ಕೇರಳ ಪ್ರವಾಹ: 6 ಸಾವಿರ ರೈಲ್ವೆ ಟಿಕೆಟ್ ಕ್ಯಾನ್ಸಲ್
ಬೆಂಗಳೂರು, ಆಗಸ್ಟ್ 17: ಕಳೆದ ಎರಡು ವಾರಗಳಿಂದ ಕೇರಳ, ಕರಾವಳಿ, ಕೊಡಗು ಭಾಗಗಳಲ್ಲಿ ಮುಂಗಾರು ಚುರುಕಾಗಿ ಪ್ರವಾಹ ಸೃಷ್ಟಿಸಿರುವ ಕಾರಣ ಕಳೆದ ಮೂರು ದಿನಗಳಿಂದ ಒಟ್ಟು 6 ಸಾವಿರ ಕೇರಳ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿದ್ದಾರೆ.
ರೈಲ್ವೆ ಇಲಾಖೆಯು ಇದರಿಂದ ನಷ್ಟ ಅನುಭವಿಸಿದ್ದು, 29 ಲಕ್ಷ ಹಣವನ್ನು ಹಿಂದಿರುಗಿಸಬೇಕಿದೆ.ಈ ವಾರ ಎಲ್ಲಾ ಟಿಕೆಟ್‌ಗಳು ರದ್ದಾಗುವ ಸಾಧ್ಯತೆಗಳಿವೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ವಿಜಯ ಮಾತನಾಡಿ, ಆಗಸ್ಟ್ 14ರಿಂದ 16ರವರೆಗೆ 6,457 ಮಂದಿ ಟಿಕೆಟ್ ರದ್ದುಗೊಳಿಸಲಾಗಿದೆ. ಬೆಂಗಳೂರು-ಕನ್ಯಾಕುಮಾರಿ, ಯಶವಂತಪುರ-ಕೊಚುವೇಲಿ, ಯಶವಂತಪುರ-ಕೊಚುವೇಲಿ ಎಸಿ ಎಕ್ಸ್‌ಪ್ರೆಸ್, ಬೆಂಗಳೂರು-ಎರ್ನಾಕುಲಮ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ 29,01,296 ಲಕ್ಷ ಹಣವನ್ನು ಹಿಂದಿರುಗಿಸಬೇಕಿದೆ.

ಹಲವಾರು ಕೇರಳ ಪ್ರಯಾಣಿಕರು ಬಸ್ ಹಾಗೂ ರೈಲು ಪ್ರಯಾಣವನ್ನು ನಿರಾಕರಿಸಿದ್ದಾರೆ, ವಿಮಾನದಲ್ಲಿ ತೆರಳುವ ಕುರಿತು ಆಲೋಚಿಸುತ್ತಿದ್ದಾರೆ.ಎಷ್ಟೋ ಮಂದಿ ಶುಭ ಸಮಾರಂಭಗಳಿಗಾಗಿ ಕೇರಳಕ್ಕೆ ತೆರಳಿದ್ದಾರೆ ಮರಳಿ ಬೆಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ, ಮೊಬೈಲ್ ಟವರ್‌ಗಳಿಗೂ ಹಾನಿ ಉಂಟಾಗಿದೆ ಹೀಗಾಗಿ ಯಾರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅಲ್ಲಿನ ಜನರ ಅಳಲಾಗಿದೆ.












Click it and Unblock the Notifications