• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋದರಿಗೆ ತಪ್ಪು ಅರಿವಾಗಿದೆ, ಕ್ಷಮೆ ಕೇಳುವ ಅಗತ್ಯವಿಲ್ಲ; ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜುಲೈ 17: 'ಕೆರೂರಿನಲ್ಲಿ ಹಣ ಎಸೆದಿದ್ದಾರೆಂದು ಹೇಳಲಾದ ಸೋದರಿಗೆ ತನ್ನ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳುವ ಅಗತ್ಯ ಇರಲಿಲ್ಲ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಯ್ಯ ಹೇಳಿದ್ದಾರೆ.

ಸ್ವಕ್ಷೇತ್ರ ಬಾದಾಮಿ ಪ್ರವಾಸದ ಸಂದರ್ಭದಲ್ಲಿ ಕೆರೂರು ಗಲಭೆಯಲ್ಲಿ ಗಾಯಗೊಂಡಿದ್ದ ಕುಟುಂಬಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರಿಹಾರ ನೀಡಲು ಹೋಗಿದ್ದರು. ಆಗ ಸಿದ್ದರಾಮಯ್ಯನವರು ಕೊಟ್ಟ ಎರಡು ಲಕ್ಷ ರೂಪಾಯಿ ಹಣವನ್ನು ಮುಸ್ಲಿಂ ಮಹಿಳೆ ವಾಪಸ್ ಎಸೆದಿದ್ದಾರೆ. ಎಸೆದದ್ದು ಒಂದೆರಡು ರೂಪಾಯಿಯಲ್ಲ, ಎರಡು ಲಕ್ಷ ರೂಪಾಯಿ. ಮಹಿಳೆ ಆಕ್ರೋಶದಿಂದ ನಮಗೆ ದುಡ್ಡು ಬೇಡ, ರಕ್ಷಣೆ ಮತ್ತು ಶಾಂತಿ ಬೇಕು ಎಂದು ಹೇಳಿದ್ದರು.

ವಿಡಿಯೋವೊಂದರಲ್ಲಿ ಕ್ಷಮೆಯಾಚಿಸಿರುವ ಮಹಿಳೆ, ಹಣ ಕೈಜಾರಿ ಕೆಳಗೆ ಬಿದ್ದುಹೋಗಿದ್ದು ಬೇಕಂತ ಮಾಡಿದ ಕೆಲಸಲ್ಲ. ತಪ್ಪಾಗಿದ್ದರೇ ಕ್ಷಮಿಸಿ ಸಿದ್ದರಾಮಯ್ಯನವರೇ ಎಂದಿದ್ದಾರೆ. ಮುಂದುವರೆದದು ನಾವು ಬಯಸುವುದು ಇಷ್ಟೆ ನಮ್ಮ ಕರ್ನಾಟಕದಲ್ಲಿ ಎಲ್ಲರೂ ಒಟ್ಟಾಗಿ ಇರಲಿ, ಇಲ್ಲಿ ಶಾಂತಿ ನೆಲೆಸಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ಸಿದ್ದರಾಮಯ್ಯ, "ನಿನ್ನೆ ಕೆರೂರಿನಲ್ಲಿ ಹಣ ಎಸೆದಿದ್ದಾರೆಂದು ಹೇಳಲಾದ ಸೋದರಿಗೆ ತನ್ನ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳುವ ಅಗತ್ಯ ಇರಲಿಲ್ಲ. ತಮ್ಮ ಕುಟುಂಬದ ಮೇಲಿನ ಹಲ್ಲೆಯಿಂದ ನೊಂದ ಅವರ ಭಾವುಕ ಪ್ರತಿಕ್ರಿಯೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಎಲ್ಲರೂ ಒಂದಾಗಿ ಬಾಳಬೇಕೆಂದು ಮನವಿಮಾಡಿ ನನಗೆ ಶುಭ ಹಾರೈಸಿದ ಸೋದರಿಗೆ ಧನ್ಯವಾದಗಳು" ಎಂದಿದ್ದಾರೆ.

ಈ ಹಿಂದೆಯೂ ಘಟನೆ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, "ಬಾಗಲಕೋಟೆಯ ಕೆರೂರ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಗಲಭೆಯಲ್ಲಿ ಗಾಯಗೊಂಡವರು ಮತ್ತು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಘಟನೆಯ ಸುದ್ದಿ ಗೊತ್ತಾದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠರ ಜೊತೆ ಮಾತನಾಡಿ ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದೆ" ಎಂದಿದ್ದರು.

"ಗಲಭೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ರೂಪದಲ್ಲಿ ಒಂದಷ್ಟು ಹಣ ನೀಡಿದ್ದೆ. ಹಣ ಬೇಡ, ನ್ಯಾಯ ಕೊಡಿ ಎಂದು ನೊಂದ ಕುಟುಂಬದವರು ಕೇಳಿದ್ದಾರೆ. ಅವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವುದು ರಾಜ್ಯ ಬಿಜೆಪಿ ಸರ್ಕಾರದ ಕರ್ತವ್ಯವಾಗಿದೆ" ಎಂದು ಹೇಳಿದ್ದರು.

English summary
The sister realizes her mistake. There was no need to apologize said Badami Congress MLA and former chief minister Siddaramaiah on Kerur muslim woman issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X