ನಟ ದರ್ಶನ್‌ ಭೇಟಿ ಬಗ್ಗೆ ಪುಂಗಿದ ತುರುವನೂರು ಸಿದ್ಧರೂಢ: ಜೈಲಾಧಿಕಾರಿಗಳ ವರದಿಯಲ್ಲೇನಿದೆ ಗೊತ್ತಾ.?

Actor Darshan Thoogudeepa Case: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಸೇರಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ದರ್ಶನ್‌ನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ & ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ಇನ್ನು ಇದೆಲ್ಲದರ ನಡುವೆ ನಟ ದರ್ಶನ್‌ ಅವರನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದ ತುರವನೂರು ಸಿದ್ಧರೂಢನ ಸ್ಫೋಟಕ ಮಾಹಿತಿಯೊಂದು ಬಟಾ ಬಯಲಾಗಿದೆ.

ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ನಟ ದರ್ಶನ್‌ನನ್ನು ಭೇಟಿಯಾಗಿ ಅವರ ಬಳಿ ಮಾತುಕತೆ ನಡೆಸಿದ್ದೆ. ಈ ವೇಳೆ ದರ್ಶನ್‌ ಅವರು ತುಂಬಾ ಪಶ್ಚತಾಪ ಪಡುತ್ತಿದ್ದಾರೆ ಎಂದು ಸನ್ನಡತೆಯ ಮೇಲೆ ಜೈಲಿನಿಂದ ಹೊರಬಂದ ಚಿತ್ರದುರ್ಗ ಜಿಲ್ಲೆಯ ತುರುವನೂರಿನ ಸಿದ್ಧರೂಢ ಎಂಬುವವರು ಇತ್ತೀಚೆಗಷ್ಟೇ ಹೇಳಿದ್ದರು. ಆದರೆ ಇದೀಗ ದರ್ಶನ್ ಅವರನ್ನು ಸಿದ್ಧರೂಢ ಭೇಟಿ ಮಾಡಿಯೇ ಇಲ್ಲ ಎಂದು ಕಾರಾಗೃಹ ಇಲಾಖೆಗೆ ಜೈಲಾಧಿಕಾರಿಗಳು ವರದಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Siddharudha lied about meet actor Darshan in Parappana agrahara jail

ಅಲ್ಲದೆ ಮತ್ತೊಂದೆಡೆ ಇದೀಗ ದರ್ಶನ್‌ ಭೇಟಿ ಮಾಡಿ ಬಂದಿದ್ದೇನೆ ಎಂದು ಸಿದ್ಧರೂಢ ಹೇಳಿರುವ ಮಾತು ಏನಾದರೂ ಸುಳ್ಳಾದರೆ ಅವರಿಗೆ ಪೊಲೀಸರು ನೋಟಿಸ್‌ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸನ್ನಡತೆ ಆಧಾರಮ ಮೇಲೆ ಜೈಲಿನಿಂದ ಹೊರಗಡೆ ಬಂದ ಬಳಿಕ ಸಿದ್ದರೂಢ ಮಾಧ್ಯಮದವರ ಮುಂದೆ ಈ ಬಗ್ಗೆ ಹೇಳಿ ನೀಡಿದ್ದರು. ಬಳಿಕ ಈ ಬಗ್ಗೆ ಜೈಲಾಧಿಕಾರಿಗಳು ಚರ್ಚೆ ನಡೆಸಿದ್ದು, ಇದೀಗ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನು ಗಮನಿಸಿದರೆ, ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡರು ಎನ್ನುವ ಪರಿಸ್ಥಿತಿ ತುರುವನೂರು ಮೂಲದ ಸಿದ್ಧರೂಢನಿಗೆ ಬಂದೊದಗಿದೆ. ಸಿದ್ಧರೂಢ ದರ್ಶನ್‌ ಭೇಟಿ ಬಗ್ಗೆ ಕಾರಾಗೃಹ ಇಲಾಖೆಯಿಂದ ಬಳ್ಳಾರಿ ಮತ್ತು ಸೆಂಟ್ರಲ್ ಜೈಲಾಧಿಕಾರಿಗಳ ಬಳಿ ಕಾರಾಗೃಹ ಇಲಾಖೆ ವರದು ಕೇಳಿದ್ದು, ಎರಡೂ ಕಡೆ ಜೈಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ನೋಟೀಸ್ ನೀಡಲಾಗಿತ್ತು. ಇದೀಗ ನೋಟೀಸ್‌ ಉತ್ತರ ಸಿಕ್ಕಿದ್ದು, ಕಾರಾಗೃಹ ಇಲಾಖೆಗೆ ದರ್ಶನ್ ಭೇಟಿಗೆ ಸಿದ್ದರೂಢನನ್ನು ಬಿಟ್ಟೇ ಇಲ್ಲ ಎಂದು ವರದಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ಧರೂಢ ಹೇಳಿದ್ದೇನು?: ಕೊಲೆ ಪ್ರಕರಣದಲ್ಲಿ ಚಿತ್ರದುರ್ಗ, ಬಳ್ಳಾರಿ ಹಾಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿ ಸಿದ್ಧರೂಢ ಎಂಬುವವರು ಸನ್ನಡತೆಯ ಆಧಾರದ ಮೇಲೆ ಬಿಡುಗೊಂಡಿದ್ದರು. ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿ ಬಗ್ಗೆ ಮಾಧ್ಯಮದವರರೊಂದಿಗೆ ಮಾಹಿತಿ ಬಿಚ್ಚಿಟ್ಟಿದ್ದರು.

