ಲೋಕಸಭಾ ಚುನಾವಣೆ : ಪ್ರಚಾರ ಆರಂಭಿಸಿದ ಎಸ್‌.ಎಂ.ಕೃಷ್ಣ

Recommended Video

      Lok Sabha Election 2019 : ಪ್ರಚಾರ ಆರಂಭಿಸಿದ ಎಸ್‌.ಎಂ.ಕೃಷ್ಣ

      ಬೆಂಗಳೂರು, ಮಾರ್ಚ್ 31 : ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರು ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದರು. ಡಿ.ವಿ.ಸದಾನಂದ ಗೌಡರ ಪರವಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅವರು ಮತಯಾಚನೆ ಮಾಡಿದರು.

      ಭಾನುವಾರ ರಾಜಾಜಿನಗರದ ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆ ಎಸ್‌.ಎಂ.ಕೃಷ್ಣ, ಡಿ.ವಿ.ಸದಾನಂದ ಗೌಡ ಅವರು ಸಂವಾದ ನಡೆಸಿದರು. ಬ್ರಿಗೇಡ್ ಗೇಟ್ ವೇ, ರೆನಾಸೆನ್ಸ್ ಪಾರ್ಕ್ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

      'ಇದು ಮಹತ್ವದ ಚುನಾವಣೆಯಾಗಿದೆ. ಕಳೆದ 5 ವರ್ಷಗಳಲ್ಲಿ ನಮ್ಮ ದೇಶ ನಡೆದು ಬಂದಿರುವ ದಾರಿಯನ್ನು ನೋಡಿದಾಗ ಸಮಾಧಾನ, ಸಂತೋಷ ತಂದುಕೊಟ್ಟಿದೆ. ಈ ರಾಷ್ಟ್ರಕ್ಕೆ ಒಬ್ಬ ಬಲಿಷ್ಠ ವ್ಯಕ್ತಿ ಪ್ರಧಾನಿ ಆಗಬೇಕು ಎಂದಾಗ ಗುಜರಾತ್‌ನಿಂದ ನರೇಂದ್ರ ಮೋದಿ ಬಂದರು. ಅಲ್ಲಿಯ ವರೆಗೂ ಬಲಿಷ್ಠ ಪ್ರಧಾನಿ ಎಂದರೆ ಏನು ಅನ್ನುವುದುದಕ್ಕೆ ದೇಶಕ್ಕೆ‌ತಿಳಿದಿರಲಿಲ್ಲ' ಎಂದರು.

      'ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುನ್ನ ಹಲವಾರು ಹಗರಣಗಳು ದೇಶದ ಜನತೆಯನ್ನು ಕಾಡುತ್ತಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಸ್ವ ಇಚ್ಛೆಯಿಂದ ಏನು ಬೇಕಾದ್ರು ಮಾಡಬಹುದು ಎಂಬ ಭಾವನೆ ಮೂಡಿತ್ತು. ಹೀಗಾಗಿ ದೇಶಕ್ಕೆ ಭದ್ರ ನಾಯಕತ್ವ ಬೇಕು ಎಂದು ಜನ ತೀರ್ಮಾನಿಸಿದರು' ಎಂದು ಹೇಳಿದರು.

      ಮೋದಿ ನಾಯಕತ್ವವನ್ನು ಕೊಟ್ಟರು

      ಮೋದಿ ನಾಯಕತ್ವವನ್ನು ಕೊಟ್ಟರು

      'ಮೋದಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟರು. ಮೋದಿ ಅವರ ವಿರುದ್ಧ ತೀವ್ರವಾದ ಟೀಕಾಕಾರರು ಇದ್ದರು. ಈಗ ದೇಶದಲ್ಲಿ ಎಲ್ಲರೂ ಮೋದಿ ಮೋದಿ ಎನ್ನುವಂತಾಗಿದೆ. ಮೋದಿ ಅವರ ದೃಷ್ಟಿ ಈ ದೇಶ ಬಲಿಷ್ಠ ವಾಗಿ ಹೊರ ಹೊಮ್ಮಬೇಕು ಅನ್ನುವುದಾಗಿದೆ. ಅಂತಹ ನಾಯಕತ್ವವನ್ನು ಮೋದಿ ಕೊಟ್ಟರು' ಎಂದು ಎಸ್.ಎಂ.ಕೃಷ್ಣ ಹೇಳಿದರು.

