ಪ್ರತಿಭಟನಾಕಾರರಿಗೆ ಸಿದ್ದರಾಮಯ್ಯ ಹೆದರಿದ್ದರು ಎಂದ ಡಿಕೆ ಶಿವಕುಮಾರ್
ಬೆಂಗಳೂರು, ಜೂನ್ 28: 2017ರಲ್ಲಿ ಹೆಬ್ಬಾಳ ಉಕ್ಕಿನ ಮೇಲ್ಸೇತುವೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಭಟನಾಕಾರರ ಭಯವಿತ್ತು. ಆದರೆ ತಾವರಾಗಿದ್ದರೆ ಪ್ರತಿಭಟನೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 2017ರಲ್ಲಿ ಉಕ್ಕಿನ ಮೇಲ್ಸೇತುವೆ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಮತ್ತು ಕೆಜೆ ಜಾರ್ಜ್ (ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವ) ಪ್ರತಿಭಟನೆಗೆ ಹೆದರಿದ್ದರು. ಅದೇ ನಾನಾಗಿದ್ದರೆ ಪ್ರತಿಭಟನಕಾರರ ಧ್ವನಿಗೆ ನಾನು ಬಗ್ಗುತ್ತಿರಲಿಲ್ಲ. ಅದರ ಪರಿಣಾಮ ಏನಾಗಿದ್ದರೂ ಯೋಜನೆಯೊಂದಿಗೆ ಮುಂದುವರಿಯುತ್ತಿದ್ದೆ ಎಂದು ಹೇಳಿದರು.

ತಮ್ಮ ಈಗಿನ ಸರ್ಕಾರದ ಅವಧಿಯಲ್ಲಿ ಬೆಂಗಳೂರಿಗೆ ದೀರ್ಘಾವಧಿಯಲ್ಲಿ ಸಹಾಯ ಮಾಡುವ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸಹ ನಿರ್ವಹಿಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಸವೇಶ್ವರ ನಗರದಿಂದ ಹೆಬ್ಬಾಳದ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ಉಲ್ಲೇಖಿಸಿ ನಂತರ ಅದನ್ನು ರದ್ದುಗೊಳಿಸಲಾಯಿತು. 2017 ರಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದ್ದ ಕಾಂಗ್ರೆಸ್ ಉಕ್ಕಿನ ಮೇಲ್ಸೇತುವೆಯನ್ನು ಘೋಷಿಸಿದ ನಂತರ ನಿವಾಸಿಗಗಳಿಂದ ಹಿನ್ನಡೆಯನ್ನು ಪಡೆಯಿತು ಎಂದರು.
6.7 ಕಿಲೋಮೀಟರ್ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ಹೆಬ್ಬಾಳ ಪ್ರದೇಶದ ದಟ್ಟಣೆಯನ್ನು ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ. ವಿಶೇಷವಾಗಿ ಕೇಂದ್ರ ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಬಯಸುವವರಿಗೆ ಅನುಕೂಲವಾಗುತ್ತದೆ. ಈ ಯೋಜನೆಯು ಉದ್ಯಾನನಗರಿಯ ಹಸಿರು ಹೊದಿಕೆಗೆ ಧಕ್ಕೆಯಾಗುತ್ತದೆ. ಈ ಯೋಜನೆಯಿಂದ ಇದು ಪ್ರದೇಶದಲ್ಲಿ ನೂರಾರು ಮರಗಳನ್ನು ಕಡಿಯಲು ಕಾರಣವಾಗಬಹುದು ಎಂದು ಪ್ರತಿಭಟನಾಕಾರರು ಹೇಳಿದ್ದರು. ಪರಿಸರ ಕಾಳಜಿಯ ಕಾರಣದಿಂದ ಯೋಜನೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಸರ್ಕಾರ ಘೋಷಿಸಿತ್ತು.
ಕೆಂಪೇಗೌಡ ಜಯಂತಿಯಲ್ಲಿ ಡಿಕೆಶಿ ಅವರು, ಕೆಂಪೇಗೌಡರು ಸಾಮಾಜಿಕವಾಗಿ, ಆರ್ಥಿಕವಾಗಿ ವ್ಯಾಪಾರ ವಹಿವಾಟು ಬಲಪಡಿಸುವ ಮೂಲಕ ಸರ್ವ ಧರ್ಮದವರ ಏಳಿಗೆಗೆ ಶ್ರಮಿಸಿ ಬೆಂಗಳೂರಿನ ಅಭಿವೃದ್ದಿಗೆ ಬುನಾದಿ ಹಾಕಿದ್ದರು. ಮಹನೀಯ ಕೆಂಪೇಗೌಡರು ಸಾಗಿದ ದಾರಿ ನಮ್ಮೆಲ್ಲರಿಗೂ ಮಾದರಿ. ಬೆಂಗಳೂರಿನ ಪ್ರಗತಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ.
ಬೆಂಗಳೂರಿನ ಅಭಿವೃದ್ಧಿಗೆ ಪ್ರತಿಯೊಬ್ಬರ ಸಲಹೆ ಸೂಚನೆಗಳು ಅಗತ್ಯ. ರಾಜಧಾನಿ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು, ಬೆಟರ್ ಬೆಂಗಳೂರು, ಗ್ಲೋಬಲ್ ಬೆಂಗಳೂರು ಮಾಡಲು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬೆಂಗಳೂರು ಗ್ಲೋಬಲ್ ಬೆಂಗಳೂರು ಆಗಿ ಮಾಡೋಣ ಎಂದು ತಿಳಿಸಿದರು.












Click it and Unblock the Notifications