"ಸರ್ ನನ್ನ ಹೆಸರು ತುರುವನೂರು ಸಿದ್ದಾರೂಢ. ನಾನು ರೈತ ಕುಟುಂಬದಿಂದ ಬಂದಿದ್ದೇನೆ. ನಮ್ಮ ತಂದೆ ಗುತ್ತಿಗೆದಾರರಾಗಿದ್ದರು. ಕಾಮಗಾರಿ ಮಾಡುವ ಸಂದರ್ಭದಲ್ಲಿ ಇಂಜಿನಿಯರ್ ಒಬ್ಬರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇದರ ಬಗ್ಗೆ ನನ್ನ ತಂದೆ ಹಾಗೂ ಇಂಜಿನಿಯರ್ ನಡುವೆ ಜಗಳವಾಗುತ್ತದೆ. ಈ ಗಲಾಟೆ ಯಾಕೆ ಆಯ್ತು ಅಂತ ಇದುವರೆಗೂ ಗೊತ್ತಿಲ್ಲ. ಇಂಜಿನಿಯರ್ ಅವರು ನನ್ನ ತಂದೆಗೆ ಹೊಡೆಯುತ್ತಾರೆ. ತಂದೆಗೆ ಹೊಡೆದಾಗ ಮಕ್ಕಳಿಗೆ ಸಾಮಾನ್ಯವಾಗಿದೆ ಕೋಪ ಬರುತ್ತದೆ. ಆದ್ದರಿಂದ ದುಡುಕಿ ನಿರ್ಧಾರ ತೆಗೆದುಕೊಂಡುಬಿಟ್ಟೆ," ಎಂದಿದ್ದರು.

"ಆದರೆ ನಾನು ಅಷ್ಟು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು. ಸಾಯಿಸುವ ಹಕ್ಕು ಯಾರಿಗೂ ಇಲ್ಲ. ಇಂತಹ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಆದರೆ ಯಾವುದೇ ದಾರಿಯಿಲ್ಲದೆ, ಕಾನೂನು ಕೈಗೆ ತೆಗೆದುಕೊಂಡು ಜೈಲಿಗೆ ಹೋಗುತ್ತೇನೆ. ಸುಮಾರು 21 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಸನ್ನಡತೆಯ ಆಧಾರದ ಮೇಲೆ ಹೊರಗಡೆ ಬಂದಿದ್ದೇನೆ," ಎಂದು ತಿಳಿಸಿದ್ದರು.

ಇನ್ನು ಬಿಡುಗಡೆಗೂ ಮುನ್ನ ನಟ ದರ್ಶನ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅವರಲ್ಲಿ ಪಶ್ಚಾತ್ತಾಪ ಕಂಡು ಬಂತು ಎಂದು ಸಿದ್ಧಾರೂಢ ತಿಳಿಸಿದ್ದರು.

ನಾನು ದರ್ಶನ್ ಅವರ ಅಭಿಮಾನಿ ಅಂತಾ ಇದನ್ನು ಹೇಳುತ್ತಿಲ್ಲ. ನಿಜವಾಗಲೂ ದರ್ಶನ್ ಅವರು ಜೈಲಿನಲ್ಲಿ ಪ್ರತಿಕ್ಷಣವೂ ಪಶ್ಚಾತ್ತಾಪ ಪಡುತ್ತಿದ್ದಾರೆ. ದರ್ಶನ್ ಅವರ ಮುಖ, ಕಣ್ಣಲ್ಲಿ ಪಶ್ಚಾತ್ತಾಪವೇ ಕಾಣುತ್ತಿದೆ. ಪ್ರತಿ ಕ್ಷಣವೂ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಕ್ಷಮೆಯಾಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ದರ್ಶನ್‌ ಅವರು ದೇವರು ಅವಕಾಶ ಕೊಟ್ಟರೆ, ರೇಣುಕಾಸ್ವಾಮಿ ಸ್ವಾಮಿ ಕುಟುಂಬದವರ ಎಲ್ಲರ ಕಾಲಿಗೆ ಬೀಳುತ್ತೇನೆ ಅಂತಾ ಹೇಳಿದ್ದಾರೆ ಎಂದು ಸಿದ್ಧರೂಢ ಹೇಳಿದ್ದರು.

ಅಲ್ಲದೆ, ದರ್ಶನ್ ಅವರಿಗೆ ನೀಡಿರುವ ಕೊಠಡಿ ಬಗ್ಗೆ ಏನೇನು ಸೌಲಭ್ಯ ಕಲ್ಪಿಸಿದ್ದಾರೆ ಎನ್ನುವುದರ ಬಗ್ಗೆ ತಿಳಿಸಿದ್ದರು. ದರ್ಶನ್ ಅವರಿಗೆ ಏನಾದರೂ ಸೌಲಭ್ಯ ಬೇಕೆಂದಲ್ಲಿ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿ, ತರಿಸಿಕೊಳ್ಳುತ್ತಿದ್ದರು. ಯಾವುದೇ ರೀತಿಯ ವಿಐಪಿ ವ್ಯವಸ್ಥೆ ಕಲ್ಪಿಸಿಲ್ಲ ಎಂದರು. ನಾನು ಹನುಮಂತ ಸರ್, ಪುರುಷೋತ್ತಮ ಹಾಗೂ ರಮೇಶ್ ಗುರುಗಳಿಂದ ಕಲಿತ ಹಾಲಪಾನ ಧ್ಯಾನವನ್ನು ಅವರಿಗೆ ಹತ್ತು ನಿಮಿಷ ಧ್ಯಾನ ಕಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ನಾನು ಜೈಲಿನಲ್ಲಿ ಇದ್ದುಕೊಂಡು ಪುಸ್ತಕ ಕೂಡ ಬರೆದಿದ್ದೇನೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+