      ಕುಟುಂಬ ರಾಜಕಾರಣ ವಿರೋಧಿಸಿದೆ

      ಕುಟುಂಬ ರಾಜಕಾರಣ ವಿರೋಧಿಸಿದೆ

      'ನಾನು ಮೊದಲಿನಿಂದಲೂ ವಂಶಪಾರಂಪರ್ಯ ಅಧಿಕಾರವನ್ನು ವಿರೋಧಿಸಿಕೊಂಡು ಬಂದೆ. ಆಡಳಿತ ನಡೆಸುವುದಕ್ಕೆ ಅರ್ಹತೆ ಇಲ್ಲದಿದ್ದರು, ನಾನು ಆ ವಂಶದಲ್ಲಿ ಹುಟ್ಟಿದೆ. ಹೀಗಾಗಿ ನಾನು ದೇಶ ಆಳುತ್ತೇನೆ ಎನ್ನುವುದನ್ನು ಒಪ್ಪುವುದಕ್ಕೆ ಸಾಧ್ಯವಾಗದ ಮಾತು. ಕೆಲವರಿಗೆ ಸಂಸಾರವೇ ರಾಷ್ಟ್ರ. ಆದರೆ, ನನಗೆ ರಾಷ್ಟ್ರವೇ ಸಂಸಾರ ಅನ್ನೋದು ಮೋದಿ ಅವರ ಮಾತು' ಎಂದರು.

      ತಲೆ ಎತ್ತಿ ಓಡಾಡೋಣ

      ತಲೆ ಎತ್ತಿ ಓಡಾಡೋಣ

      'ಜನರ ಮಧ್ಯೆ ಎಲೆ ಎತ್ತಿ ಓಡಾಡೋಣ. ನರೇಂದ್ರ ಮೋದಿ ಅವರು 5 ವರ್ಷಗಳಲ್ಲಿ ಒಂದು ಹಗರಣ ಇಲ್ಲದಂತೆ ದೇಶಕ್ಕೆ ಆಡಳಿತ ಕೊಟ್ಟಿದ್ದಾರೆ. ಆರ್ಥಿಕ ವ್ಯವಸ್ಥೆಯಲ್ಲಿ ದೇಶ ಇವತ್ತು ಚೈನಾಗೆ ಪೈಪೋಟಿ ನೀಡುತ್ತಿದೆ. ಅದಕ್ಕೆ ಮೋದಿ ಅವರ ತಪಸ್ಸು ಕಾರಣ' ಎಂದು ಎಸ್‌.ಎಂ.ಕೃಷ್ಣ ಹೇಳಿದರು.

      ಆರೋಪಗಳನ್ನು ಮಾಡಿದರು

      ಆರೋಪಗಳನ್ನು ಮಾಡಿದರು

      'ಕಾಂಗ್ರೆಸ್ ನಾಯಕರು ಸಾಕಷ್ಟು ಆರೋಪಗಳನ್ನು ಮಾಡಿದರು. ಆದರೆ, ಅವರ ಆರೋಪದಲ್ಲಿ ಸತ್ವ, ಸತ್ಯ ಎರಡೂ ಇಲ್ಲ. ಹೀಗಾಗಿ ಆರೋಪಗಳು ಬರುತ್ತವೆ ಹೋಗುತ್ತವೆ ಅವು ಲೆಕ್ಕಕ್ಕೆ ಇಲ್ಲ. ಈ ವಿಚಾರ ಚುನಾವಣಾ ಸಂದರ್ಭದಲ್ಲಿ ಚರ್ಚೆ ಆಗಬೇಕಿತ್ತು. ಆದರೆ, ಅವರಿಗೆ ಲೇಟಾಗಿ ತಿಳಿದು ಬಂದಿದೆ. ಅವರು ಆಗದ, ಹೋಗಾದ ಕಾರ್ಯಕ್ರಮಗಳನ್ನು ಜನರಿಗೆ ಕೊಡೊದಾಗಿ ಹೇಳುತ್ತಿದ್ದಾರೆ. ಅವರಿಗೂ ಗೊತ್ತು ಅಧಿಕಾರಕ್ಕೆ ಬರುವುದಿಲ್ಲ' ಎಂದು ಭವಿಷ್ಯ ನುಡಿದರು.

      ಹಿಂದಿನ ಚುನಾವಣೆ

      ಹಿಂದಿನ ಚುನಾವಣೆ

      'ಹಿಂದಿನ ಚುನಾವಣೆಗಳು ಪ್ರಣಾಳಿಕೆ ಮೇಲೆ ನಡೆಯುತ್ತಿತ್ತು. ಭರವಸೆಗಳ ಮೇಲೆ ಚುನಾವಣೆ ನಡೆಯುತ್ತಿದ್ದುವು. ಆದರೆ, ಈಗ ಮೋದಿ ಅವರು ನಾನು ಕೊಟ್ಟಿರುವ ಆಡಳಿತದ ಮೇಲೆ ನಾವು ಮತ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ' ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+