ರಾಜ್ಯದ ಅಕ್ರಮ ಗಣಿಗಾರಿಕೆ ತನಿಖೆ ಎಸ್ಐಟಿ ಹೆಗಲಿಗೆ
ರಾಜ್ಯದ ಏಳು ಅಕ್ರಮ ಗಣಿಗಾರಿಕೆ ಪ್ರಕರಣಗಳು ಎಸ್ ಐಟಿ ಹೆಗಲಿಗೆ. ರಾಜ್ಯ ಸಚಿವ ಸಂಪುಟದ ನಿರ್ಧಾರ. ಲೋಕಾಯುಕ್ತ ನೀಡಿದ್ದ 2 ವರದಿಯಲ್ಲಿನ ಪ್ರಕರಣಗಳು ಎಸ್ ಐಟಿಗೆ. ಜಂತಕಲ್ ಮೈನಿಂಗ್ ಕೂಡಾ ಎಸ್ ಐಟಿಗೆ ವರ್ಗಾವಣೆ.
ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಈವರೆಗೆ ನಡೆದಿರುವ ಎಲ್ಲಾ ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ವಹಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಬುಧವಾರ ಸಂಜೆ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ, ಲೋಕಾಯುಕ್ತ ಸಂಸ್ಥೆಯು ನೀಡಿದ್ದ 2 ವರದಿಗಳಲ್ಲಿನ ಎಲ್ಲಾ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಎಸ್ ಐಟಿಗೆ ವಹಿಸಲು ನಿರ್ಧರಿಸಲಾಗಿದೆ.

7 ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಎಸ್ಐಟಿಗೆ ವಹಿಸಲು ನಿರ್ಧರಿಸಲಾಯಿತು. ಇದರಲ್ಲಿ, ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣವೂ ಸೇರಿದೆ.












Click it and Unblock the Notifications