ತಲೆ ಕೆಡಿಸಲು ಮುಂದಾಗಿದ್ದರು. ನಿನ್ನೆ ಸುಮಾರು ಮೂರು ಗಂಟೆಗಳ ಕಾಲಾಭ್ಯರ್ಥಿಯ ಮನೆಯಲ್ಲಿ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.











Click it and Unblock the Notifications